Health Tips: ಮೊದಲೆಲ್ಲ ಎಷ್ಟೇ ಹೊಟ್ಟೆ ನೋವಾದ್ರೂ, ಏನೇ ಆದರೂ ನಾರ್ಮಲ್ ಡಿಲೆವರಿನೇ ಆಗ್ತಿತ್ತು. ಆದರೆ ಈಗ ಹಾಗೆ ನಾರ್ಮಲ್ ಡಿಲೆವರಿ ಆಗುವವರ ಸಂಖ್ಯೆ ಕಡಿಮೆ ಇದೆ. ಸಿಸರಿನ್ ಡಿಲೆವರಿಯೇ ಹೆಚ್ಚು. ಹಾಗಾದ್ರೆ ಸಿಸರಿನ್ ಡಿಲೆವರಿ ಆಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಡಾ.ದೀಪ್ಶಿಕಾ ಎಂಬುವವರು ಸಿಸೆರಿನ್ ಡಿಲೆವರಿ ಬಗ್ಗೆ ವಿವರಿಸಿದ್ದಾರೆ. ಸದ್ಯ ಶೇ.21ರಷ್ಟು ಜನ ಸಿಸೆರಿನ್ ಮಾಡಿಸಿಕೊಳ್ಳುವವರಿದ್ದಾರೆ. ಅದೇ 2030ರ ಹೊತ್ತಿಗೆ ಸಿಸೆರಿನ್ ಮಾಡಿಸಿಕೊಳ್ಳುವವರ ಸಂಖ್ಯೆ ಶೇ.29ಕ್ಕೆ ಏರಲಿದೆ.
ಯಾಕೆ ಹೀಗಾಗಲಿದೆ ಎಂದರೆ, ಇದೊಂದು ಜೀವ ಉಳಿಸುವ ಆಪರೇಶನ್ ಅಂತಾರೆ ವೈದ್ಯರು. ದೇಹದಲ್ಲಿ ಏನಾದರೂ ಸಮಸ್ಯೆ ಆಗಿ, ತಾಯಿಯ ಜೀವ ಅಥವಾ ಮಗುವಿನ ಜೀವಕ್ಕೆ ಏನಾದರೂ ಹಾನಿಯುಂಟಾಗುತ್ತದೆ ಎಂದಲ್ಲಿ, ಸಿಸರಿನ್ ಮಾಡಲಾಗುತ್ತದೆ.
ಇನ್ನು ಸಿಸರಿನ್ ಆಗಲು ಮುಖ್ಯವಾದ ಕಾರಣ ಏನು ಅಂದ್ರೆ, ಇತ್ತೀಚಿನ ದಿನಗಳಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತಿದೆ. ಆಹಾರ ಕ್ರಮದಿಂದ , ನಮ್ಮ ಜೀವನ ಶೈಲಿಯಿಂದ ದೇಹದ ತೂಕ ಹೆಚ್ಚಾಗುತ್ತಿದೆ. ಈ ಬೊಜ್ಜಿನಿಂದಲೇ ಬಿಪಿ, ಶುಗರ್, ಕೊಲೆಸ್ಟ್ರಾಲ್ ಸಮಸ್ಯೆ ಎಲ್ಲವೂ ಬರುತ್ತದೆ. ಹಾಗಾಗಿ ಗರ್ಭಿಣಿಯಾಗುವ ಮುಂಚೆಯೂ ನೀವು ಎಚ್ಚೆತ್ತುಕೊಳ್ಳದೇ, ತೂಕ ಕಡಿಮೆ ಮಾಡಿಕೊಳ್ಳದಿದ್ದಲ್ಲಿ, ಇಂಥ ಸಮಸ್ಯೆಗಳು ಬರುತ್ತದೆ. ಈ ಬಗ್ಗೆ ಇನ್ನೂ ಹ8ೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.