Saturday, March 15, 2025

Latest Posts

Sandalwood News: ಅಪ್ಪುಗೆ ಜೈ ಅಂದ್ರು ದರ್ಶನ್ ಫ್ಯಾನ್‌.. ಪುನೀತ್‌ -ದರ್ಶನ್‌ ಬೇರೆ ಅಲ್ಲ!

- Advertisement -

Sandalwood News: ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶುಕ್ರವಾರ ಅಪ್ಪು ಸಿನಿಮಾ ರೀ-ರಿಲೀಸ್‌ ಆಗಿದೆ. ಎಲ್ಲೆಡೆ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಅಷ್ಟೇ ಅಲ್ಲ, ಅವರ ಫ್ಯಾನ್ಸ್ ಗಂತೂ ಅಪ್ಪು ಸಿನಿಮಾ ರೀ ರಿಲೀಸ್ ಜಾತ್ರೆಯ ಸಡಗರ ತಂದಿದೆ. ಇದರ ಮಧ್ಯೆ ದರ್ಶನ್‌ ಅಭಿಮಾನಿಯೊಬ್ಬ ‘ಅಪ್ಪು’ ಸಿನಿಮಾ ನೋಡಿರುವುದಷ್ಟೇ ಅಲ್ಲ, ಎಲ್ಲರ ಗಮನ ಸೆಳೆದಿದ್ದಾನೆ. ಅಷ್ಟಕ್ಕೂ ಗಮನ ಸೆಳೆದ ವಿಷಯ ಏನ್ ಗೊತ್ತಾ? ಪುನೀತ್‌ ಹಾಗು ದರ್ಶನ್‌ ಪರಸ್ಪರ ತಬ್ಬಿಕೊಂಡಿರೋ ಚಿತ್ರ ಬಿಡಿಸಿ ಅದಕ್ಕೊಂದು ಫ್ರೇಮ್ ಹಾಕಿಸಿಕೊಂಡು ಕೈಯಲ್ಲಿಡಿದು ಥಿಯೇಟರ್ ಮುಂದೆ ತಂದು ಪ್ರದರ್ಶಿಸಿದ್ದಾನೆ. ಆ ಮೂಲಕ ಯಾವುದೇ ಸ್ಟಾರ್​ಸ್ ವಾರ್ ಬೇಡ. ನಾವೆಲ್ಲರೂ ಕನ್ನಡಿಗರು, ಕನ್ನಡಿಗರ ಕನ್ನಡ ಸಿನಿಮಾ ನೋಡೋಣ, ಬೆಳೆಸೋಣ ಅಂತ ಮೆಸೇಜ್ ನೀಡಿದ್ದಾರೆ.

ಸ್ಟಾರ್ ವಾರ್‌ಗೆ ಬ್ರೇಕ್ ಹಾಕಲು ದರ್ಶನ್ ಅಭಿಮಾನಿಯೊಬ್ಬ ಇಂಥದ್ದೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ರೀ-ರಿಲೀಸ್ ಆಗಿರುವ ಅಪ್ಪು ಸಿನಿಮಾವನ್ನು ಥಿಯೇಟರ್‌ಗೆ ಬಂದು ವೀಕ್ಷಿಸಿ ಎಂಜಾಯ್‌ ಮಾಡಿದ್ದು, ಎಲ್ಲರಿಗೂ ಎಲ್ಲರ ಸಿನಿಮಾ ನೋಡಿ ಬೆಂಬಲಿಸಿ ಅಂದಿದ್ದಾರೆ. ಅಂದಹಾಗೆ, ದರ್ಶನ್ ಅಭಿಮಾನಿಯೊಬ್ಬ, ಫೋಟೊವೊಂದನ್ನು ತಂದಿದ್ದರು. ಅದರಲ್ಲಿ, ನಟ ದರ್ಶನ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಪರಸ್ಪರರು ಅಪ್ಪಿಕೊಂಡಿರುವ ಚಿತ್ರ ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಫೋಟೊವನ್ನು ಪ್ರದರ್ಶಿಸುವ ಮೂಲಕ ದರ್ಶನ್‌ ಅಭಿಮಾನಿ, ಸ್ಟಾರ್‌ ವಾರ್‌ ಬಿಟ್ಟು ಕನ್ನಡ ಸಿನಿಮಾ ನೋಡೋಣ ಎಂಬ ಸಂದೇಶ ರವಾನಿಸಿದ್ದಾರೆ.

