Spiritual: ಇನ್ನು ಕೆಲವೇ ದಿನಗಳಲ್ಲಿ ಮಹಾಶಿವರಾತ್ರಿ ಬರಲಿದ್ದುಈ ದಿನ ಯಾವ ನಕ್ಷತ್ರವಿದೆ. ಯಾವ ನಕ್ಷತ್ರದವರು ಯಾವ ರೀತಿಯಾಗಿ ಶಿವನ ಪೂಜೆ ಮಾಡಬೇಕು ಎಂದು ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ಹೇಳಿದ್ದಾರೆ.
ಪೂರ್ವಾಬಾದ್ರ ನಕ್ಷತ್ರದ ದಿನ ಶಿವರಾತ್ರಿ ಬಂದಿದೆ. ಮರುದಿನ ಧನಿಷ್ಠಾ ನಕ್ಷತ್ರ ಅದರ ಮರುದಿನ ಶತಭಿಷಾ ನಕ್ಷತ್ರವಾಗಿದೆ. ಹಾಗಾಗಿ ಈ ಮೂರು ರಾಶಿಯವರಿಗೆ ಯಾವ ರೀತಿ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ.
ಶತಭಿಷಾ ನಕ್ಷತ್‌ರದಲ್ಲಿ ಜನಿಸಿದವರು ಈಶ್ವರನ ಕೃಪೆಗೆ ಪಾತ್ರರಾಗುವಂಥವರು. ಆದರೆ ಅಸಮಾಧಾನವೂ ಇರುತ್ತದೆ. ಶತಭಿಷಾ, ಪೂರ್ವಾಬಾದ್ರ, ಧನಿಷ್ಠಾ ನಕ್ಷತ್ರದವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದೆ. ಏಕೆಂದರೆ ಇವರೆಲ್ಲ ಕುಂಭ ರಾಶಿಯವರು. ಹಾಗಾಗಿ ಇವರೆಲ್ಲ ಶಿವನ ಪೂಜೆ ಮಾಡಲು ಮರೆಯಬಾರದು. ಭಕ್ತಿಯಿಂದ ಶಿವ ನಾಮಸ್ಮರಣೆ ಮಾಡುತ್ತ, ಶಿವರಾತ್ರಿ ಆಚರಣೆ ಮಾಡಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ವೀಡಿಯೋ ನೋಡಿ.