100ಕ್ಕಿಂತ ಹೆಚ್ಚು HAIR LOSS! ನಿರ್ಲಕ್ಷ್ಯ ಬೇಡ! ಇದಕ್ಕೆ ಪರಿಹಾರ ಏನು?

Health Tips: ಇಂದಿನ ಕಾಲದಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿದೆ. ದಿನಕ್ಕೆ 100 ಕೂದಲು ಉದುರಿದರೆ, ನಷ್ಟವೇನಿಲ್ಲ. ಆದರೆ, ನೂರಕ್ಕೂ ಹೆಚ್ಚು ಕೂದಲು ಉದುರಿದರೆ, ಅದು ಕೂದಲು ಉದುರುವ ಸಮಸ್ಯೆ ಎನ್ನಿಸಿಕೊಳ್ಳುತ್ತದೆ. ಆದ್ರೆ ನಾವು ಕೂದಲು ಉದುರಿದರೆ, ಉದುರಲಿ ಅಂತಾ ನಿರ್ಲಕ್ಷ್ಯ ಮಾಡದೇ, ಅದಕ್ಕೊಂದು ಪರಿಹಾರ ಹುಡುಕಿಕೊಳ್ಳಬೇಕು. ಹಾಾಗಾದ್ರೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ.

ಡಾ.ದೀಪಿಕಾ ಅವರು ಈ ಬಗ್ಗೆ ವಿವರಿಸಿದ್ದು, ಕೂದಲು ಉದುರುವ ಸಮಸ್ಯೆಗೆ ಪರಿಹಾರ ಹೇಳಿದ್ದಾರೆ. ನಿಮಗೆ ಹೆಚ್ಚು ಕೂದಲು ಉದುರುತ್ತಿದೆ ಎಂದಲ್ಲಿ ನೀವು ಮೊದಲು ನಿಮ್ಮ ಆರೋಗ್ಯವನ್ನು ಪರೀಕ್ಷಿಸಬೇಕು. ಏಕೆಂದರೆ, ಯಾರಿಗೆ ಥೈರಾಯ್ಡ್ ಇರುತ್ತದೆಯೋ, ಅಂಥವರಿಗೆ ಹೆಚ್ಚು ಕೂದಲು ಉದುರುತ್ತದೆ. ದೇಹದಲ್ಲಿ ಹಾರ್ಮೋನಲ್ ಇಂಬ್ಯಾಲೆನ್ಸ್ ಇರುವಾಗ ಕೂದಲು ಉದುರುವುದು, ಮುಖದ ಮೇಲೆ ಗುಳ್ಳೆ ಹೆಚ್ಚಾಗುವುದೆಲ್ಲ ಆಗುತ್ತದೆ.

ಇನ್ನು ಬಾಣಂತನದಲ್ಲಿ ಹೇರ್ ಫಾಲ್ ಹೆಚ್ಚಾಗಿರುತ್ತದೆ. ಹೆಚ್ಚು ಜ್ವರ ಬಂಂದ ಬಳಿಕವೂ ಹೇರ್ ಲಾಸ್ ಆಗುತ್ತದೆ. ದೇಹದಲ್ಲಿ ಐರನ್ ಸತ್ವ ಕಡಿಮೆಯಾದಾಗ, ಕೂದಲು ಉದುರಲು ಶುರುವಾಗುತ್ತದೆ. ಡಯಟ್ ಮಾಡುವಾಗ, ದೇಹಕ್ಕೆ ಬೇಕಾದ ಪೋಷಕಾಂಶ ಸಿಗದಿದ್ದಾಗ, ನಮ್ಮ ಕೂದಲು ಉದುರಲು ಶುರುವಾಗುತ್ತದೆ. ಕೆಲಸದಲ್ಲಿ ಒತ್ತಡ, ನಿದ್ರೆಹೀನತೆ ಇತ್ಯಾದಿ ಕಾರಣಗಳಿಂದಾಗಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ.

ಇದಕ್ಕಾಗಿ ನೀವು ವೈದ್ಯರ ಬಳಿ ಹೋಗಿ ಸಲಹೆ ಕೇಳಬೇಕಾಗುತ್ತದೆ. ಯಾವ ಕಾರಣಕ್ಕೆ ಕೂದಲು ಉದುರುತ್ತಿದೆ ಎಂದು ತಿಳಿದು ವೈದ್ಯರು ನಿಮಗೆ ಚಿಕಿತ್ಸೆ ನೀಡಿ, ಕೂದಲು ಉದುರುವ ಸಮಸ್ಯೆಗೆ ಪರಿಹಾರ ನೀಡುತ್ತಾರೆ. ಆದರೆ ನೀವು ಆ ಚಿಕಿತ್ಸೆಯಲ್ಲಿ ಅರ್ಧಕ್ಕೆ ನಿಲ್ಲಿಸಿದರೆ, ನಿಮ್ಮ ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ಹಾಗಾಗಿ ಇದಕ್ಕಾಗಿ ನೀವು ಸರಿಯಾದ ಚಿಕಿತ್ಸೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.

About The Author