Tuesday, November 18, 2025

Latest Posts

Advocate Amendment Bill 2025 ವಿರೋಧಿಸಿ ಮದ್ದೂರಿನಲ್ಲಿ ಕೋರ್ಟ್ ಬಹಿಷ್ಕರಿಸಿ ವಕೀಲರ ಪ್ರೊಟೆಸ್ಟ್

- Advertisement -

News: ಅಡ್ವಕೇಟ್ ಅಮೆಂಡ್‌ಮೆಂಟ್ ಬಿಲ್ 2025 ಜಾರಿಯಾಗಿದ್ದು, ಎಲ್ಲ ವಕೀಲರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮದ್ದೂರಿನಲ್ಲಿ ವಕೀಲರೆಲ್ಲರೂ ಸೇರಿ, ಈ ಅಡ್ವಕೇಟ್ ಅಮೆಂಡ್‌ಮೆಂಟ್ ಬಿಲ್ 2025ನ್ನು ವಿರೋಧಿಸಿ, ಕೋರ್ಟ್ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ.

ಈ ಬಿಲ್ ವಿರೋಧಿಸಲು ಕಾರಣವೇನು..?: ಈ ಬಿಲ್ ಪ್ರಕಾರ, ಒಂದು ಕೇಸ್ ಪಡೆದು ವಕೀಲರೊಬ್ಬರು ವಾದ ಮಂಡಿಸುತ್ತಿದ್ದರೆ, ಯಾರ ಪರವಾಗಿ ವಕೀಲರು ವಾದ ಮಂಡಿಸುತ್ತಿದ್ದಾರೋ, ಆ ವಾದ ಸರಿಯಾಗದೇ, ಕೇಸ್ ಸೋತರೆ, ವಕೀಲರೇ 3 ಲಕ್ಷದ ತನಕ ದಂಡ ಕಟ್ಟಬೇಕು. ಮತ್ತು ಸಂತ್ರಸ್ತ ವ್ಯಕ್ತಿ ಕೊಟ್ಟ ಹೇಳಿಕೆ ಸುಳ್ಳು ಎಂದು ಸಾಬೀತಾದಲ್ಲಿ 50 ಸಾವಿರ ರೂಪಾಯಿ ಎಂದು ನಿಯಮ ಜಾರಿ ಮಾಡಲಾಗಿದೆ.

ಈ ನಿಯಮದ ವಿರುದ್ಧ ವಕೀಲರು ಆಕ್ರೋಶ ಹೊರಹಾಕಿದ್ದಾರೆ. ಓರ್ವ ವಕೀಲ ಯಾವುದಾದರೂ ಕೇಸ್ ಪಡೆದು, ಅದರ ವಿರುದ್ಧ ಹೋರಾಟ ನಡೆಸುವಾಗ, ಆತ ಎಂದಿಗೂ ತನ್ನ ಕಕ್ಷಿದಾರ ಸೋಲಲಿ ಎಂದು ಬಯಸುವುದಿಲ್ಲ. ಬದಲಾಗಿ, ತನ್ನಿಂದ ಸಾಧ್ಯವಾದ ಎಲ್ಲ ಪುರಾವೆ ಪಡೆದು, ವಾಾದ ಮಂಡಿಸುತ್ತಾನೆ. ಯಾವ ವಕೀಲ ಕೂಡ ತನ್ನ ಕಕ್ಷಿದಾರ ಸೋಲಲಿ ಎಂದು ಬಯಸುವುದಿಲ್ಲ. ಹಾಗಾಗಿ ಈ ಬಿಲ್ ಗೆ ನಮ್ಮ ವಿರೋಧವಿದೆ ಎಂದು ವಕೀಲರು ಪ್ರತಿಭಟನೆ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಬಿಲ್‌ನಿಂದ ವಕೀಲ ವಾಾದ ಮಂಡಿಸುವ ತಾಕತ್ತನ್ನೇ ಕಳೆದುಕೊಳ್ಳುವ ಹಾಗಿದ್ದಾನೆ. ಅವನಿಗೆ ವಾದ ಮಂಡಿಸುವಾಗ, ಹಲವು ಯೋಚನೆಗಳು ಬರುತ್ತದೆ. ವಕೀಲರು ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುವ ಬಿಲ್ ಇದಾಗಿದೆ. ಇದು ವಕೀಲರನ್ನು ಕಂಟ್ರೋಲಿಗೆ ತೆಗೆದುಕೊಳ್ಳುವ ಬಿಲ್ ಎಂದು ವಕೀಲರು ಆಕ್ರೋಶ ಹೊರಹಾಕಿದ್ದಾರೆ.

ಬರೀ ಮದ್ದೂರು ಅಷ್ಟೇ ಅಲ್ಲದೇ, ಇಡೀ ಭಾರತದ ವಕೀಲರು ಈ ಬಿಲ್ ವಿರುದ್ಧವಿದ್ದು, ಹಲವು ಕಡೆ ಕೋರ್ಟ್ ಬಹಿಷ್ಕರಿಸಿ, ಪ್ರತಿಭಟನೆ ನಡೆಸಿದ್ದಾರೆ.

- Advertisement -

Latest Posts

Don't Miss