Kannada Fact Check: ಮೊದಲೆಲ್ಲ ಇನ್‌ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್ ಓಪನ್ ಮಾಡಿದ್ರೆ, ನ್ಯಾಚುರಲ್ ಆಗಿರುವ, ಬೇರೆ ಬೇರೆ ಕಂಟೆಂಟ್ ಇರುವ ರೀಲ್ಸ್ ನೋಡಬಹುದಿತ್ತು. ಆದರೆ ಈಗ ಅರ್ಧಕ್ಕೆ ಅರ್ಧದಷ್ಟು ಎಐ ಜನರೇಟೆಡ್ ರೀಲ್ಸ್ ಕಾಣಿಸುತ್ತದೆ. ಅದೆಷ್ಟು ಸತ್ಯವೋ ಸುಳ್ಳೋ ಅಂತಾ ಗೊತ್ತೇ ಆಗುವುದಿಲ್ಲ. ಅದೇ ರೀತಿ ಸೋಶಿಯಲ್ ಮೀಡಿಯಾದಲ್ಲಿ ಇದೀಗ ರೋಲ್ಸ್ ರಾಯ್ಸ್ ಕಾರ್ ಮೇಲೆ ಬಂಡೆ ಬೀಳುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Factly ಎಂಬ ನ್ಯೂಸ್ ವೆಬ್‌ಸೈಟ್ ಈ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ್ದು, ಇದು ಎಐ ಬಳಸಿ ಮಾಡಿದ ವೀಡಿಯೋ ಎಂದು ತಿಳಿದು ಬಂದಿದೆ. realisticaivid ಎಂಬ ಚಾನೆಲ್ ಈ ವೀಡಿಯೋವನ್ನು ಅಪ್ಲೋಡ್ ಮಾಡಿದ್ದು, ಎಐ ಬಳಸಿ ಈ ಚಾನೆಲ್‌ನವರು ವೀಡಿಯೋ ಮಾಡುತ್ತಾರೆ. ಅದೇ ರೀತಿ ರೋಲ್ಸ್ ರಾಯ್ಸ್ ಕಾರನ್ನು ಬಂಡೆಯಿಂದ ಜಜ್ಜುವಂತೆ ವೀಡಿಯೋ ಜನರೇಟ್ ಮಾಡಲಾಗಿದೆ.
ಆದರೆ ಈ ವೀಡಿಯೋದಲ್ಲಿ ಕ್ರೇನ್ ಮೂಲಕ ಬಂಡೆಯೊಂದನ್ನು ಕಾರ್ ಮೇಲೆ ಹಾಕಲಾಗುತ್ತದೆ. ಆದರೆ ಕಾರಿಗೆ ಏನೂ ಡ್ಯಾಮೇಜ್ ಆಗುವುದಿಲ್ಲ. ಬದಲಾಗಿ ಬಂಡೆ ಪುಡಿ ಪುಡಿಯಾಗುತ್ತದೆ. ಹೀಗಾಗಲು ಸಾಧ್ಯವೇ ಅಂತಾ ಹಲವು ಜನರು ಕಾಮೆಂಟ್ ಮಾಡಿದ್ದಾರೆ. ಆದರೆ ಬಳಿಕ ಇದು ಎಐ ಜನರೇಟೆಡ್ ವೀಡಿಯೋ ಎಂದು ಗೊತ್ತಾಗಿದೆ.
Claim: ಎಐ ಜನರೇಟೆಡ್ ವೀಡಿಯೋದಲ್ಲಿ ರೋಲ್ಸ್ ರಾಯ್ಸ್ ಕಾರ್‌ನ ಮೇಲಿಂದ ಬಂಡೆ ಬಿದ್ದು ಒಡೆದು ಹೋದಂತೆ ವೀಡಿಯೋ ಹರಿಬಿಡಲಾಗಿದೆ.
Fact: ಆದರೆ ಇದು ಎಐ ಬಳಸಿ ಮಾಡಿದ ವೀಡಿಯೋವಾಗಿದೆ.