Uttar Pradesh News: ಪತಿ ಕಾಟ ಕೊಡುತ್ತಾನೆ. ವರದಕ್ಷಿಣೆ ಕಿರುಕುಳ ಕೊಡುತ್ತಾನೆ. ಹೊಡೆಯುತ್ತಾನೆ, ಕುಡಿದು ಬರುತ್ತಾನೆ ಇತ್ಯಾದಿ ಕಾರಣ ಕೊಟ್ಟು ಹಲವು ಹೆಂಗಸರು ಡಿವೋರ್ಸ್ ಅಪ್ಲೈ ಮಾಡೋದು, ಪೊಲೀಸ್ ಠಾಣೆ ಮೆಟ್ಟಿಲೇರೋದೆಲ್ಲ ಮಾಡುತ್ತಾರೆ. ಆದರೆ ಇಲ್ಲೊಂದು ಕೇಸ್‌ನಲ್ಲಿ ಪತಿ ಹೈ ಹೀಲ್ಸ್ ಕೊಡಿಸಿಲ್ಲವೆಂದು ಕಿರಿಕ್ ಮಾಡಿದ್ದಾಳೆ. ಉತ್ತರಪ್ರದೇಶದಲ್ಲಿ ಪತ್ನಿಯೊಬ್ಬಳು ಪತಿ ತನಗೆ ಹೈಹೀಲ್ಸ್ ಚಪ್ಪಲಿ ಕೊಡಿಸಿಲ್ಲವೆಂದು ಕೋಪಗೊಂಡು, ಪೊಲೀಸ್ ಠಾಣೆ ಮೆಟ್ಟಲೇರಿದ್ದಾಳೆ.
ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ಈ ಜೋಡಿ 2024ರಲ್ಲಿ ಮದುವೆಯಾಗಿದ್ದರು. ಪತ್ನಿ ಪತಿಯ ಬಳಿ ಹೈ ಹೀಲ್ಸ್ ಕೊಡಿಸಿ ಎಂದು ಕೇಳಿದ್ದಾಳೆ. ಆಕೆಗೆ ಹೈ ಹೀಲ್ಸ್ ಧರಿಸುವ ಶಾಕ್ ಇರುವ ಕಾರಣ, ಆಕೆ ಪ್ರತಿದಿನ ಇದೇ ವಿಷಯ ಪತಿಗೆ ಹೇಳುತ್ತಿದ್ದಳು. ಆದರೆ ಪತಿ ಮಾತ್ರ ಯಾವುದೇ ಕಾರಣಕ್ಕೂ ನಿನಗೆ ಹೈ ಹೀಲ್ಸ್ ಕೊಡಿಸುವುದಿಲ್ಲವೆಂದು ಹೇಳಿದ್ದಾನೆ. ಈ ಕಾರಣಕ್ಕೆ ಸಿಟ್ಟಾಗಿ ಪತ್ನಿ ತವರು ಮನೆಗೆ ಹೋಗಿದ್ದಲ್ಲದೇ, ಪೊಲೀಸ್ ಠಾಣೆ ಮೆಟ್ಟಲೇರಿ, ಪತಿ ನನಗೆ ಹೈ ಹೀಲ್ಸ್ ಕೊಡಿಸಿಲ್ಲವೆಂದು ದೂರು ನೀಡಿದ್ದಾಳೆ. ಅಲ್ಲದೇ ಕೋರ್ಟ್‌ಗೆ ಹೋಗಿ ಡಿವೋರ್ಸ್‌ಗೆ ಅಪ್ಲೈ ಮಾಡಿದ್ದಾಳೆ.
ಆದರೆ ಈ ಬಗ್ಗೆ ಆಕೆಯ ಪತಿಗೆ ಕೇಳಿದಾಗ, ಆತ ಕೊಟ್ಟ ಉತ್ತರವೇನೆಂದರೆ, ಈ ಮೊದಲು ನಾನು ಆಕೆಗೆ ಹೈ ಹೀಲ್ಸ್ ಕೊಡಿಸಿದ್ದೆ. ಆಗ ಅವಳು್ ಅದನ್ನು ಬಳಿಸಿ, ಬಿದ್ದು, ಕಾಲು ಮುರಿದುಕೊಂಡಿದ್ದಳು. ಹಾಗಾಗಿ ನಾನು ಎರಡನೇಯ ಬಾರಿ ಆಕೆಗೆ ಹೈ ಹೀಲ್ಸ್ ಕೊಡಿಸಲು ನಿರಾಕರಿಸಿದೆ ಎಂದಿದ್ದಾನೆ. ಹೇಗೋ ಮಾಡಿ ಇವರಿಬ್ಬರ ಮನವೊಲಿಸಿ, ಮನೆಗೆ ಕಳುಹಿಸಲಾಗಿದೆ.




