ಅಂಗನವಾಡಿ ಆಹಾರ ಅಕ್ರಮ ದಾಸ್ತಾನು: ಕಾಂಗ್ರೆಸ್‌ನಿಂದ ಬತುಲ್ ಕಿಲ್ಲೇದಾ ಸಸ್ಪೆಂಡ್

Hubli News: ಅಂಗನವಾಡಿಯಲ್ಲಿ ಮಕ್ಕಳಿಗಾಗಿ ಬರುತ್ತಿದ್ದ ಆಹಾರವನ್ನು ಸಂಗ್ರಹ ಮಾಡಿದ್ದ ಆರೋಪದಡಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆ ಬತುಲ್ ಕಿಲ್ಲೇದಾ ಸಸ್ಪೆಂಡ್ ಆಗಿದ್ದಾರೆ.

2021ರ ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆಯಲ್ಲಿ ಕಿಲ್ಲೇದಾ ಸ್ಪರ್ಧಿಸಿದ್ದರು. ಇದೇ ಬತುಲ್ ಪತಿ ಫಾರೂಕ್ ತಮ್ಮ ಗೋದಾಮಿನಲ್ಲಿ ಅಂಗನವಾಡಿ ಮಕ್ಕಳಿಗೆ ಬರುತ್ತಿದ್ದ ಆಹಾರವನ್ನು ಸಂಗ್ರಹಿಸಿಟ್ಟಿದ್ದರು. ಕಳೆದ ವಾರ ಅಧಿಕಾರಿಗಳು ದಾಳಿ ನಡೆಸಿದಾಗ, ಈ ವಿಷಯ ಬೆಳಕಿಗೆ ಬಂದಿದೆ.

ಇನ್ನು ಅದಿಕಾರಿಗಳ ದಾಳಿಯ ಬಳಿಕ ಬತುಲ್ ಪರಾರಿಯಾಗಿದ್ದರು. ಈಕೆಯ ಪತಿ ಫಾರೂಕ್ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಇದೀಗ ಕಾಂಗ್ರೆಸ್ ಪಕ್ಷದಿಂದಲೇ ಬತುಲ್‌ನನ್ನು ಉಚ್ಛಾಟಿಸಲಾಗಿದೆ.

About The Author