Thursday, February 6, 2025

Latest Posts

ಮದ್ವೆಯಾಗಿದ್ರು ಗರ್ಲ್‌ ಫ್ರೆಂಡ್‌ ಶೋಕಿ: ಕಳ್ಳನಿಂದ ಪ್ರೇಯಸಿಗೆ 3 ಕೋಟಿ ಮನೆ ಗಿಫ್ಟ್

- Advertisement -

News: ಬಾಲಿವುಡ್ ನಟಿಯನ್ನು ಪ್ರೀತಿ ಮಾಡುತ್ತಿದ್ದ ಖತರ್ನಾಕ್ ಕಳ್ಳನ್ನೊಬ್ಬನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ . ಅಲ್ಲದೆ ಈತನು ಕಳ್ಳತನ ಮಾಡಿ ನಟಿಗೆ ಮೂರು ಕೋಟಿ ಬೆಲೆಬಾಳುವ ಬಂಗಲೆಯನ್ನು ಕಟ್ಟಿಸಿಕೊಟ್ಟಿದ್ದಾನೆ ಎಂಬ ಶಾಕಿಂಗ್‌ ವಿಚಾರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಮಡಿವಾಳ ಪೊಲೀಸರ ಬಲೆಗೆ ಬಿದ್ದಿರುವ ಈತನ ಹೆಸರು ಪಂಚಾಕ್ಷರಿ ಸ್ವಾಮಿ, ಅಲ್ಲದೆ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ನಿವಾಸಿಯಾಗಿರುವ ಈತನಿಗೆ ಬಾಲಿವುಡ್‌ ನಟಿಯೊಂದಿಗೆ ಸಂಪರ್ಕ ಇರುವುದು ತಿಳಿದು ಬಂದಿದೆ. ಇನ್ನೂ ತಾನು ಕಳ್ಳತನ ಮಾಡುತ್ತಿದ್ದ ಹಣದಿಂದಲೇ ಮೂರು ಕೋಟಿ ರೂಪಾಯಿಗಳಷ್ಟು ಮನೆಯನ್ನ ಪ್ರೇಯಸಿಗೆ ಕಟ್ಟಿಸಿಕೊಟ್ಟಿದ್ದ.

ಈತನಿಗೆ ಮದುವೆಯಾಗಿದ್ದರೂ ಸಹ ಬಾಲಿವುಡ್ ನಟಿ ಈತನಿಗೆ ಗರ್ಲ್‌ಫ್ರೆಂಡ್ ಆಗಿರುವ ಬಗ್ಗೆ ವಿಚಾರಣೆಯ ವೇಳೆ ಬಯಲಾಗಿದೆ. ಇದಲ್ಲದೆ ಈ ಖತರ್ನಾಕ್ ಕಳ್ಳ ತಾನು ಸಿಂಗಲ್‌ ರೂಮ್‌ನಲ್ಲಿ ವಾಸವಿದ್ದನು. ತಾನಿರೋದು 400 ಅಡಿ ಚದರ ಅಡಿಯ ಸಣ್ಣ ಕೋಣೆಯಲ್ಲಿ, ಆದರೆ ಕಳ್ಳತನ ಮಾಡಿದ ಹಣದಲ್ಲಿ ಈತ ಬಾಲಿವುಡ್ ನಟಿಗೆ ಬಂಗಲೆಯನ್ನು ಕಟ್ಟಿಸಿಕೊಟ್ಟು ಎಲ್ಲರೂ ಹೌಹಾರುವಂತೆ ಮಾಡಿದ್ದಾನೆ.

ಇನ್ನೂ ಈ ಪಂಚಾಕ್ಷರಿ ತಾನು ಚಿನ್ನ ಕದ್ದು ಅದನ್ನು ಕರಗಿಸಿ ಮಾರಾಟ ಮಾಡುತ್ತಿದ್ದನು. ಈತನಿಗೆ 2014-15ರಲ್ಲಿ ಬಾಲಿವುಡ್‌ ನಟಿ ಜೊತೆಗೆ ಸಂಪರ್ಕ ಬೆಳಯುತ್ತದೆ. ತನ್ನ ಮನೆಯ ಬಾಡಿಗೆ ಕಟ್ಟದ ಈತ ಕೇವಲ ನಟಿಗೆ ಬಂಗಲೆ ಅಷ್ಟೇ ಅಲ್ಲ ಅವಳಿಗಾಗಿ ಲಕ್ಷಾಂತರ ರೂಪಾಯಿಯ ಉಡುಗೊರೆಗಳನ್ನು ಸಹ ನೀಡಿದ್ದಾನೆ. ಅಲ್ಲದೆ ಬಾಲಿವುಡ್‌ ನಟಿ ಬರ್ತಡೆಗೆ 22 ಲಕ್ಷ ರೂಪಾಯಿಗಳ ಆಕ್ವರಿಯಮ್ ಗಿಫ್ಟ್ ನೀಡಿದ್ದಾನೆ.

