Tuesday, February 4, 2025

Latest Posts

Political News: ಸಿಎಂ ಆಗುವ ಯೋಗವಿರುವ ಬಗ್ಗೆ ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಿಷ್ಟು

- Advertisement -

Gadag News: ಗದಗ: ಹೆಚ್.ಕೆ.ಪಾಟೀಲರಿಗೆ ಸಿಎಂ ಆಗುವ ಯೋಗವಿದೆ ಎಂದು ಭೋವಿ ಸಮಾಜದ ಸಿದ್ದರಾಮೇಶ್ವರ ಶ್ರೀಗಳು ಕೊಟ್ಟ ಹೇಳಿಕೆ ಬಗ್ಗೆ ಇಂದು ಗದಗದಲ್ಲಿ ಸಚಿವ ಹೆಚ್.ಕೆ.ಪಾಟೀಲ್ ಪ್ರತಿಕ್ರಿಯಿಸಿದರು.

ಶ್ರೀಗಳ ಶುಭ ಇಚ್ಛೆ, ಆಶೀರ್ವಾದ ಇರಬಹುದು. ಆದ್ರೆ, ಆ ವಿಚಾರ, ವಿಷಯದ ಬಗ್ಗೆ ಮಾತನಾಡಲ್ಲ. ನಾನು ನನ್ನ ರಾಜಕಾರಣದಲ್ಲಿ ನನ್ನ ನಿಲುವು ಏನಿದೆ ಅಂತ ಹತ್ತಾರು ಬಾರಿ ಹೇಳಿದ್ದೇನೆ. ಈ ಸಂದರ್ಭ ಬಹಳ ಸೂಕ್ಷ್ಮವಾದ ಕಾಲ. ಹೀಗಾಗಿ ನಾನು ಹಿಂಗೂ ಅನ್ನಂಗಿಲ್ಲ. ಹಂಗು ಅನ್ನಂಗಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲ್ಲ ಎಂದು ಹೇಳಿದ್ದಾರೆ.

ಡಿಕೆಶಿ ಮುಂದಿನ ಸಿಎಂ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಪಾಟೀಲರು,  ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತು ಪಕ್ಷದಲ್ಲಿ ಅಂತಿಮ. ಖರ್ಗೆ ಅವ್ರ ಮಾತು ಮೀರದ ನಡೆ ನಮ್ಮೆಲ್ರದ್ದೂ ಆಗಬೇಕು ಎಂದು ಕಾಂಗ್ರೆಸ್ ಶಾಸಕರು, ನಾಯಕರಿಗೆ ಹೆಚ್.ಕೆ.ಪಾಟೀಲರು ಸಲಹೆ ನೀಡಿದ್ದಾರೆ.

- Advertisement -

Latest Posts

Don't Miss