Mumbai News: ಪತ್ನಿ ಹಾಗೂ ಅವಳ ಚಿಕ್ಕಮ್ಮ ಇಬ್ಬರ ಕಾಟಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮುಂಬೈನ ಸಹರಾ ನಗರದ ಹೋಟೆಲ್‌ನಲ್ಲಿ 41 ವರ್ಷದ ನಿಶಾಂತ್ ತ್ರಿಪಾಠಿ ಅತ್ಮಹತ್ಯೆಗೊಳಗಾಗಿರುವ ವ್ಯಕ್ತಿಯಾಗಿದ್ದಾನೆ. ಅಲ್ಲದೆ ತಾನು ಕೆಲಸ ಮಾಡುತ್ತಿದ್ದ ಕಂಪನಿಯ ವೆಬ್ ಸೈಟ್‌ನಲ್ಲಿ ತನ್ನ ಡೆತ್‌ನೋಟ್ ಅಪ್ಲೋಡ್ ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಲ್ಲದೆ ಸಾವಿಗೂ ಮೂರು ದಿನ ಮೊದಲು ಹೋಟೆಲ್‌ಗೆ ಭೇಟಿ ನೀಡಿದ್ದ ನಿಶಾಂತ್ ತಾನು ತಂಗಿದ್ದ ಕೊಠಡಿಯ ಮುಂದೆ ಡು ನಾಟ್ ಡಿಸ್ಟರ್ಬ್, ನನಗೆ ತೊಂದರೆ ನೀಡಬೇಡಿ ಎಂಬ ಫಲಕವನ್ನು ಹಾಕಿಕೊಂಡಿದ್ದ. ಇನ್ನೂ ಇದನ್ನು ಗಮನಿಸಿದ್ದ ಅಲ್ಲಿನ ಸಿಬ್ಬಂದಿಗಳು ನಿಶಾಂತ್ ಮಲಗಿರಬೇಕೆಂದು ಕೊಠಡಿಯ ಬಾಗಿಲು ಬಡಿದು ಆತನನ್ನು ಎಚ್ಚರಗೊಳಿಸಲು ದೀರ್ಘಕಾಲದವರೆಗೂ ಪ್ರಯತ್ನಿಸಿದ್ದರು. ಆದರೆ ಕೊನೆಗೆ ಮಾಸ್ಟರ್ ಕೀ ಬಳಸಿ ಕೊಠಡಿ ತೆರದು ನೋಡಿದ್ದಾಗ ನೇಣು ಬಿಗಿದಿರುವ ಸ್ಥಿತಿಯಲ್ಲಿ ನಿಶಾಂತ್ ಶವ ಪತ್ತೆಯಾಗಿದೆ. ಇದಾದ ತಕ್ಷಣ ಹೋಟೆಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದರ ಬೆನ್ನಲ್ಲೇ ತನಿಖೆಗಿಳಿದ ಪೊಲೀಸರಿಗೆ ಸ್ಥಳದಲ್ಲಿ ಡೆತ್ ನೋಟ್ ಸಿಕ್ಕಿದೆ.
ಇನ್ನೂ ಘಟನೆಗೆ ಸಂಬಂಧಿಸಿದ್ದಂತೆ ನಿಶಾಂತ್ ತಾಯಿ ಹಾಗೂ ಮಹಿಳಾ ಹಕ್ಕುಗಳ ಹೋರಾಟಗಾರ್ತಿಯಾಗಿರುವ ನೀಲಂ ತ್ರಿಪಾಠಿ ನೀಡಿದ್ದರು. ಈ ದೂರನ್ನು ಆಧರಿಸಿ ನಿಶಾಂತ್ ಪತ್ನಿ ಅಪೂರ್ವ ಪಾರಿಖ್ ಹಾಗೂ ಅವಳ ಚಿಕ್ಕಮ್ಮ ಪ್ರಾರ್ಥನಾ ಮಿಶ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದರೂ ಸಹ ಇದುವರೆಗೂ ಪೊಲೀರು ಯಾರನ್ನು ಬಂಧಿಸಿಲ್ಲ.ಇಷ್ಟೇ ಅಲ್ಲದೆ ಮಗನನ್ನು ಕಳೆದುಕೊಂಡು ದುಖಃದಲ್ಲಿರುವ ನಿಶಾಂತ್ ತಾಯಿ, ನನ್ನ ಅಂತ್ಯಕ್ರಿಯೆಯನ್ನು ನನ್ನ ಮಗ ಮಾಡಬೇಕಿತ್ತು. ಆದರೆ ದುರಂತ ನೋಡಿ ನಾನೇ ಅವನ ಕೊನೆಗಳಿಗೆಯನ್ನು ನೋಡುವ ಸ್ಥಿತಿ ಬಂದಿದೆ. ನನ್ನ ಮಗ ನನ್ನನ್ನು ಬಿಟ್ಟು ಹೋಗಿದ್ದಾನೆ, ಇಂದು ನಾನು ಜೀವಂತ ಶವದಂತೆ ಬದುಕುವಂತಾಗಿದೆ ಎಂದು ಅವರು ಕಣ್ಣೀರಾಗಿದ್ದಾರೆ.
