Death: ಒಂದು ಮನೆಯಲ್ಲಿ ಸಾವಾದಾಗ, ಆ ಶವವನ್ನು ಹೊತ್ತಿಸಿ, ಎಲ್ಲರೂ ಶುದ್ಧರಾಗುವವರೆಗೂ ಮನೆಯಲ್ಲಿ ಒಲೆ ಉರಿಸುವುದಿಲ್ಲ. ಹಾಗಾದ್ರೆ ಯಾಕೆ ಸತ್ತ ಮನೆಯಲ್ಲಿ ಒಲೆ ಉರಿಸಲಾಗುವುದಿಲ್ಲ ಅಂತಾ ತಿಳಿಯೋಣ ಬನ್ನಿ.
ಒಬ್ಬರ ಸಾವಾದಾಗ 7 ಗಂಟೆಗಳ ಕಾಲ ಆ ಶವವನ್ನು ಹಾಗೇ ಇರಿಸಿ, ಬಳಿಕ ಶವ ಸಂಸ್ಕಾರ ಮಾಡಬೇಕು ಎಂದು ಹೇಳಲಾಗುತ್ತದೆ. ಏಕೆಂದರೆ, ಆ ಆತ್ಮಕ್ಕೆ ತಾನು ಸಾವನ್ನಪ್ಪಿದ್ದೇನೆ ಎಂದು ಒಪ್ಪಿಕೊಳ್ಳಲು ಅಷ್ಟು ಸಮಯ ಬೇಕಾಗುತ್ತದೆ. ಆತ್ಮ ಪದೇ ಪದೇ ದೇಹ ಹೊಕ್ಕಲು ಪ್ರಯತ್ನಿಸುತ್ತದೆ. ಈ ವೇಳೆ ಆ ದೇಹದಿಂದ ಮಲ ಮೂತ್ರ ವಿಸರ್ಜನೆಯಾಗುತ್ತದೆ. ಯಾರಾದರೂ ನಿಧನರಾದಾಗ, ಕೊನೆಯಲ್ಲಿ ಅವರ ದೇಹದಿಂದ ಮಲ ಮೂತ್ರ ವಿಸರ್ಜನೆಯಾಗುತ್ತಿದೆ. ರಕ್ತ ವಾಂತಿಯಾಗುತ್ತದೆ ಎಂದರೆ, ಅವರು ಈಗಾಗಲೇ ಮರಣ ಹೊಂದಿದ್ದು, ಅವರ ಆತ್ಮ ದೇಹವನ್ನು ಹೊಕ್ಕಲು ಯತ್ನಿಸುತ್ತಿದೆ ಎಂದರ್ಥ.
ಹೀಗಿರುವಾಗ, ಮನೆ ಜನ ಹೇಗೆ ಕಣ್ಣೀರು ಹಾಕುತ್ತಿರುತ್ತಾರೋ, ಅದೇ ರೀತಿ ತನ್ನವರನ್ನು ಬಿಟ್ಟು ಹೋಗುವ ದುಃಖ ಆ ಆತ್ಮಕ್ಕೂ ಇರುತ್ತದೆ. ಆ ಆತ್ಮ ಶಕ್ತಿ ಕಳೆದುಕೊಂಡು, ತಾನೇನು ಮಾಡಲಿ ಎಂದು ಒದ್ದಾಡುತ್ತಿರುತ್ತದೆ. ಅಲ್ಲದೇ, ಆತ್ಮಕ್ಕೂ ಬೆಂಕಿಗೂ ವಿರೋಧ ಎಂದು ಹೇಳಲಾಗುತ್ತದೆ. ಹಾಗಾಗಿ ಮನೆಯಲ್ಲಿ ಕಿಚ್ಚು ಹೊತ್ತಿಸಲಾಗುವುದಿಲ್ಲ. ಅಡುಗೆ ಮಾಡಲಾಗುವುದಿಲ್ಲ. ಸಂಬಂಧಿಕರು, ಪರಿಚಯಸ್ಥರೇ, ಅಡುಗೆ, ಚಹಾ ತಿಂಡಿ ಮಾಡಿ ಕೊಡುತ್ತಾರೆ.
ಮನೆಯಲ್ಲಿ ಕಿಚ್ಚು ಹಚ್ಚಿದರೆ, ಆ ಕಿಚ್ಚಿನಿಂದ ಆತ್ಮಕ್ಕೆ ತೊಂದರೆಯಾಗುತ್ತದೆ. ಈಗಾಗಲೇ ದುಃಖದಲ್ಲಿರುವ ಆತ್ಮ, ಚಡಪಡಿಸಲು ಶುರು ಮಾಡುತ್ತದೆ. ಈ ಚಡಪಡಿಕೆಯಿಂದ ಅದು ತನ್ನ ಮನೆಯವರಿಗೆ ಕೆಟ್ಟದ್ದು ಮಾಡುವ ಎಲ್ಲ ಸಂಭವವಿರುತ್ತದೆ. ಹಾಗಾಗಿ ಸತ್ತ ಮನೆಯಲ್ಲಿ ಶವ ಸಂಸ್ಕಾರವಾಗಿ, ಶುದ್ಧವಾಗುವವರೆಗೂ ಕಿಚ್ಚ ಹೊತ್ತಿಸಲಾಗುವುದಿಲ್ಲ.