- Advertisement -
Sandalwood News: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಮಗ ವಿನೀಶ್, ತಮ್ಮ ದಿನಕರ್ ತೂಗುದೀಪ, ಮದರ್ ಇಂಡಿಯಾ ಎಂದು ಹೇಳುತ್ತಿದ್ದ ಸುಮಲತಾ ಅಂಬರೀಷ್, ಅವರ ಮಗ ಅಭಿಷೇಕ್ ಅಂಬರೀಷ್ ಹೀಗೆ ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಸದ್ಯ ಫಾಲೋವಿಂಗ್ ಲೀಸ್ಟ್ ಖಾಲಿಯಾಗಿದ್ದು, ಸೊನ್ನೆ ಅಂತಾ ತೋರಿಸುತ್ತಿದೆ.
ಇದೀಗ ದರ್ಶನ್ ಮಗನನ್ನು, ತಮ್ಮನನ್ನು ಉಳಿದವರನ್ನು ಅನ್‌ಫಾಲೋ ಮಾಡಿದ್ದು ಸುದ್ದಿಯಾಗದಿದ್ದರೂ, ಅವರು ಮದರ್ ಇಂಡಿಯಾ ಎಂದು ಹೇಳುತ್ತಿದ್ದ ಸುಮಲತಾರನ್ನು ಅನ್‌ಫಾಲೋ ಮಾಡಿದ್ದು ಮಾತ್ರ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ, ಸುಮಲತಾ ಈ ಹಿಂದಿನ ಪೋಸ್ಟ್‌ನಲ್ಲಿ ತಪ್ಪನ್ನು ಮಾಡಿ, ಆ ತಪ್ಪನ್ನು ಮುಚ್ಚಿ ಹಾಕಿ, ಲೋಕದ ಮುಂದೆ ಉತ್ತಮವಾಗಿ ಉಳ್ಳವರಿಗೆ ಆಸ್ಕರ್ ಪ್ರಶಸ್ತಿ ಸಿಗುತ್ತದೆ. ಅವರು ಹೀರೋ ಎನ್ನಿಸಕೊಳ್ಳುತ್ತಾರೋ ಅನ್ನೋ ಅರ್ಥದಲ್ಲಿ ಪೋಸ್ಟ್ ಹಾಕಿದ್ದರು.
ಆದರೆ ಸುಮಲತಾ ಯಾರಿಗೆ ಈ ರೀತಿ ಪೋಸ್ಟ್ ಹಾಕಿದ್ದರು ಅಂತ ಮಾತ್ರ ಯಾರಿಗೂ ಗೊತ್ತಾಗಲಿಲ್ಲ. ಹಲವರು ಈ ಪೋಸ್ಟ್‌ನ್ನು ದರ್ಶನ್‌ಗೆ ಹೋಲಿಕೆ ಮಾಡಿಯೇ ಹಾಕಿದ್ದಾರೆ ಅಂತಲೇ ಭಾವಿಸಿದ್ದರು. ಆದರೆ ಸುಮಲತಾ ಇಂದು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿ, ದರ್ಶನ್ ಯಾವತ್ತಿದ್ದರೂ ನನ್ನ ಮಗನೇ. ಅವರಿಗೆ ನಾನು ಹಾಗೆಲ್ಲ ಹೇಳುವುದಿಲ್ಲ. ಮತ್ತು ಅವರು ನನ್ನೊಬ್ಬಳನ್ನೇ ಅಲ್ಲ, ಎಲ್ಲರನ್ನೂ ಅನ್‌ಫಾಲೋ ಮಾಡಿದ್ದಾರೆ. ಅದಕ್ಕೆ ಬೇರೆನೋ ಕಾರಣವಿರಬಹುದು ಎಂದು ಹೇಳಿದ್ದಾರೆ. ಅವರ ಸೋಶಿಯಲ್ ಮೀಡಿಯಾ ಪೋಸ್ಟ್ ಇಂತಿದೆ.
”ನನ್ನ ಹಿಂದಿನ ಒಂದು ಪೋಸ್ಟ್ ಕುರಿತು ಅನಗತ್ಯವಾದ ವಿವಾದ ಸೃಷ್ಟಿಯಾಗಿರುವುದರಿಂದ ಈ ಸ್ಪಷ್ಟನೆ ನೀಡಲು ನಾನು ಇಚ್ಛಿಸುತ್ತೇನೆ. ನನ್ನ ಪೋಸ್ಟ್ ಯಾರನ್ನಾದರೂ ಗುರಿಯಾಗಿಸಿ ಮಾಡಲಾದದ್ದಲ್ಲ; ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ಯಾರು ನನ್ನನ್ನು ಫಾಲೋ ಮಾಡುತ್ತಾರೆ ಅಥವಾ ಅನ್‌ಫಾಲೋ ಮಾಡುತ್ತಾರೆ ಎಂಬುದನ್ನು ಗಮನಿಸುವ ಅಭ್ಯಾಸ ಹೊಂದಿಲ್ಲ. ಮಾಧ್ಯಮಗಳಲ್ಲಿ ಈ ವಿಷಯದ ಬಗ್ಗೆ ಸುದ್ದಿಗಳು ಬಂದ ಬಳಿಕವೇ ನನಗೂ ಈ ಬೆಳವಣಿಗೆ ತಿಳಿಯಿತು.
ನಿಜಕ್ಕೂ, ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ – ಅವರ ಮಗನನ್ನೂ ಕೂಡ. ಇದು ಅವರ ವೈಯಕ್ತಿಕ ಆಯ್ಕೆ, ಮತ್ತು ಅದನ್ನು ಎಲ್ಲರೂ ಗೌರವಿಸಬೇಕು. ಇದನ್ನು ಬೇರೆ ರೀತಿಯಲ್ಲಿ ಅರ್ಥೈಸುವುದು ಅಗತ್ಯವಿಲ್ಲ.
ತಾಯಿ-ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದಗಳನ್ನು ಸೃಷ್ಟಿಸಬೇಡಿ ಎಂದು ಎಲ್ಲರಲ್ಲಿ ಮನವಿ ಮಾಡುತ್ತೇನೆ. ನನ್ನ ಪೋಸ್ಟ್ ಯಾರನ್ನೂ ಉದ್ದೇಶಿಸಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ. ನಾನು ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎಳೆದು ತರುವ ಅಭ್ಯಾಸವನ್ನು ಎಂದಿಗೂ ಹೊಂದಿಲ್ಲ.”
https://youtu.be/niEWCCEQrKQ
- Advertisement -