Bollywood News: ಗಾಯಕ ಸೋನು ನಿಗಮ್ ಸಂಗೀತ ಕಾರ್ಯಕ್ರಮದ ವೇಳೆ, ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಯಕ್ರಮದ ವೇಳೆ ಅನಾರೋಗ್ಯವನ್ನು ತಡೆದುಕೊಂಡು ಹಾಡುವಾಗ, ನೋವು ಮಿತಿಮೀರಿ ಹೋಗಿದ್ದು, ಸೋನು ನಿಗಮ್ ಸ್ಥಳದಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಸ್ಥಳೀಯ ಆಸ್ಪತ್ರೆಗ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಚಿಕಿತ್ಸೆ ಪಡೆದ ಬಳಿಕ ಅವರು ಈ ಬಗ್ಗೆ ಮಾತನಾಡಿದ್ದು, ಅತ್ಯಂತ ಕಷ್ಟದ ದಿನವಾಗಿತ್ತು. ಕಾರ್ಯಕ್ರಮದಲ್ಲಿ ನಾನು ವೇದಿಕೆ ಮೇಲೆ ಓಡಾಡುತ್ತ ಹಾಡುತ್ತಿದೆ. ತೀವ್ರ ಬೆನ್ನು ನೋವಾಯಿತು. ಆದರೆ ಜನ ನನ್ನಿಂದ ನೀರಿಕ್ಷಿಸಿದ್ದಕ್ಕಿಂತ ಕಡಿಮೆ ಕೊಡಲು ನನಗೆ ಮನಸ್ಸಿರಲಿಲ್ಲ. ಕೈಲಾದಷ್ಟು ನೋವು ತಡೆದುಕೊಂಡೆ ಎಂದು ಸೋನು ನಿಗಮ್ ಹೇಳಿದ್ದಾರೆ.
ಸ್ವಲ್ಪ ಅಲುಗಾಡಿದರೂ ಬೆನ್ನಿನ ನೋವು ಜೋರಾಗುತ್ತಿತ್ತು. ಯಾರೋ ಬೆನ್ನು ಮೂಳೆಗೆ ಇಂಜೆಕ್ಷನ್ ಕೊಟ್ಟಂತಾಗಿತ್ತು. ಆದರೆ ಕಳೆದ ರಾತ್ರಿ ಸರಸ್ವತಿ ದೇವಿಯೇ ನನ್ನನ್ನು ಕೈ ಹಿಡಿದು ಕಾಪಾಡಿದ್ದಾಳೆ ಎಂದು ಸೋನು ನಿಗಮ್ ಹೇಳಿದ್ದಾರೆ.
ಸೋನು ನಿಗಮ್ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಹಾಡುಗಳನ್ನು ಹಾಡಿದ್ದಾರೆ. ಒಂದು ಕಾರ್ಯಕ್ರಮದಲ್ಲಿ ಅವರು, ನಾನು ಕಳೆದ ಜನ್ಮದಲ್ಲಿ ಕನ್ನಡಿಗನಾಗಿದ್ದೆ ಇರಬೇಕು. ಹಾಗಾಗಿ ಕನ್ನಡ ಹಾಡು ಹಾಡಲು ನನಗೆ ತುಂಬ ಖುಷಿಯಾಗುತ್ತದೆ. ಕನ್ನಡಿಗರು ಕೂಡ ನನ್ನನ್ನು ಅಷ್ಟೇ ಪ್ರೀತಿಸುತ್ತಾರೆ ಎಂದು ಸೋನು ನಿಗಮ್ ಹೇಳಿದ್ದರು.