Tuesday, February 4, 2025

Latest Posts

Kannada Fact Check: 2019ರ ಘಟನೆಯನ್ನು ಮಹಾಕುಂಭ ಮೇಳಕ್ಕೆ ಲಿಂಕ್ ಮಾಡಿ ಫೋಟೋ ವೈರಲ್

- Advertisement -

National News: ಇತ್ತೀಚೆಗೆ ಹಳೆಯ ಫೋಟೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಹರಿಬಿಟ್ಟು, ಇದು ಇತ್ತೀಚಿನ ಫೋಟೋ ಎಂದು, ಇತ್ತೀಚಿನ ಘಟನೆಯೊಂದಿಗೆ ಲಿಂಕ್ ಮಾಡಿ, ವೀಡಿಯೋ, ಫೋಟೋ ಶೇರ್ ಮಾಡುವವರ ಹಾವಳಿ ಹೆಚ್ಚಾಗಿದೆ. ಇಂಥ ಸುಳ್ಳು ಸುದ್ದಿಯನ್ನು ಬಯಲು ಮಾಡುವ ಕೆಲಸ ಶಕ್ತಿ ಫ್ಯಾಕ್ಟ್ ಚೆಕ್ (Shakti Publishers) ಮಾಡುತ್ತಿದೆ.

2019ರಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧನಿಂದ ಹಣವನ್ನು ಪಡೆಯುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗುತ್ತಿದ್ದು, ಈ ಫೋಟೋವಿಗೂ ಮಹಾಕುಂಭ ಮೇಳಕ್ಕೂ ಲಿಂಕ್ ಮಾಡಿ, ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಫೋಟೋವನ್ನು ಆದಷ್ಟು ಶೇರ್ ಮಾಡಿ, ರೈಲಿನಲ್ಲಿ ಪ್ರಯಾಣಿಸುವಾಗ ಟಿಕೇಟ್ ಪರಿಶೀಲನೆ ನಡೆಸುವವರು ಈ ರೀತಿ ಪ್ರಯಾಣಿಕರಿಂದ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಕುಂಭ ಮೇಳಕ್ಕೆ ಹೋಗುವವರನ್ನು ಈ ರೀತಿ ಸುಲಿಗೆ ಮಾಡಲಾಗುತ್ತಿದೆ. ಈ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಆದರೆ ಈ ಘಟನೆ ನಡೆದಿದ್ದು 2029ರಲ್ಲಿ ಉತ್ತರಪ್ರದೇಶಕ್ಕೆ ಸೇರಿದ ರೈಲಿನಲ್ಲಿ.

Press Trust Of India ಈ ಸುದ್ದಿಯ ಸತ್ಯಾಸತ್ಯತೆ ಬಯಲು ಮಾಡಿದ್ದು, ಈ ಘಟನೆ 2019ರಲ್ಲಿ ನಡೆದಿದ್ದು, ಹೀಗೆ ದುಡ್ಡು ಪಡೆದ ಉದ್ಯೋಗಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎದು ವರದಿಯಾಗಿದೆ.

Claim: ಪ್ರಯಾಗ್‌ರಾಜ್‌ಗೆ ಹೋಗುವ ಪ್ರಯಾಣಿಕರಿಂದ ದುಡ್ಡು ವಸೂಲಿ.

Fact: ಈ ಫೋಟೋಗೂ ಮಹಾ ಕುಂಭ ಮೇಳಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ ಇದು 2019ರಲ್ಲಿ ನಡೆದ ಘಟನೆಯ ಫೋಟೋ.

- Advertisement -

Latest Posts

Don't Miss