Saturday, March 15, 2025

Latest Posts

Health Tips: ನಿದ್ರೆ ಸರಿಯಾಗಿ ಬಾರದಿರಲು ಕಾರಣವೇನು..? ನಿದ್ರೆ ಮಾತ್ರೆ ಒಳ್ಳೆಯದ್ದಾ..? ಕೆಟ್ಟದ್ದಾ..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ನಿದ್ರಾಹೀನತೆ ಸಮಸ್ಯೆ ಕಾಡುತ್ತಿದೆ. ಕೆಲಸದ ಒತ್ತಡ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ನೆಮ್ಮದಿ ಇಲ್ಲದಿರುವುದು, ಹೀಗೆ ಹಲವು ಸಮಸ್ಯೆಗಳಿಂದ ನಿದ್ರಾಹೀನತೆ ಕಾಡುತ್ತದೆ. ಈ ಬಗ್ಗೆ ಡಾ.ಪವನ್ ಕುಮಾರ್ ಇನ್ನಷ್ಟು ಮಾಹಿತಿ ನೀಡಿದ್ದಾರೆ.

ವೈದ್ಯರು ಹೇಳುವ ಪ್ರಕಾರ, ನಾವು 7ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು. ನಿದ್ರೆ ಸರಿಯಾಗಿ ಆಗದಿದ್ದಲ್ಲಿ, ಆರೋಗ್ಯ ಹಾಳಾಗುತ್ತದೆ. ಕೋಪ ಬರುವುದು, ತಲೆ ನೋವಾಗುವುದು, ಸುಸ್ತಾಗುವಂಥದ್ದು, ನಾವು ಮಾಡುವ ಕೆಲಸದಲ್ಲಿ ಏಕಾಗೃತೆ ಇಲ್ಲದಿರುವುದು ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.

ಪುಟ್ಟ ಮಕ್ಕಳ ಬಯೋಲಾಜಿಕಲ್ ಕ್ಲಾಕ್ ಸೆಟ್ ಆಗಲು 7ರಿಂದ 8 ತಿಂಗಳು ಬೇಕಾಗುತ್ತದೆ. ಹಾಗಾಗಿ ಅವುಗಳು ರಾತ್ರಿ ಹೊತ್ತು ಅಳುತ್ತದೆ ಮತ್ತು ಬೆಳಗ್ಗಿನ ಜಾವ ನಿದ್ರಿಸುತ್ತದೆ. ಆದರೆ ಯಾವಾಗ 8 ತಿಂಗಳ ಬಳಿಕ ಬಯಾಲಾಜಿಕಲ್ ಕ್ಲಾಕ್ ಸೆಟ್ ಆಗುತ್ತದೆಯೋ, ಆವಾಗ ಮಕ್ಕಳು ರಾತ್ರಿ ಮಲಗಿ ಬೆಳಿಗ್ಗೆ ಬೇಗ ಏಳುತ್ತದೆ.

ಅದೇ ರೀತಿ ವಯಸ್ಸಾಗುತ್ತಾ ಹೋಗುತ್ತಿದ್ದಂತೆ, ರಾತ್ರಿ ನಿದ್ರೆ ಕಡಿಮೆಯಾಗುತ್ತದೆ. ಹಗಲು ಹೊತ್ತು ನಿದ್ರಿಸಬೇಕು ಎನ್ನಿಸುತ್ತದೆ. ಅಲ್ಲದೇ ಖಾಯಿಲೆಗಳು ಇದ್ದಾಗಲೂ, ಆ ನೋವಿಗೆ ನಿದ್ರೆ ಬರುವುದಿಲ್ಲ. ಕೆಲವರು ಇದೇ ಕಾರಣಕ್ಕೆ ನಿದ್ರೆ ಮಾತ್ರೆ ಸೇವಿಸುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು ಅಂತಾರೆ ವೈದ್ಯರು. ನಿದ್ರಾಹೀನತೆ ಸಮಸ್ಯೆ ಕಾಡುತ್ತಿದ್ದರೆ, ವೈದ್ಯರ ಬಳಿ ಈ ಬಗ್ಗೆ ಪರೀಕ್ಷಿಸಿ, ಚಿಕಿತ್ಸೆ ಪಡೆಯುವುದು ಉತ್ತಮ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss