Wednesday, March 12, 2025

Latest Posts

Telangana Crime News: ಮರ್ಯಾದೆಗೇಡು ಹತ್ಯೆ: ತೆಲಂಗಾಣದ 6 ಜನರಿಗ ಜೀವಾವಧಿ ಶಿಕ್ಷೆ : ಕೋರ್ಟ್‌ ತೀರ್ಪು

- Advertisement -

Telangana Crime News: ಕಳೆದ 2018 ರಲ್ಲಿ ತೆಲಂಗಾಣ ರಾಜ್ಯದ ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ನಡೆದಿದ್ದ ಮರ್ಯಾದೆಗೇಡು ಹತ್ಯೆಯ ಪ್ರಕರಣ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಎಸ್‌ಸಿ-ಎಸ್‌ಟಿ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಒಬ್ಬರಿಗೆ ಮರಣದಂಡನೆ ಹಾಗೂ 6 ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

ಮಿರಿಯಾಲಗುಡದ 23‌ ವರ್ಷದ ದಲಿತ ಯುವಕ ಪ್ರಣಯ್‌ ಹಾಗೂ ಮೇಲ್ಜಾತಿಯ ಯುವತಿ ಇಬ್ಬರು ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಇನ್ನೂ ಈ ವಿವಾಹಕ್ಕೆ ಯುವತಿಯ ಮನೆಯವರಿಂದ ವಿರೋಧವಿತ್ತು, ಆದರೆ ಇದನ್ನೂ ಲೆಕ್ಕಿಸದೆ ಪ್ರಣಯ್‌ ಅದೇ ಯುವತಿಯೊಂದಿಗೆ ಮದುವೆಯಾಗಿದ್ದರು. ಅಲ್ಲದೆ ನನ್ನ ಗಂಡ ಪ್ರಣಯ್ ಕೊಲೆಗೆ ತನ್ನ ತಂದೆ ಮಾರುತಿ ರಾವ್‌ ಕಾರಣ ಎಂಬ ಆರೋಪವನ್ನು ಯುವತಿ ಮಾಡಿದ್ದಳು.

ಆದರೆ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಬಿಹಾರ ಮೂಲದ ಸುಭಾಶ್ ಕುಮಾರ್‌ ಶರ್ಮಾಗೆ ಮರಣ ದಂಡನೆ ಶಿಕ್ಷೆ ವಿಧಿಸಿರುವ ನ್ಯಾಯಾಲಯವು ಇನ್ನುಳಿದ ಆರು ಜನರಿಗೆ ಜೀವಾವಧಿಯ ಶಿಕ್ಷೆಯನ್ನು ನೀಡಿ ಆದೇಶಿಸಿದೆ. ಈ ಸುಭಾಶ್‌ ಕುಮಾರ್‌ ಶರ್ಮಾ ಪ್ರಣಯ್‌ ಕೊಲೆಯ ಸಂಚನ್ನು ರೂಪಿಸಿ ಕಾರ್ಯಗತ ಮಾಡಿದ್ದನು.

ಪ್ರಣಯ್‌ ಕೊಲೆಯ ಸಂಚು ಹೇಗೆ ನಡೆದಿತ್ತು..?

ಪ್ರಮುಖವಾಗಿ ತನ್ನ ಅಳಿಯನ ಸಾವಿಗೆ ಕಾರಣನಾಗಿರುವ ಯುವತಿ ತಂದೆ ಮಾರುತಿ ರಾವ್‌, ಚಿಕ್ಕಪ್ಪ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು 2018ರ ಸಪ್ಟೆಂಬರ್‌ 18ರಂದು ಬಂಧಿಸಿದ್ದರು. ಅಲ್ಲದೆ ಅಳಿಯನ ಸಾವಿಗೆ ಸುಪಾರಿ ನೀಡಿದ್ದ ಮಾರುತಿ ರಾವ್‌ ಬರೊಬ್ಬರಿ 1 ಕೋಟಿ ರೂಪಾಯಿ ಡೀಲ್‌ ಮಾಡಿದ್ದರು. ಇನ್ನೂ ಪ್ರಣಯ್‌ ತಲೆ ಉರುಳಿಸಲು ಮುಂಗಡವಾಗಿ 15 ಲಕ್ಷ ರೂಪಾಯಿಗಳನ್ನು ನೀಡಿದ್ದರು. ಇನ್ನೂ ಈ ಮಾರ್ಯಾದೆ ಹತ್ಯೆ ಪ್ರಕರಣದಲ್ಲಿ ಯುವತಿ ತಂದೆ ಮೊದಲ ಆರೋಪಿಯಾಗಿದ್ದರೆ, ಸುಭಾಶ್‌ ಕುಮಾರ್‌ ಶರ್ಮಾ ಎರಡನೇ ಆರೋಪಿಯಾಗಿದ್ದಾನೆ. ಇನ್ನುಳಿದಂತೆ ಅಸ್ಗರ್‌ ಅಲಿ, ಬಾರಿ, ಕರೀಂ, ಶಿವ, ನಿಜಾಮ್ ಹಾಗೂ ಯುವತಿಯ ಚಿಕ್ಕಪ್ಪ ಶ್ರವಣ ಕುಮಾರ್‌ ಈ ಆರೋಪಿಗಳ ವಿರುದ್ಧ ಕಳೆದ 2019ರಲ್ಲಿ ಪೊಲೀಸರು ದೋಷಾರೋಪದ ಪಟ್ಟಿಯನ್ನು ಸಲ್ಲಿಸಿದ್ದರು.

