Thursday, March 13, 2025

Latest Posts

Recipe: ಪೂರಿ ,ಚಪಾತಿ ಜೊತೆ ಸವಿಯಬಹುದಾದ ವೆಜ್ ಕೂರ್ಮಾ ರೆಸಿಪಿ

- Advertisement -

Recipe: ಬೇಕಾಗುವ ಸಾಮಗ್ರಿ : ಒಂದು ಕಪ್ ಬಟಾಣಿ, 4ರಿಂದ 5 ಬಟಾಟೆ, 2 ಈರುಳ್ಳಿ, 2 ಟೊಮೆಟೋ, ಬೀನ್ಸ್, ಕ್ಯಾರೇಟ್, ಕೊತ್ತೊಂಬರಿ ಸೊಪ್ಪು, ಪುದೀನಾ, ಚಿಕ್ಕ ತುಂಡು ಶುಂಠಿ, 5 ಎಸಳು ಬೆಳ್ಳುಳ್ಳಿ, 1 ಕಪ್ ಕಾಯಿತುರಿ, 3 ಹಸಿಮೆಣಸು, 4 ಸ್ಪೂನ್ ಎಣ್ಣೆ, ಚಕ್ಕೆ, ಲವಂಗ, ಕಾಳು ಮೆಣಸು, ಏಲಕ್ಕಿ, ಪಲಾವ್ ಎಲೆ, 1 ಸ್ಪೂನ್ ಜೀರಿಗೆ, ಕೊಂಚ ಅರಿಶಿನ, 1 ಸ್ಪೂನ್ ಗರಂ ಮಸಾಲೆ, ಕೊಂಚ ಚಾಟ್ ಮಸಾಲೆ, ಬೇಕಾದ್ದಲ್ಲಿ ಖಾರದ ಪುಡಿ, ಕೊಂಚ ಕಸೂರಿ ಮೇಥಿ, ತುಪ್ಪ, ಅಗತ್ಯವಿದ್ದಷ್ಟು ಉಪ್ಪು.

ಮಾಡುವ ವಿಧಾನ : ಮೊದಲು ಮಸಾಲೆ ರುಬ್ಬಿಕೊಳ್ಳಿ. ಅದಕ್ಕಾಗಿ ಮಿಕ್ಸಿ ಜಾರ್‌ಗೆ ಕಾಯಿತುರಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಕೊತ್ತೊಂಬರಿ ಸೊಪ್ಪು, ಪುದೀನಾ ಎಲೆ, ಶುಂಠಿ ಮತ್ತು ಸ್ವಲ್ಪ ನೀರು ಹಾಕಿ ಮಸಾಲೆ ರುಬ್ಬಿಕೊಳ್ಳಿ. ಬಳಿಕ ಪ್ಯಾನ್‌ಗೆ ಎಣ್ಣೆ ಹಾಕಿ, ಚಕ್ಕೆ, ಲವಂಗ, ಕಾಳುಮೆಣಸು, ಪಲಾವ್ ಎಲೆ, ಈರುಳ್ಳಿ ಹಾಕಿ ಹುರಿಯಿರಿ.

ಬಳಿಕ ಟೊಮೆಟೋ, ಕ್ಯಾರೆಟ್, ಬಟಾಣಿ, ಆಲೂಗಡ್ಡೆ, ಬೀನ್ಸ್ ಹಾಕಿ ಹುರಿಯಿರಿ. ನಂತರ ಉಪ್ಪು, ಅರಿಶಿನ ಪುಡಿ, ಗರಂ ಮಸಾಲೆ, ಚಾಟ್ ಮಸಾಲೆ, ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ. ಕೊಂಚ ಹೊತ್ತು ಮಂದ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿ. ಅಗತ್ಯವಿದ್ದಲ್ಲಿ ಸ್ವಲ್ಪ ನೀರು ಹಾಕಬಹುದು.

ಬಳಿಕ ರುಬ್ಬಿಕೊಂಡ ಮಸಾಲೆ, ನೀರು ಹಾಕಿ ಮಿಕ್ಸ್ ಮಾಡಿ, ಮತ್ತೆ ಸ್ವಲ್ಪ ಹೊತ್ತು ಬೇಯಿಸಿ. ಕೊನೆಗೆ ಸ್ವಲ್ಪ ಕಸೂರಿ ಮೇಥಿ, ತುಪ್ಪ ಹಾಕಿ ಗ್ಯಾಸ್ ಆಫ್ ಮಾಡಿ, ಮುಚ್ಚಳ ಮುಚ್ಚಿ. ಈಗ ಘಮ ಘಮಿಸುವ ಆಲೂ ಬಟಾಣಿ ಕೂರ್ಮ ರೆಡಿ. ಇದನ್ನು ನೀವು ಚಪಾತಿ, ಪೂರಿಯೊಟ್ಟಿಗೆ ಸವಿಯಬಹುದು.

- Advertisement -

Latest Posts

Don't Miss