Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿ ನಡೆಸಿ, ಮಾತನಾಡಿದ್ದು, ದೆಹಲಿಯಲ್ಲಿ ಪ್ರಧಾನಿಗಳ ನೇತೃತ್ವದಲ್ಲಿ ಬಿಜೆಪಿಗೆ ಜನ ಭರ್ಜರಿ ತೀರ್ಪು ಕೊಟ್ಟಿದ್ದಾರೆ. 46ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿ ಈಗಾಗಲೇ ಗೆದ್ದಿದೆ. ನಮಗೆ ನಿಚ್ಚಳ ಬಹುಮತವನ್ನು ದೆಹಲಿಯ ಜನ ನೀಡತ್ತಾರೆ. ಜೆಪಿ ನಡ್ಡಾ, ಪ್ರಧಾನಿ ಮೋದಿ, ಅಮಿತ್ ಶಾ , ರಾಜನಾಥ್ ಸಿಂಗ್ ಮತ್ತು ದೆಹಲಿ ಜನತೆಗೆ ಧನ್ಯವಾದಗಳು. ನಕಾರಾತ್ಮಕ ತಂತ್ರಗಳನ್ನು ರಾಜಕೀಯ ಮಾಡುತ್ತಿದ್ದ ತಕ್ಕ ಪಾಠ ದೆಹಲಿ ಜನ ಕಲಿಸಿದ್ದಾರೆ. ದೆಹಲಿಯಲ್ಲಿ ಹರಾಜು ಕಥೆ ಸೃಷ್ಟಿ ಮಾಡುತ್ತಿದ್ದವರ ಕಪಾಳ ಮೋಕ್ಷವಾಗಿದೆ ಎಂದು ಹೇಳಿದ್ದಾರೆ.
ನಾವು ಪ್ರಜಾಪ್ರಭುತ್ವ ನಂಬಿದ್ದೆವೆ. ಪ್ರಜಾಪ್ರಭುತ್ವ ಯಶಸ್ವಿಯಾಗಿ ರಚನಾತ್ಮಕ, ಪ್ರಬಲ ರಾಜಕೀಯ ಪಕ್ಷ ಇರಬೇಕು ಎನ್ನುವುದು ನಮ್ಮ ಅಭಿಲಾಷೆ. ಆದರೆ ಕಾಂಗ್ರೆಸ್ ದಿನದಿಂದ ದಿನಕ್ಕೆ ಕೇಳಗೆ ಕುಸಿಯುತ್ತಿದೆ. ಈ ಸ್ಥಿತಿ ಕಾಂಗ್ರೆಸ್ ಗೆ ಒಳ್ಳೆಯದಲ್ಲ. ಈ ಬಗ್ಗೆ ಕಾಂಗ್ರೆಸ್ ಆತ್ಮಾವಾಲೋಕನ ಮಾಡಿಕೊಳ್ಳಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದೆ ಅಂತ ಅಹಂಕಾರದಲ್ಲಿರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು.
ಕಾಂಗ್ರೆಸ್ ಪಕ್ಷ ಎಲ್ಲಿ ತಪ್ಪಿದೆ ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು. ನಾವು ಇವಿಎಂ ಮೂಲಕ ಗೆಲ್ಲವುದಿದ್ದ್ರೆ 45 ಯಾಕೆ 65 ಸಿಟ್ ನಾವೇ ಗೆದ್ದು ಆಪ್ ಪಕ್ಷದ ಕಥೆ ಮುಗಿಸುತ್ತಿದ್ದೆವು. ಕಾಂಗ್ರೆಸ್ ತಾನು ಎಲ್ಲಿ ಗೆಲ್ಲತ್ತೆ ಅಲ್ಲಿ ಇವಿಎಂ ಸಮಸ್ಯೆ ಇಲ್ಲ. ಆದರೆ ಸೋತಾಗ ಇವಿಎಂ ಹ್ಯಾಕ್ ಅಂತಾರೆ. ಕಾಂಗ್ರೆಸ್ ಪಾರ್ಟಿಗೆ ಕಾಮನ್ ಸೆನ್ಸ್ ಇದೆಯಾ?.
ಕಾಂಗ್ರೆಸ್ ಆರೋಪಕ್ಕೆ ಅರ್ಥ ಇಲ್ಲ. ಕುಣಿಯಲು ಬಾರದವರಿಗೆ ನೆಲ ಡೊಂಕು, ಕೈಯಲ್ಲಿ ಆಗದೆ ಇರುವವರು ಮೈ ಪರಜಿಕೊಂಡಂತೆ ಎನ್ನುವುದು ಕಾಂಗ್ರೆಸ್ ಪರಿಸ್ಥಿತಿ. ಯಾವ ಪಾರ್ಟಿ ಕಾಂಗ್ರೆಸ್ ಮುಗಿಸುತ್ತೋ ಅವರ ಜೊತೆಯೇ ಕಾಂಗ್ರೆಸ್ ಒಂದಾಣಿಕೆ ಮಾಡಿಕೊಳ್ಳುತ್ತೆ. ಕಾಂಗ್ರೆಸ್ ಗೆ ಸ್ಟ್ಯಾಂಡ್ ಇಲ್ಲ ಅದು ಬಸ್ ಸ್ಟ್ಯಾಂಡ್ ಎಂದು ಕಾಂಗ್ರೆಸ್ ವಿರುದ್ಧ ಜೋಶಿ ವ್ಯಂಗ್ಯವಾಡಿದ್ದಾರೆ.
