Tuesday, March 11, 2025

Latest Posts

ಕುಂಭಮೇಳದಲ್ಲಿ ಸ್ನಾನಕ್ಕೆ ನೀರು ಯೋಗ್ಯವಾಗಿತ್ತು.. ತ್ರಿವೇಣಿ ಸಂಗಮದ ವಿವಿಧ ಸ್ಥಳಗಳ ನೀರಿನ ವಿಶ್ಲೇಷಣೆ..

- Advertisement -

National News: ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಗಂಗಾ ನದಿಯ ತ್ರಿವೇಣಿ ಸಂಗಮದ ನೀರು ಜನರ ಸ್ನಾನಕ್ಕೆ ಯೋಗ್ಯವಾಗಿತ್ತು. ಆ ನೀರು ಕಲುಷಿತವಾಗಿರಲಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ತಿಳಿಸಿದೆ.

ಗಂಗಾ ನದಿಯ ನೀರು ಕಲುಷಿತವಾಗಿತ್ತು, ಇದರಿಂದ ಅನೇಕರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂಬ ಮಾತುಗಳು ದೇಶದಲ್ಲಿ ಕೆಲವು ಕಡೆಗಳಲ್ಲಿ ಕೇಳಿ ಬರುತ್ತಿರುವುದರ ನಡುವೆಯೇ ಈ ವರದಿಯು ಇದೀಗ ಇನ್ನಷ್ಟು ಸದ್ದು ಮಾಡಲು ಕಾರಣವಾಗಿದೆ. ಈ ಕುರಿತು ಸಂಪೂರ್ಣ ವಿಶ್ಲೇಷಣಾತ್ಮಕ ಹಾಗೂ ಸ್ಪಷ್ಟ ಅಂಕಿ ಅಂಶಗಳನ್ನು ಒಳಗೊಂಡ ವರದಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಿದೆ.

ನಾವು ಕುಂಭಮೇಳದ ವೇಳೆ ನಿರ್ದಿಷ್ಟ ದಿನಗಳಂದು ನೀರಿನ ಮಾದರಿಯನ್ನು ಸಂಗ್ರಹಿಸಿ ಅದರಿಂದ ಬಂದ ದತ್ತಾಂಶವನ್ನು ವಿಶ್ಲೇಷಿಸಿ ನೋಡಿದಾಗ ಅದರಲ್ಲಿ ಇಡೀ ನದಿಯ ನೀರಿನ ಗುಣಮಟ್ಟವು ಕಲುಷಿತವೆಂದು ಪ್ರತಿಬಿಂಬಿತವಾಗುವುದಿಲ್ಲ. ಅಲ್ಲದೆ ಕಳೆದ ಜನವರಿ 12 ರಿಂದ ಗಂಗಾನದಿಯ ಐದು ಮತ್ತು ಯಮುನಾ ನದಿಯ ಎರಡು ಸ್ಥಳಗಳಲ್ಲಿ ವಾರಕ್ಕೆ ಎರಡು ಬಾರಿ ನೀರಿನ ಗುಣ ಮಟ್ಟವನ್ನು ಪರೀಕ್ಷೆ ನಡೆಸಲಾಗಿದೆ ಎಂದು ವರದಿಯಲ್ಲಿ ತಿಳಿಸಿದೆ. ಇನ್ನೂ ನಿಗದಿತ ಸ್ಥಳಗಳಲ್ಲಿ ಬೇರೆ ಬೇರೆ ದಿನಗಳಲ್ಲಿ ನಡೆಸಿರುವ ನೀರಿನ ಸಂಗ್ರಹಣಾ ಮಾದರಿಯಲ್ಲಿ ಕರಗಿದ ಆಮ್ಲಜನಕದ ಪ್ರಮಾಣ, ಜೀವ ರಾಸಾಯನಿಕದ ಬೇಡಿಕೆ ಹಾಗೂ ಫೀಕಲ್‌ ಕೋಲಿ ಫಾರ್ಮ್‌ ಪ್ರಮಾಣದಲ್ಲಿಯೂ ಸಹ ಗಮನಾರ್ಹವಾದ ವ್ಯತ್ಯಾಸವು ಕಂಡು ಬಂದಿದೆ ಎಂದು ಮಂಡಳಿಯು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಅಲ್ಲದೆ ನೀರಲ್ಲಿರುವ ಆಮ್ಲಜನಕ ಪ್ರಮಾಣದ ಬಗ್ಗೆ, ಜಲಚರಗಳಲ್ಲಿರುವ ಸಾವಯುವ ಪದಾರ್ಥಗಳನ್ನು ವಿಭಜನೆ ಮಾಡಲು ಸೂಕ್ಷ್ಮಾಣು ಜೀವಿಗಳಿಗೆ ಅಗತ್ಯವಿರುವ ಆಮ್ಲಜನಕ ಪ್ರಮಾಣದ ಬಗ್ಗೆಯೂ ವರದಿಯಲ್ಲಿ ಹೇಳಿದೆ. ಇನ್ನೂ ಒಳಚರಂಡಿ ನೀರಿನ ಸೇರ್ಪಡೆಯಿಂದ ಆಗಿರುವ ಮಾಲಿನ್ಯದ ಪ್ರಮಾಣದ ಕುರಿತೂ ಸಹ ಫೀಲಕ್‌ ಕೋಲಿಫಾರ್ಮ್‌ ತಿಳಿಸುತ್ತದೆ. ಕಳೆದ ಜನವರಿ 12 ರಿಂದ ಫೆಬ್ರವರಿ ತಿಂಗಳ 22ರವರೆಗೆ ಸಾಮೂಹಿಕ ಸ್ನಾನದ 10 ಸ್ಥಳಗಳಲ್ಲಿ ನೀರಿನ ಗುಣಮಟ್ಟದ ವಿಶ್ಲೇಷಣೆಯನ್ನು ಮಾಡಲಾಗಿದೆ ಎಂದು ಹೇಳಿದೆ.

ಅಲ್ಲದೆ ಇದಕ್ಕೂ ಮುನ್ನ ಫೆಬ್ರವರಿ 17ರಂದು ಪ್ರಯಾಗರಾಜ್‌ನಲ್ಲಿನ ವಿವಿಧ ಸ್ಥಳಗಳಲ್ಲಿನ ನೀರು ಸ್ನಾನ ಮಾಡಲು ಯೋಗ್ಯವಾಗಿಲ್ಲ ಎಂದು ಖುದ್ದು ಮಾಲಿನ್ಯ ನಿಯಂತ್ರಣ ಮಂಡಳಿಯೇ ವರದಿ ಸಲ್ಲಿಸಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ 7 ರಂದು ವಿಚಾರಣೆಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ನಡೆಸಲಿದೆ.

- Advertisement -

Latest Posts

Don't Miss