Health Tips: ಇಂದಿನ ಕಾಲದಲ್ಲಿ ಹಲವು ಕಾರಣಗಳಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಕೆಲಸದ ಒತ್ತಡ, ಮನೆಯಲ್ಲಿ ಕೆಲ ವಿಷಯದಲ್ಲಿ ನೆಮ್ಮದಿ ಇಲ್ಲದಿರುವುದು, ಆಹಾರದಲ್ಲಿ ಏರುಪೇರು, ಹೀಗೆ ಹಲವು ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಬದೊಂದಗುತ್ತದೆ. ಈ ಬಗ್ಗೆ ವೈದ್ಯರಾದ ಡಾ.ಆಂಜೀನಪ್ಪ ಹೇಳಿದ್ದಾರೆ.
ಪುಟ್ಟ ಶಿಶುಗಳು 22 ಗಂಟೆಗಳ ಕಾಲ ಕಂಟಿನ್ಯೂ ಆಗಿ ನಿದ್ದೆ ಮಾಡುತ್ತದೆ. ಪ್ರತೀ 3 ಗಂಟೆಗೊಮ್ಮೆ ಎಬ್ಬಿಸಿ, ಅದಕ್ಕೆ ತಾಯಿ ಹಾಲುಣಿಸುತ್ತಾಳೆ. ಆದರೆ ಮಗು ಬೆಳೆಯುತ್ತಿದ್ದಂತೆ, ನಿದ್ರೆ ಕಡಿಮೆಯಾಗುತ್ತದೆ. ಕಾಲೇಜು ದಿನಕ್ಕೆ ಬರುವಾಗ, ಕ್ರಮೇಣ ನಿದ್ರಾಹೀನತೆ ಸಮಸ್ಯೆ ಕೆಲವರನ್ನು ಕಾಡುತ್ತದೆ.
ಪ್ರಾಯ ಬಂದ ಬಳಿಕ 6ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ಆದರೆ 8 ಗಂಟೆಗಳ ಕಾಲ ಎಲ್ಲರಿಗೂ ನಿದ್ರೆ ಬರುವುದಿಲ್ಲ. ಕೆಲವರು ಮಧ್ಯಾಹ್ನ ನಿದ್ರಿಸಿದರೆ, ಅಂಥವರಿಗೆ ರಾತ್ರಿ ಬೇಗ ನಿದ್ರೆ ಬರುವುದಿಲ್ಲ. ಹಾಗಾಗಿ ಅಂಥವರು ಲೇಟಾಗಿ ಮಲಗುತ್ತಾರೆ. ಬೇಗ ಏಳುವ ಹಾಗಿದ್ದರೆ, ನಿದ್ರೆ ಸಾಕಾಗುವುದಿಲ್ಲ. ಆದರೆ 8 ಗಂಟೆಗಳ ಕಾಲ ಯಾವುದೇ ತೊಂದರೆ ಇಲ್ಲದೇ, ಕಂಟಿನ್ಯೂ ಆಗಿ ನಿದ್ರಿಸಿದರೆ, ಆರೋಗ್ಯ ಅತ್ಯುತ್ತಮವಾಗಿ ಇರುತ್ತದೆ ಅಂತಾರೆ ವೈದ್ಯರು. ವೈದ್ಯರು ನಿದ್ರೆಯ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.