Tuesday, March 11, 2025

Latest Posts

ಇದು ಮುಸ್ಲಿಂರ ತುಷ್ಟೀಕರಣ ಬಜೆಟ್, ಹಲಾಲ್ ಬಜೆಟ್: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ಇದು ಮುಸ್ಲಿಂರಿಂದ ಮುಸ್ಲಿಂರಿಗಾಗಿ ಇರುವುದೇ ರಾಜ್ಯ ಬಜೆಟ್ ಎಂದು ಸಿಎಂ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಇದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಅಲ್ಲಾ. ಇದು ಒಂದೇ ಸಮುದಾಯದ ಬಜೆಟ್. ಇದು ಹಲಾಲ್ ಬಜೆಟ್. ಕುಣಿಯಲು ಬಾರದಿದ್ದವರು ನೆಲ ಡೊಂಕು ಅಂದ್ರಂತೆ ಹೀಗಾಗಿದೆ ರಾಜ್ಯ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಾರೆ. ಭಾರತ ಸರ್ಕಾರ ಸಾಲಾ ಮಾಡಿದ್ದ್ರೂ ಆರ್ಥಿಕ ಬಾಹ್ಯ ಶಿಸ್ತಿನಲ್ಲಿದೆ. ಸಿದ್ದರಾಮಯ್ಯ ಇದು ಕೊನೆಯ ಚುನಾವಣಾ ಅಂದಿದ್ದಾರೆ. ಹೀಗಾಗಿ ಸಿದ್ಧರಾಮಯ್ಯ ಕೊನೆಯಲ್ಲಿ ಹೋಗುವಾಗದ್ರು ಸತ್ಯ ಮಾತನಾಡಿಲಿ. ಸಿದ್ದರಾಮಯ್ಯ ಯಾರನ್ನು ಮೂರ್ಖರನ್ನಾಗಿಸಲು ಪ್ರಯತ್ನ ಮಾಡುತ್ತಿದ್ದಾರೆ.

ಇದೇನು ಪಾಕಿಸ್ತಾನನಾ ಬರೀ‌‌ ಮುಸ್ಲಿಂರಿಗೆ ಅಷ್ಟೇ ಸೌಲಭ್ಯ ನೀಡಲು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಯಾವ ಸಂಸ್ಕೃತಿ ಮಾಡಲು ಅವರಿಗೆ 50 ಲಕ್ಷ ಅನುದಾನ?. ಏನು ಬ್ರದರ್ಸ್ ಅಂತ ಹೇಳಿದ್ರಲ್ಲಾ ಆ ಸಂಸ್ಕೃತಿನಾ?. 159 ಹಾಸ್ಟೆಲ್ ಗಳು ಸಾಬ್ರಿಗೆ. ಮದ್ರಾಸ್ ಗಳಿಗೆ ಅನುದಾನ ನೀಡಿ ಹೆಚ್ಚು ಮೌಲ್ವಿಗಳನ್ನು ತಯಾರಿಸುತ್ತಿರಾ? ಎಂದು ಜೋಶಿ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಅವರಿಗೆ ನಾಚಿಕೆ ಆಗೋದಿಲ್ವಾ. ನೀವು ಮತ್ತು ನಿಮ್ಮ ಮಂತ್ರಿಗಳು ಎಷ್ಟು ಸುಳ್ಳು ಹೇಳತ್ತಿರಿ. ಬರೀ ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳು ವಿದೇಶಿ ಶಿಕ್ಷಣ ಪಡೆಯಬೇಕಾ?. ಬೇರೆ ಸಮುದಾಯದಲ್ಲಿ ಬಡ ವಿದ್ಯಾರ್ಥಿಗಳು ಇಲ್ವಾ?. ಅಕ್ಕಿಗಾಗಿ ರಾಜ್ಯ ಸರ್ಕಾರ ಈಗ ಕೇಂದ್ರ ಸರ್ಕಾರಕ್ಕೆ ಆರ್ಡರ್ ನೀಡಿದೆ. ನಾವು ಬೈದ ಮೇಲೆ ಅಕ್ಕಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬುದ್ಧಿ ಬಂದಿದೆ. ಹಳೇ ಹುಬ್ಬಳ್ಳಿ ಕೇಸ್ ವಾಪಸಾತಿ ಘನಘೋರ ಅನ್ಯಾಯ. ಬರೀ ಬಜೆಟ್ ಮಂಡನೆ ಅಷ್ಟೇ ಸಾಧನೆ ಆಗಬಾರದು. ದೇಶ ಹಾಳು ಮಾಡಿ, ಜಾತಿ ಮಾಡಿ , ಹಿಂದೂ, ಮುಸ್ಲಿಂ , ಕ್ರೈಸ್ತ ಅಂತ ಹೊಡೆದು, ದೇಶ ಹಾಳು ಮಾಡಬಾರದು.

