Saturday, February 8, 2025

Latest Posts

Sandalwood News: ನವಗ್ರಹ ಸಿನಿಮಾ ಖ್ಯಾತಿಯ ನಟ ಗಿರಿ ದಿನೇಶ್ ನಿಧನ

- Advertisement -

Sandalwood News: ನವಗ್ರಹ ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟ ದಿನೇಶ್ ಪುತ್ರ ಗಿರಿ ದಿನೇಶ್(45) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿಗೆ ಹೃದಯಾಘಾತವಾಗಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಮಾರ್ಗಮಧ್ಯೆಯೇ ಅವರು ನಿಧನರಾಗಿದ್ದು, ಆಸ್ಪತ್ರೆಗ ಕೊಂಡೊಯ್ದಾಗ ವೈದ್ಯರು, ಅವರ ಸಾವಿನ ಸುದ್ದಿ ತಿಳಿಸಿದ್ದಾರೆ.

ಗಿರಿ ದಿನೇಶ್ ಸ್ಯಾಂಡಲ್‌ವುಡ್‌ನಲ್ಲಿ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದ್ದು, ದರ್ಶನ್ ಸೇರಿ ಹಲವು ನಟ ನಟಿಯರು ಇದ್ದ ನವಗ್ರಹ ಸಿನಿಮಾದಲ್ಲಿ ಗಿರಿ ಶೆಟ್ಟಿ ಪಾತ್ರ ನಿಭಾಯಿಸಿದ್ದರು. ಈ ಪಾತ್ರ ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಆದರೆ ಅದಾದ ಬಳಿಕ ಅವರಿಗೆ ಹೆಚ್ಚಿನ ಸಿನಿಮಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದರಿಂದ ಗಿರಿ ತುಂಬ ನೊಂದಿದ್ದರು ಅಂತಾನೂ ಹೇಳಲಾಗಿದೆ.

- Advertisement -

Latest Posts

Don't Miss