ಆತನ ಹೆಸರು ರಕ್ಷಿತ್‌, ಸ್ಟಾರ್‌ ವಾರ್‌ ಮಾಡಬಾರದು ಎಂಬ ಸಂದೇಶ ನೀಡುವ ಉದ್ದೇಶದಿಂದ ಈ ಚಿತ್ರಕಲೆ ಬಿಡಿಸಿದ್ದೇನೆ. ನಮಗೆ ಪುನೀತ್‌ ರಾಜ್‌ಕುಮಾರ್‌ ಬೇರೆಯಲ್ಲ, ಡಿ ಬಾಸ್‌ ಬೇರೆಯಲ್ಲ. ಎಲ್ಲರೂ ಒಂದೇ. ಆದರೆ, ನಾನು ಡಿ ಬಾಸ್‌ನ ಜಾಸ್ತಿ ನಂಬುತ್ತೇನೆ ಎಂದು ತಿಳಿಸಿದ್ದಾರೆ. ಇಷ್ಟಕ್ಕೂ ನಾವೆಲ್ಲರೂ ಕನ್ನಡಿಗರು. ಕನ್ನಡ ಸಿನಿಮಾ ನೋಡಿ ಬೆಳೆಸಬೇಕು. ಕನ್ನಡ ಇಂಡಸ್ಟ್ರಿಯಲ್ಲಿ ಸುದೀಪ್, ಉಪೇಂದ್ರ ಅವರ ಸಿನಿಮಾಗಳನ್ನೂ ನೋಡ್ತೀನಿ.. ಆದರೆ, ಡಿ ಬಾಸ್‌ ಒಂದು ಕೈ ಮೇಲೆ. ನಾನು ಡಿ ಬಾಸ್‌ ಫ್ಯಾನ್‌ ಆಗಿರುವುದರಿಂದ ಅವರು ಒಂದು ಕೈ ಮೇಲೆ ಎಂದರು.

ಡಿ ಬಾಸ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಫ್ಯಾನ್ಸ್‌ ನಡುವೆ ಯಾವುದೇ ರೀತಿಯ ಗಲಾಟೆ ಇಲ್ಲ. ಆದರೆ, ಬೇರೆ ಬೇರೆ ವಿಚಾರಗಳಲ್ಲಿ ಫ್ಯಾನ್‌ ವಾರ್‌ ಮಾಡುವುದಕ್ಕೆ ಹೋಗಬೇಡಿ ಎಂದು ಹೇಳುವುದಕ್ಕೆ ಇಷ್ಟ ಪಡ್ತೀನಿ. ಡಿ ಬಾಸ್‌ ಫ್ಯಾನ್ಸ್‌ ಯಾವುದೇ ರೀತಿಯ ಫ್ಯಾನ್‌ ವಾರ್‌ ಮಾಡಲ್ಲ ಎಂಬುದು ಎಲ್ಲರಿಗೂ ಗೊತ್ತಾಗಬೇಕು ಅನ್ನೋದು ನಮ್ಮ ಉದ್ದೇಶ. ಈಗ ಸ್ಟಾರ್‌ ಸ್ಟಾರ್‌ಗಳೇ ಚೆನ್ನಾಗಿದ್ದಾರೆ. ನಾವು ಫ್ಯಾನ್‌ ವಾರ್‌ ಯಾಕೆ ಮಾಡಬೇಕು? ನಾವೆಲ್ಲ ಒಟ್ಟಿಗೆ ಚೆನ್ನಾಗಿರೋಣ. ಕನ್ನಡ ಸಿನಿಮಾಗಳನ್ನು ಬೆಳೆಸೋಣ ಎಂದು ತಿಳಿಸಿದರು.

- Advertisement -

Latest Posts

Don't Miss