Health Tips: ಇಂದಿನ ಕಾಲದಲ್ಲಿ ವಿವಾಹಿತ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು, ಗರ್ಭಿಣಿಯಾಗಲು ಹೆದರುತ್ತಾರೆ. ಮಗು ಹುಟ್ಟಿದ ಬಳಿಕ, ಜವಾಬ್ದಾರಿ ಹೆಚ್ಚಾಗುತ್ತದೆ. ನಮ್ಮ ದೇಹದ ಶೇಪ್ ಹಾಳಾಗುತ್ತದೆ. ಸ್ಟ್ರೆಚ್ ಮಾರ್ಕ್ ಬೀಳುತ್ತದೆ. ಹೀಗೆ ಹಲವು ಯೋಚನೆಗಳಿಗೆ ಒಳಗಾಗಿ ಮಗು ಪಡೆಯುವ ನಿರ್ಧಾರವನ್ನೇ ಕೈ ಬಿಡುತ್ತಾರೆ. ಆದ್ರೆ ಪ್ರೆಗ್ನೆನ್ಸಿ ಅನ್ನೋದು ರೋಗವಲ್ಲ, ಮಗು ಅನ್ನೋದು ಭಾರವಲ್ಲ. ಈ ಬಗ್ಗೆ ವೈದ್ಯರಾದ ಡಾ.ದೀಪ್ಶಿಕಾ ಝಾ ಹೇಳಿದ್ದಾರೆ.
ಒಮ್ಮೆ ನೀವು ಗರ್ಭಿಣಿಯಾಗಿ, ಹೊಟ್ಟೆಯಲ್ಲಿ ಮಗುವಿನ ಓಡಾಟ ಅನುಭವಿಸುವಾಗ, ಪ್ರಪಂಚದ ಲಕ್ಕಿ ಹೆಣ್ಣು ನಾನು ಅನ್ನೋ ಅನುಭವ ನಿಮಗಾಗುತ್ತದೆ. ಅಲ್ಲದೇ, ಮಗು ಹುಟ್ಟುವುದಕ್ಕೆ ಮುನ್ನವೇ, ನಿಮ್ಮ ದೇಹದ ಬಗ್ಗೆ, ಆರೋಗ್ಯದ ಬಗ್ಗೆ, ಭವಿಷ್ಯದ ಚಿಂತೆ ಎಲ್ಲ ಮಾಯವಾಗಿ ಬಿಡತ್ತೆ. ಇನ್ನು ನೋಡೇ ಇರದ ಮಗುವಿನ ಮೇಲೆ ನಿಮಗಾಗಲೇ ಪ್ರೀತಿ ಬಂದು ಬಿಟ್ಟಿರುತ್ತದೆ. ಅದೇ ನಿಮ್ಮ ಪ್ರಪಂಚವಾಗಿಬಿಡುತ್ತದೆ.
ಗರ್ಭಿಣಿಯಾಗುವುದೆಂದರೆ ಯಾವುದೋ ರೋಗವಲ್ಲ. ಅದೊಂದು ಸುಂದರ ಅನುಭವ ಅಂತಾರೆ ವೈದ್ಯರು. ಯಾಕಂದ್ರೆ ಕೆಲವರು ಗರ್ಭಿಣಿಯಾಗಿದ್ದಾಗ, ಸುಲಭವಾಗಿ, ಆ 9 ತಿಂಗಳು ಕಳೆದುಬಿಡುತ್ತಾರೆ. ಆದರೆ ಇನ್ನು ಕೆಲವರಿಗೆ ಮೈ ಕೈ ಸೋನು, ಬಿಳಿ ಪದರ ಹೆಚ್ಚಾಗಿ ಹೋಗುವುದು, ಕಾಲು ನೋವು, ಸಡನ್ನಾಗಿ ಕಾಲು ಉಳುಕುವುದು, ಪರಿಮಳಗಳು ಕೂಡ ವಾಸನೆಗಳಾಗಿ ಪರಿವರ್ತಿತವಾಗಿ ವಾಕರಿಕೆ ತರಿಸುವುದು, ಹೀಗೆ ಇತ್ಯಾದಿ ಸಮಸ್ಯೆ ಉಂಟಾಗುತ್ತದೆ. ಆದರೆ ಇದ್ಯಾವುದೋ ರೋಗದ ಲಕ್ಷಣವಲ್ಲ. ಬದಲಾಗಿ ಇದು ಕೂಡ ಗರ್ಭಾವಸ್ಥೆಯ ಒಂದು ಭಾಗ. ಈ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.