ಯಾರು ನಿಮ್ಮನ್ನಾ ಮುಗಿಸುತ್ತಾರೆ ಅವರ ಜೊತೆ ಹೋರಾಡಲು ಕಾಂಗ್ರೆಸ್ ಕಲಿಯಬೇಕು. ಕಪಾಳಕ್ಕೆ ಹೊಡಿಸಕೊಂಡು ಮತ್ತೆ ಅವರ ಜೊತೆ ಕೈ ಜೋಡಿಸುತ್ತಾರೆ. ಕಾಂಗ್ರೆಸ್ ಪಾರ್ಟಿ ಬಾಲಿಶ ಹೇಳಿಕೆ ಕೊಡುತ್ತಿತ್ತು. ಇಂಡಿ ಘಟಬಂಧನ ಉಂಡಿ ತಿಂದುಕೊಂಡು ಹೋಗಬೇಕು. ಕೆಲ ಸಚಿವರಿಗೆ ಮೋದಿ ಅವರನ್ನು ಬೈಯಲು ಹೇಳಿದ್ದಾರೆ. ಹೀಗಾಗಿ ರಾಜ್ಯದ ಕೆಲ ಸಚಿವರು ದಿನಾ ಮೋದಿ ಬೈಯಿತ್ತಾರೆ. ಒಂದು ವೇಳೆ ಮೋದಿ ಬೈಯದಿದ್ದ್ರೆ ಅವರ ಸಚಿವ ಸ್ಥಾನ ಹೋಗುತ್ತೆ ಅಂತ ಜೋಶಿ ವ್ಯಂಗ್ಯವಾಡಿದ್ದಾರೆ.
ಕ್ರೇಜಿವಾಲ್ ಪಾಪದ ಕೊಡ ತುಂಬಿತ್ತು ಅದನ್ನು ದೆಹಲಿ ಜನ ತೊಳೆದ್ರು.. ಕಾಂಗ್ರೆಸ್ ನ್ನ ಎಲ್ಲಾ ಪಾಪಗಳನ್ನು ಸಹ ದೆಹಲಿ ಜನ ತೊಳೆದಿದ್ದಾರೆ. ಕುಂಭಮೇಳದ ವಿಚಾರವಾಗಿ ಕಾಂಗ್ರೆಸ್ ಒಂದು ಸಂಸ್ಕೃತಿ ಬಗ್ಗೆ ಮಾತನಾಡಿದ್ದು ಮುಳುವಾಯಿತು. ಕುಂಭಮೇಳದಲ್ಲಿಯೂ ಸಹ ಚಿಲ್ಲರೆ ರಾಜಕೀಯ ಕಾಂಗ್ರೆಸ್ ಮಾಡಿದೆ. ಮೆಕ್ಕಾ ದಲ್ಲಿ ಸಹ ಅತೀ ಹೆಚ್ಚು ಬಿಸಿಲು ಮತ್ತು ಕಾಲತ್ತುಳಿತದಿಂದ ಅನೇಕ ಜನ ಸತ್ತಿದ್ದಾರೆ. ಹಾಗಿದ್ರೆ ಮೆಕ್ಕಾ ದರ್ಶನಕ್ಕೆ ಯಾರು ಹೋಗಬಾರದಾ?. ಕಾಂಗ್ರೆಸ್ ನಾಯಕರು ಕುಂಭಮೇಳಕ್ಕೆ ಹೋಗಿ ಸ್ನಾನ ಮಾಡಿಕೊಂಡು ಬಂದ್ರು ಇದಕ್ಕೇನು ಹೇಳಬೇಕು. ಆದ್ರೆ ಇದನ್ನು ನಾವು ಟೀಕೆ ಮಾಡೋದಿಲ್ಲಾ. ದೇವರು ಇಲ್ಲ ಎಂದ ಚಾರುವಾಹಕನ್ನನ್ನೆ ಋಷಿ ಎಂದ ಸಂಸ್ಕೃತ ನಮ್ಮದು.. ಹೀಗಾಗಿ ಅವರ ನಂಬಿಕೆ ಅವರದ್ದು ಎಂದು ಜೋಶಿ ಹೇಳಿದ್ದಾರೆ.