ಇದನ್ನು ನಾನು ತೀವ್ರವಾಗಿ ಖಂಡನೆ ಮಾಡಲಿ. ಸಿದ್ದರಾಮಯ್ಯ ಅವರಿಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಅವರು ಪೂರ್ಣಾವಧಿ ಆಡಳಿತ ಮುಗಿಸಲಿ. ಆದರೆ ಸಿದ್ದರಾಮಯ್ಯ ಅವರು ಐದು ವರ್ಷ ಕಂಪ್ಲೀಟ್ ಮಾಡಲ್ಲ ಅಂತ ಅವರ ಶಾಸಕರು ಮತ್ತು ಮಂತ್ರಿಗಳು ಮಾತನಾಡುತ್ತಿದ್ದಾರೆ. ಬೆಂಗಳೂರೂ ವಿವಿಗೆ ಮನಮೋಹನ್ ಸಿಂಗ್ ಹೆಸರುಯಿಟ್ಟದಕ್ಕೆ ನಮ್ಮ ಬಿಜೆಪಿ ಮತ್ತು ನನ್ನ ಯಾವುದೇ ವಿರೋಧ ಇಲ್ಲ. ಮನಮೋಹನ್ ಸಿಂಗ್ ಕಾಂಗ್ರೆಸ್ ಸಾಕಷ್ಟು ನೋವು ಕೊಟ್ಟಿದೆ. ಹೀಗಾಗಿ ಆ ಸಮಯದಲ್ಲಿ ನಾವು ಮನಮೋಹನ್ ಸಿಂಗ್ ಅವರ ಬಗ್ಗೆ ಟಿಕೇ ಮಾಡಿದ್ದೆವು. ಆದರೆ ಮನಮೋಹನ್ ಸಿಂಗ್ ಒಳ್ಳೆಯ ಆರ್ಥಿಕ ತಜ್ಞ ಅವರ ಹೆಸರುಯಿಟ್ಟ್ರೆ ಏನು ಸಮಸ್ಯೆ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಇದು ಮುಸ್ಲಿಂರ ತುಷ್ಟಿಕರಣ ಬಜೆಟ್. ಕೇವಲ ಬರೀ ಬಜೆಟ್ ಅಲ್ಲಾ ಎಲ್ಲಾ ರೀತಿಯಿಂದ ಮುಸ್ಲಿಂ ತುಷ್ಟಿಕರಣ. ಹಳೇ ಹುಬ್ಬಳ್ಳಿ ಕೇಸ್ ನಲ್ಲಿ ಅಧಿಕಾರಿಗಳು ತಪ್ಪು ಜಾರ್ಜ್ ಶಿಟ್ ಹಾಕಿದ್ದ್ರೆ ಅವರ ಮೇಲೆ ಕ್ರಮ ಕೈಗೊಳ್ಳತ್ತಿರಾ?.. ಈ ರೀತಿಯ ಗಲಭೆಕೋರರ ಕೇಸ್ ವಾಪಸಾತಿಯಿಂದ ಪರೋಕ್ಷವಾಗಿ ಕಾಂಗ್ರೆಸ್ ಭಯೋತ್ಪಾದನೆಯನ್ನು ಬೆಂಬಲ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳಿಂದ ದಿವಾಳಿ ಎದ್ದಿದೆ ಎಂದು ಜೋಶಿ ವ್ಯಂಗ್ಯವಾಡಿದ್ದಾರೆ..

ಅಂಗನವಾಡಿ ಪೌಷ್ಟಿಕ ಆಹಾರ ಪದಾರ್ಥ ಕಳ್ಳತನ ಪ್ರಕರಣದಲ್ಲಿ ಪ್ರಮುಖ ಆರೋಪಿ ಬಂಧನ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಪ್ರಸಾದ್ ಅಬ್ಬಯ್ಯ, ಪೊಲೀಸ್ ಕಮಿಷನರ್ ಶಶಿಕುಮಾರ್ ಫೆಲ್ಯೂವರ್ ಅಂತ ಸದನದಲ್ಲಿ ಒಪ್ಪಿಕೊಂಡಿದ್ದಾರೆ. ಇದು ಸದನದ ಕಡತದಲ್ಲಿ ದಾಖಲಾಗುತ್ತದೆ. ಕಮಿಷನರ್ ಶಶಿಕುಮಾರ್ ದಕ್ಷ ಅಧಿಕಾರಿ.. ಅವರ ಫೆಲ್ಯೂವರ್ ಆಗಲ್ಲ. ಆದರೆ ಆಡಳಿತ ಪಕ್ಷದ ಶಾಸಕರೇ ಆರೋಪ ಮಾಡಿರುವುದರಿಂದ ಕಮಿಷನರ್ ಅವರು ಇದಕ್ಕೆ ಉತ್ತರ ನೀಡಬೇಕು.

ಯಾರ ಒತ್ತಡದಿಂದ ಕಮಿಷನರ್ ಇನ್ನೂ ಮೊದಲ ಆರೋಪಿಯನ್ನು ಬಂದಿಸಿಲ್ಲ. ಮುಖ್ಯ ಆರೋಪಿ ಒಂದು ಸಮುದಾಯಕ್ಕೆ ಸೇರಿದ್ದಾರೆ ಅಂತ ಬಂಧನವಾಗಿಲ್ಲ. ಇದೇ ಬೆರೆ ಸಮುದಾಯದವರು ಆಗಿದ್ದ್ರೆ ಇಷ್ಟೋತ್ತಿಗೆ ಬೇರೆ ಮಾಡಿತ್ತದ್ದರು. ಆರೋಪಿ ವಿಚಾರದಲ್ಲಿಯೂ ಕಾಂಗ್ರೆಸ್ ತುಷ್ಟಿಕರಣ ಮಾಡುತ್ತಿದೆ. ಕಮಿಷನರ್ ಮೇಲೆ ರಾಜ್ಯ ಸರ್ಕಾರದ ಒತ್ತಡ ಹಾಕಿದೆ. ಪ್ರಮುಖ ಆರೋಪಿ ಬಂಧನ ಮಾಡಿದ್ರೆ ಮಹಾನ್ , ಮಾಹಾನ್ ನಾಯಕರು ಹೆಸರು ಹೊರ ಬರುತ್ತೆ. ಹೀಗಾಗಿ ಪ್ರಮುಖ ಆರೋಪಿ ಬಂಧನವಾಗುತ್ತಿಲ್ಲ.

- Advertisement -

Latest Posts

Don't Miss