ಇನ್ನೂ ಗುಜಾರಾತಿನ ಮಾಜಿ ಗೃಹ ಸಚಿವ ಹರೇನ್‌ ಪಾಂಡ್ಯ ಕೊಲೆ ಪ್ರಕರಣದಲ್ಲಿ ಬಿಡುಗಡೆಗೊಂಡವರಲ್ಲಿನ ಇಬ್ಬರು ಜನರು ಈ ಪ್ರಕರಣದಲ್ಲಿಆರೋಪಿಗಳಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಯುವತಿ ತಂದೆ ಮಾರುತಿ ರಾವ್‌ 2020ರಲ್ಲಿ ಹೈದ್ರಾಬಾದ್‌ನ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆ ಹೇಗಾಗಿತ್ತು..?

ತಾನು ಪ್ರೀತಿಸಿ ಮದುವೆಯಾಗಿದ್ದ ಯುವತಿಯ ತಂದೆ ರೂಪಿಸಿದ್ದ ಸಂಚಿಗೆ ಬಲಿಯಾಗಿರುವ ಪ್ರಣಯ್‌ ಕೊನೆಗಳಿಗೆ ನಿಜಕ್ಕೂ ಎಂತವರ ಕಣ್ಣಲ್ಲಿ ನೀರು ತರಿಸುತ್ತದೆ. ತನ್ನ ತಾಯಿ ಜೊತೆಯಾಗಿ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪ್ರಣಯ್‌ ವಾಪಸ್‌ ಬರುತ್ತಿದ್ದ. ಈ ವೇಳೆ ಏಕಾಏಕಿ ದುಷ್ಕರ್ಮಿಗಳು ದಾಳಿ ಮಾಡಿದ್ದರು. ಅಲ್ಲದೆ ಹೆಂಡತಿ ಹಾಗೂ ತಾಯಿಯ ಮುಂದೆಯೇ ಕೀಚಕರು ಚಾಕುವಿನಿಂದ ಹತ್ಯೆ ಮಾಡಿ ನಡುರಸ್ತೆಯಲ್ಲೇ ಪ್ರಣಯ್‌ ನೆತ್ತರು ಹರಿಸಿದ್ದರು.

ಈ ಆದೇಶ ಮಾರ್ಯಾದೆಗೇಡು ಹತ್ಯೆಗಳ ಅಂತ್ಯಕ್ಕೆ ಕಾರಣವಾಗಲಿ..