ಕಳೆದ 2016ರಲ್ಲಿ ಕೋಲ್ಕತ್ತಾದಲ್ಲಿ ನಟಿಗೆ ಮೂರು ಕೋಟಿಯ ಮನೆ ಕಟ್ಟಿಸಿಕೊಟ್ಟಿದ್ದಾನೆ. ಈ ಆರೋಪಿ 2003ರಲ್ಲಿ ಅಪ್ರಾಪ್ತನಿದ್ದಾಗಲೇ ಕಳ್ಳತನಕ್ಕೆ ಪ್ರಾರಂಭ ಮಾಡುತ್ತಾನೆ. 2009ರಿಂದ ಪ್ರೊಫೆಷನಲ್ ಕಳ್ಳನಾಗಿರುವ ಪಂಚಾಕ್ಷರಿ ಸ್ವಾಮಿಯ ತಂದೆ ರೈಲ್ವೆ ಕೆಲಸದಲ್ಲಿದ್ದರು. ತಂದೆ ಸಾವಿನ ಬಳಿಕ ತಾಯಿಗೆ ರೈಲ್ವೆಯಲ್ಲಿ ಕೆಲಸ ಸಿಗುತ್ತದೆ. 2016ರಲ್ಲಿ ಈತನ ಕಳ್ಳತನದ ವಿಚಾರ ತಿಳಿದು ಗುಜರಾತ್ ಪೊಲೀಸರು ಅರೆಸ್ಟ್‌ ಮಾಡಿದ್ದರು.

ಆಗ ಆರು ವರ್ಷಗಳ ಕಾಲ ಗುಜರಾತಿನ ಸಬರಮತಿ ಜೈಲಿನಲ್ಲಿ ಈ ಆರೋಪಿ ಇದ್ದನು. ಬಳಿಕ ಅಲ್ಲಿಂದ ಹೊರ ಬಂದು ಮತ್ತೆ ಕಳ್ಳತನ ಶುರು ಮಾಡಿದ್ದನು. ಅಲ್ಲದೆ ಮತ್ತೆ ಪಂಚಾಕ್ಷರಿ ಮಹಾರಾಷ್ಟ್ರದಲ್ಲಿ ಇದೇ ಕಳ್ಳತನದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದನು. ಈ ಜೈಲಿನಿಂದಲೂ ಸಹ ಅಕ್ಟೋಬರ್‌ನಲ್ಲಿ ಹೊರ ಬಂದ ಬಳಿಕ ಜನವರಿ 9 ರಂದು ಮತ್ತೆ ಬೆಂಗಳೂರಿನಲ್ಲಿ ಮನೆಗೆ ನುಗ್ಗಿ 410 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ್ದ. ಬಳಿಕ ತನಿಖೆ ಆರಂಭಿಸಿದ್ದ ಪೊಲೀಸರು ಜನವರಿ 20 ರಂದು ಬಂಧಿಸಿದ್ದರು. ಪೊಲೀಸರು ನಡೆಸಿದ್ದ ಸುದೀರ್ಘ ವಿಚಾರಣೆಯಲ್ಲಿ ಈ ಎಲ್ಲ ಸ್ಫೋಟಕ ವಿಚಾರಗಳನ್ನು ಆರೋಪಿ ಬಾಯಿ ಬಿಟ್ಟಿದ್ದಾನೆ.

ಇನ್ನೂ ಈತನು ಇಲ್ಲಿಯವರೆಗೂ ದೇಶದಾದ್ಯಂತ ಸುಮಾರು 180 ಮನೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಈ ಹಣವನ್ನು ಈತ ಸಂಪೂರ್ಣವಾಗಿ ಶೋಕಿ ಜೀವನಕ್ಕಾಗಿ ಬಳಕೆ ಮಾಡಿಕೊಂಡಿದ್ದಾನೆ. ಬಾಲಿವುಡ್ ನಟಿ ಮಾತ್ರವಲ್ಲದೆ ಹಲವಾರು ಗರ್ಲ್ಸ್‌ ಫ್ರೆಂಡ್ ಕೂಡ ಈತ ಹೊಂದಿದ್ದಾನೆ. ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ಬೆಂಗಳೂರಿನಲ್ಲಿ ಕಳ್ಳತನ ಮಾಡಿ ಈತ ಸಿಕ್ಕಿಬಿದ್ದಿದ್ದಾನೆ. ಬಂಧನದ ಬಳಿಕ ಬೆಲೆ ಬಾಳುವ 12 ಲಕ್ಷ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಲಕ್ಷಾಂತರ ರೂಪಾಯಿ ನಗದು ಹಣವನ್ನೂ ಈತನಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಿ ದಯಾನಂದ ಈ ಬಗ್ಗೆ ತಿಳಿಸಿದ್ದಾರೆ.

ಒಟ್ನಲ್ಲಿ ತಾನು ಒಂದು ಸಣ್ಣ ಕೋಣೆಯಲ್ಲಿದ್ದು, ಪ್ರೇಯಸಿಗಾಗಿ ಕೋಟ್ಯಂತರ ರೂಪಾಯಿ ಬೆಲೆಯ ಬಂಗಲೆಯನ್ನು ಕಟ್ಟಿಸಿಕೊಟ್ಟಿರುವ ಈ ಪಂಚಾಕ್ಷರಿಯ ಶೋಕಿ ಜೀವನವೇ ಅವನ ಇವತ್ತಿನ ಸ್ಥಿತಿಗೆ ಕಾರಣವಾಗಿದ್ದಂತೂ ಸುಳ್ಳಲ್ಲ. ದುಡಿದು ತಿನ್ನಬೇಕಾದ ವಯಸ್ಸಿನಲ್ಲಿ ಕಳ್ಳತನ ಮಾಡಿ ಸಮಾಜದಲ್ಲಿ ಜನರ ಕಣ್ಣೀರಿಗೆ ಕಾರಣವಾಗುವ ಇಂತವರನ್ನೇ ನೋಡಿ ಮನೆಗೆ ಮಾರಿ, ಊರಿಗೆ ಉಪಕಾರಿ ಅಂತ ಹೇಳೋದು.

- Advertisement -

Latest Posts

Don't Miss