Tuesday, March 11, 2025

Latest Posts

National Political News: ಮೋದಿಗೆ ಅಬ್ದುಲ್ಲಾ ಸವಾಲು.. ಗೆಲ್ತಾರಾ ಪ್ರಧಾನಿ..?

- Advertisement -

National Political News: ಭಾರತದಿಂದ ತಾನು ಕದ್ದುಕೊಂಡಿರುವ ಜಮ್ಮು ಕಾಶ್ಮೀರದ ಭೂಭಾಗವನ್ನು ಪಾಕಿಸ್ತಾನ ಮರಳಿಸಿದರೆ ಮಾತ್ರ ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ವಿವಾದಕ್ಕೆ ಅಂತ್ಯ ಹಾಡಲು ಸಾಧ್ಯವಾಗುತ್ತದೆ ಎಂಬ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಸಚಿವ ಎಸ್‌ ಜೈ‌ಶಂಕರ್ ಹೇಳಿಕೆಗೆ ಜಮ್ಮುಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿರುಗೇಟು ನೀಡಿದ್ದಾರೆ.

ಜಮ್ಮುಕಾಶ್ಮೀರದ ವಿಧಾನಸಭೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಪಾಕಿಸ್ತಾನದಿಂದ ನಮ್ಮ ರಾಜ್ಯದ ಭೂಭಾಗವನ್ನು ಮರಳಿ ಪಡೆಯಲು ಇವರನ್ನು ತಡೆಯೊಡ್ಡಿದವರು ಯಾರು? ಅಲ್ಲದೆ ಅದನ್ನು ತರದಂತೆ ನಾವ್ಯಾರಾದರೂ ಅಡ್ಡಿಯನ್ನು ಮಾಡಿದ್ದೀವಾ? ಎಂದು ಕುಟುಕಿದ್ದಾರೆ. ಕೇವಲ ಇವರು ಪಾಕ್‌ ಆಕ್ರಮಿತ ಕಾಶ್ಮೀರವನ್ನು ಮಾತ್ರವಲ್ಲ, ಅದರ ಜೊತೆಗೆ ಚೀನಾ ಅಕ್ರಮವಾಗಿ ವಶಪಡಿಸಿಕೊಂಡಿರುವ ನಮ್ಮ ರಾಜ್ಯದ ಭಾಗವನ್ನೂ ಮರಳಿ ತಂದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಾನು ಋಣಿಯಾಗಿರುತ್ತೇನೆ ಅಂತ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾರ್ಗಿಲ್‌ ಯುದ್ದದ ವೇಳೆ ಅವಕಾಶವಿತ್ತು..

ಇನ್ನೂ ಕಾರ್ಗಿಲ್ ಯುದ್ಧದ ಸಮಯದಲ್ಲಿ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಪ್ರದೇಶಗಳನ್ನು ಮರಳಿ ಪಡೆಯುವ ಅವಕಾಶವಿತ್ತು. ಈಗಲೂ ಕಾಲ ಮಿಂಚಿಲ್ಲ. ಜಮ್ಮು ಮತ್ತು ಕಾಶ್ಮೀರದ ಭೂಪಟವನ್ನು ನೋಡಿದಾಗ ಪಾಕಿಸ್ತಾನ ಕದ್ದಿರುವ ಪಿಒಕೆ ಮಾತ್ರವಲ್ಲ, ರಾಜ್ಯದ ಕೆಲವು ಭೂಭಾಗವನ್ನು ಚೀನಾ ಆಕ್ರಮಿಸಿದೆ. ಆದರೆ ಅದರ ಕುರಿತು ಏಕೆ ಮಾತನಾಡುತ್ತಿಲ್ಲ? ಎಂದು ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.

ಲಡಾಕ್ ಅನ್ನು ಜಮ್ಮು ಮತ್ತು ಕಾಶ್ಮೀರದಿಂದ ಪ್ರತ್ಯೇಕಿಸಿದ್ದನ್ನು ಬಿಜೆಪಿ ಸಮರ್ಥಿಸಿಕೊಳ್ಳುತ್ತಿದೆ. ಆದರೆ ಅಲ್ಲಿನ ಜನರಿಗೆ ಏನು ಬೇಕು ಎಂದು ಯಾವಾಗಲಾದರೂ ಕೇಳಿದ್ದೀರಾ? ಲಡಾಕ್‌ನ ಬೌದ್ಧರು ರಾಜ್ಯ ಸ್ಥಾಪನೆಯ ಕಾರಣಕ್ಕೆ ಸಿಹಿ ಹಂಚಿದರು ಎನ್ನುತ್ತಿದ್ದೀರಿ. ಲಡಾಕ್‌ನ ಜನರು ತಮ್ಮನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಮರಳಿ ಸೇರಿಸಿ ಎಂದು ಈಗ ದೆಹಲಿಗೆ ಅಲೆಯುವಂತೆ ಮಾಡಿದ್ದೀರಿ ಎಂದು ಕಿಡಿ ಕಾರಿದ್ದಾರೆ.

ಕಾಶ್ಮೀರಿ ಮಹಾರಾಜ ಹರಿಸಿಂಗ್‌ ಟೀಕಿಸಿದ್ದ ಒಮರ್‌ ವಿರುದ್ಧ ಬಿಜೆಪಿ ಕಿಡಿ..

ಇನ್ನೂ ಕಾಶ್ಮೀರದ ಮಹಾರಾಜ ಹರಿಸಿಂಗ್ ಅವರನ್ನು ಟೀಕಿಸಿದ್ದ ನ್ಯಾಷನಲ್‌ ಕಾನ್ಫನರೆನ್ಸ್‌ ಪಕ್ಷದ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದು, ಒಮರ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ನಾವು ಎಂದಿಗೂ ಮಹಾರಾಜ ಅವರ ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡಿಲ್ಲ. ಡೋಗ್ರಾ ಆಡಳಿತಗಾರರ ಹೆಸರಿನಲ್ಲಿರುವ ಯಾವುದೇ ಸಂಸ್ಥೆಯ ಹೆಸರನ್ನು ಬದಲಿಸಿಲ್ಲ ಎಂದು ಒಮರ್ ಸ್ಪಷ್ಟನೆ ನೀಡಿದ್ದಾರೆ.

- Advertisement -

Latest Posts

Don't Miss