ಇನ್ನೂ ತನ್ನ ಮಗನ ಭೀಕರ ಹತ್ಯೆಯನ್ನು ಖಂಡಿಸಿರುವ ಪ್ರಣಯ್‌ ತಂದೆ, ನನ್ನ ಮಗನನ್ನು ಕಳೆದುಕೊಂಡು ನಾನು ಸಾಕಷ್ಟು ನಷ್ಟ ಅನುಭವಿಸಿದ್ದೇನೆ. ನನ್ನ ಮಗನನ್ನು ಕೊಲೆ ಮಾಡಲಾಯಿತು, ಇದರಿಂದ ನನ್ನ ಸೊಸೆ ಗಂಡನಿಲ್ಲದೆ ಕಣ್ಣೀರಲಿದ್ದರೆ, ನನ್ನ ಮೊಮ್ಮಗ ಅಪ್ಪನನ್ನು ಕಳೆದುಕೊಂಡು ನೋವಿನಲ್ಲಿದ್ದಾನೆ. ಆದರೆ ಈ ಪ್ರಕರಣದಲ್ಲಿ ಒಬ್ಬರಿಗೆ ಮರಣ ದಂಡನೆ ವಿಧಿಸಲಾಗಿದೆ, ಇನ್ನೂ ಆರು ಮಂದಿಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ. ಈ ತೀರ್ಪಿನಿಂದ ಅವರ ಕುಟುಂಬಸ್ಥರು ಹಾನಿಯನ್ನು ಅನುಭವಿಸುವಂತಾಗುತ್ತದೆ. ಅಲ್ಲದೆ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಪರಸ್ಪರ ಮಾತುಕತೆಯನ್ನು ನಡೆಸಿ ಅವುಗಳಿಗೆ ಪರಿಹಾರ ಹುಡುಕಿಕೊಳ್ಳಬೇಕು. ಆದರೆ ಯಾವುದೇ ಕಾರಣಕ್ಕೂ ಈ ರೀತಿಯ ಮಾರ್ಯಾದೆಗೇಡು ಹತ್ಯೆಗಳು ನಡೆಯಬಾರದು. ಈಗ ನೀಡಿರುವ ಆದೇಶಗಳಿಂದಾದರೂ ಇನ್ನು ಮುಂದೆ ಈ ರೀತಿಯ ಹತ್ಯೆಗಳಾಗಬಾರದು, ಈ ತೀರ್ಪು ಮರ್ಯಾದೆಗೇಡು ಹತ್ಯೆಗಳ ಅಂತ್ಯಕ್ಕೆ ಕಾರಣವಾಗುವ ವಿಶ್ವಾಸ ನನಗಿದೆ ಎಂದು ಮೃತ ಪ್ರಣಯ್‌ ತಂದೆ ಭಾವುಕರಾಗಿ ನುಡಿದಿದ್ದಾರೆ.

ಒಟ್ನಲ್ಲಿ.. ಮಾನವನ ದೇಹದಲ್ಲಿ ಹರಿಯುತ್ತಿರುವುದು ಕೆಂಪು ರಕ್ತ, ನಾವು ತಿನ್ನುವ ಅನ್ನ, ಕುಡಿಯುವ ನೀರು ಹಾಗೂ ಸೇವಿಸುವ ಗಾಳಿಯೂ ಒಂದೇ ಆಗಿದ್ದರೂ ಸಹ ಈ ಜಾತಿಯ ವಿಷಬೀಜವನ್ನು ಮನಸ್ಸಿನಲ್ಲಿಟ್ಟುಕೊಂಡು ಮರ್ಯಾದೆಯ ಹೆಸರಿನಲ್ಲಿ ಜೀವ ತೆಗೆಯುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಎಲ್ಲರೂ ಸರ್ವ ಧರ್ಮ ಸಮಭಾವ ಎಂಬ ಮಾತಿನಂತೆ ನಡೆದುಕೊಂಡಾಗ ಈ ರೀತಿಯ ಘಟನೆಗಳನ್ನು ತಡೆಯಲು ಸಾಧ್ಯವಾಗಬಹುದೇನೋ.. ಅದೇನೆ ಇರಲಿ.. ಕೇವಲ ಜಾತಿಯ ವಿಚಾರಕ್ಕೆ ಹೆತ್ತ ಮಗಳಿಗೆ ಅನ್ಯಾಯಮಾಡಿರುವ ತಂದೆ ಒಂದುಕಡೆಯಾದರೆ, ಮಗನ ಸಾವಿಗೆ ನ್ಯಾಯ ಕೇಳುತ್ತಿರುವ ಮತ್ತೊಬ್ಬ ತಂದೆ ಇನ್ನೊಂದು ಕಡೆ, ಇನ್ನೂ ಮಾಡದ ತಪ್ಪಿಗೆ ತನ್ನ ತಂದೆಯನ್ನು ಕಳೆದುಕೊಂಡ ನತದೃಷ್ಟ ಮಗು ಮಗದೊಂದು ಕಡೆ ಈ ಎಲ್ಲ ಸನ್ನಿವೇಶಗಳಿಗೆ ಕಾರಣವಾಗಿರುವುದೆಂದರೆ ಅದು ಕೇವಲ ಜಾತಿಯತೆ ಅನ್ನೋದು ಸುಳ್ಳಲ್ಲ..ಇನ್ನೂ ಮೃತ ಪ್ರಣಯ್‌ ತಂದೆ ಮಾತಿನಂತೆಯೇ, ತೆಲಂಗಾಣದ ಕೋರ್ಟ್‌ ತೀರ್ಪು ಈ ರೀತಿಯ ಅಮಾನವೀಯ ಹತ್ಯೆಗಳಿಗೆ ಕಡಿವಾಣ ಹಾಕುವುದಕ್ಕೆ ಕಾರಣವಾಗಲಿ ಎಂಬುದೇ ನಮ್ಮ ಆಶಯ..

- Advertisement -

Latest Posts

Don't Miss