ನೀವು ಕಾಟ ಕೊಟ್ಟಿದ್ದು ನನ್ನ ತಾಯಿಗೆ ಗೊತ್ತಾಗಿದೆ..
ಇನ್ನೂ ನೀನು ಹಾಗೂ ನಿನ್ನ ಚಿಕ್ಕಮ್ಮ ಇಬ್ಬರು ನನಗೆ ನೀಡಿರುವ ಕಾಟವು ನನ್ನ ತಾಯಿಗೆ ಗೊತ್ತಾಗಿದೆ. ಇದರಿಂದ ಹೆಚ್ಚು ನೊಂದಿರುವ ಅವಳನ್ನು ನೀವು ಸಂರ್ಪಕಿಸಬೇಡಿ ಅವಳು ಮೌನದಿಂದಲೇ ತನ್ನ ದುಖಃವನ್ನು ವ್ಯಕ್ತಪಡಿಸಲಿ ಎಂದು ನಿಶಾಂತ್ ತನ್ನ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ. ಅಲ್ಲದೆ ನನ್ನ ಅಂತಿಮ ಕ್ಷಣಗಳಲ್ಲಿ ನಿನ್ನನ್ನು ದ್ವೇಷಿಸುವ ಬದಲು ನಾನು ಪ್ರೀತಿಯನ್ನು ಅಯ್ಕೆ ಮಾಡಿಕೊಳ್ಳುತ್ತೇನೆ. ನೀವು ಇದನ್ನು ಓದುವಷ್ಟರಲ್ಲಿ ನಾನು ಜೀವಂತವಾಗಿ ಉಳಿದಿರುವುದಿಲ್ಲ ಎಂದು ನಿಶಾಂತ್ ತನ್ನ ನೋಟ್‌ನಲ್ಲಿ ಉಲ್ಲೇಖಿಸಿದ್ದಾನೆ.
ಒಟ್ನಲ್ಲಿ.. ಗಂಡ ಹೆಂಡತಿ ಒಬ್ಬರಿಗೊಬ್ಬರು ಪರಸ್ಪರ ಅರ್ಥಮಾಡಿಕೊಂಡು ಜೀವಿಸಬೇಕು. ಅಲ್ಲದೆ ಹೆಂಡತಿಯು ಗಂಡನಿಗೆ ಬೆಂಬಲವಾಗಿರಬೇಕು ಈ ಮೂಲಕ ತನ್ನ ಕುಟುಂಬದ ಏಳ್ಗೆಯನ್ನು ಬಯಸಬೇಕು. ಆದರೆ ಈ ಪ್ರಕರಣದಲ್ಲಿ ಅತಿಥಿ ರೂಪದಲ್ಲಿಇರುವ ಅವಳ ಚಿಕ್ಕಮ್ಮಳಿಗೆ ತನ್ನ ಗಂಡನ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಕ್ಕೆ ಅವಕಾಶ ನೀಡಿರುವುದೆ ಅಪೂರ್ವ ತನ್ನ ಸಂಸಾರ ಹಾಳಾಗುವಂತೆ ಮಾಡಿಕೊಳ್ಳಲು ಇರಬೇಕಾದ ಕಾರಣಗಳಲ್ಲಿ ಒಂದಾಗಿದೆ. ಇನ್ನೂ ಹೆಂಡತಿಯ ಕಾಟವನ್ನು ಜೀವಂತವಾಗಿ ಎದುರಿಸುವ ಗಟ್ಟಿ ನಿಲುವಿನ ಜೊತೆಗೆ ಅವಳ ಚಿಕ್ಕಮ್ಮಳೂ ಸಹ ತನ್ನ ಕುಟುಂಬದ ವಿಚಾರದಲ್ಲಿ ಭಾಗಿಯಾಗದಂತೆ ಎಚ್ಚರಿಸಿದ್ದರೆ ಬಹುಶಃ ನಿಶಾಂತ್‌ನಿಗೆ ಈ ಸ್ಥಿತಿ ಬರುತ್ತಿರಲಿಲ್ಲವೇನೋ.. ಅದೇನೆ ಇರಲಿ ಸೊಸೆ ಕಿರುಕುಳಕ್ಕೆ ಮಗನನ್ನು ಕಳೆದುಕೊಂಡು ಅನಾಥವಾಗಿರುವ ತಾಯಿಯ ಸ್ಥಿತಿ ಯಾರಿಗೂ ಬರದಿರಲಿ ಅನ್ನೋದೆ ನಮ್ಮ ಆಶಯ..