Tuesday, February 4, 2025

Latest Posts

ಮಂಡ್ಯದಲ್ಲಿ ಬಾಲಕಿಯ ಮೇಲೆ ಗ್ಯಾಂಗ್ ರೇ*: ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಂಸದೆ ಸುಮಲತಾ

- Advertisement -

Political News: ಮಂಡ್ಯದಲ್ಲಿ ಬಾಲಕಿಯ ಮೇಲೆ ಗ್ಯಾಂಗ್‌ ರೇಪ್ ಆಗಿದ್ದು, ಶಾಲೆಯ ಆವರಣದಲ್ಲೇ ಬಾಲಕಿಯನ್ನು ಮೂವರು ದುರುಳರು ರೇಪ್ ಮಾಡಿದ್ದಾರೆ. ಈ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಬೇಸರ, ಆಕ್ರೋಶ ಹೊರಹಾಕಿದ್ದಾರೆ.

ಮಂಡ್ಯದಲ್ಲಿ 8 ವರ್ಷದ ಬಾಲಕಿಯ ಮೇಲೆ ನಡೆದಿರುವ ಅಮಾನುಷ ಕೃತ್ಯ ಇಡೀ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ. ಹೆಣ್ಣು ಲಿಂಗ ಭ್ರೂಣ ಹತ್ಯೆಯ ಸಂಗತಿಯಿಂದ ಚೇತರಿಸಿಕೊಳ್ಳುವ ಮೊದಲೇ ಇಂತಹ ಒಂದು ಕುಕೃತ್ಯ ನಡೆದಿರುವುದು ವಿಪರ್ಯಾಸ.

ಅಪರಾಧಿಗಳಿಗೆ ಕಾನೂನು ಸುವ್ಯವಸ್ಥೆಯ ಬಗ್ಗೆ ಆತಂಕವೇ ಇಲ್ಲವೇ? ಎನ್ನುವ ಪ್ರಶ್ನೆ ಎದುರಾಗಿದೆ. ಹೆಣ್ಣು ಮಕ್ಕಳ ರಕ್ಷಣೆ ಕೇವಲ ಹೇಳಿಕೆಗೆ ಸೀಮಿತವಾಗದೆ ನಿಜವಾಗಿಯೂ ಕಾರ್ಯರೂಪಕ್ಕೆ ಬರಬೇಕು. ಇಂತಹ ಘಟನೆಗಳ ಬಗ್ಗೆ ತಿಳಿದು ನನ್ನಂತಹ ಎಲ್ಲಾ ತಾಯಿ ಹೃದಯಕ್ಕೂ ಮುಂದಿನ ಪೀಳಿಗೆಯ ಬಗ್ಗೆ ಭಯ ಹಾಗೂ ಆತಂಕ ಮೂಡುತ್ತಿದೆ.
ಈ ಪೈಶಾಚಿಕ ಕೃತ್ಯವೆಸಗಿದವರನ್ನು ಕೂಡಲೇ ಬಂಧಿಸಿ, ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್‌ ಅಧಿಕಾರಿಗಳನ್ನು ಒತ್ತಾಯಿಸುತ್ತೇನೆ. ಹಾಗೆಯೇ, ಈ ಘಟನೆಯನ್ನು ವಿಶೇಷವಾಗಿ ಪರಿಗಣಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಸುಮಲತಾ ಅಂಬರಿಶ್ ಆಕ್ರೋಶ ಹೊರಹಾಕಿದ್ದಾರೆ.
https://youtu.be/04OoW3Za47o
- Advertisement -

Latest Posts

Don't Miss