Bollywood News: ಬಾಲಿವುಡ್ ಮಂದಿ ಆಗಾಗ ಕೆಲವೊಂದು ವಿಚಾರಗಳಿಗೆ ಸುದ್ದಿ ಆಗ್ತಾನೆ ಇರ್ತಾರೆ. ಅದರಲ್ಲೂ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಂತ ಕರೆಸಿಕೊಳ್ಳುವ ಅಮೀರ್ ಖಾನ್ ತುಸು ಜೋರಾಗಿಯೇ ಸುದ್ದಿ ಆಗ್ತಾ ಇರ್ತಾರೆ. ಅದು ಸಿನಿಮಾ ವಿಚಾರಗಳೇ ಇರಲಿ, ವೈಯಕ್ತಿಕ ಬದುಕಿನ ವಿಚಾರಗಳೇ ಇರಲಿ ನ್ಯೂಸ್ ಕಾಮನ್. ಈಗ ಹೊಸ ಸುದ್ದಿ ಏನೆಂದರೆ, ಅಮೀರ್ ಖಾನ್ ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್. ಸಿನಿ ಬದುಕಲ್ಲಿ ಹಲವಾರು ಏಳು-ಬೀಳು ಕಂಡಿರುವ ಅವರು, ಪರ್ಸನಲ್ ಲೈಫಲ್ಲೂ ಸಾಕಷ್ಟು ಏರಿಳಿತ ಕಂಡವರು. ಕೆಲವು ಸಿನಿಮಾ ಕಥೆಗಳ ಆಯ್ಕೆ ವಿಚಾರದಲ್ಲಷ್ಟೇ ಅವರು ಎಡವಿಲ್ಲ. ತಮ್ಮ ಕೌಟುಂಬಿಕ ಲೈಫಲ್ಲೂ ಎಡವಿದ್ದಾರೆ. ಎರಡು ಸಲ ಅವರು ತಮ್ಮ ಸಾಂಸಾರಿಕ ಬದುಕಿನಿಂದ ಹೊರ ಬಂದಿದ್ದಾರೆ. ಪರ್ಸನಲ್ ವಿಷಯಕ್ಕಾಗಿ ಫ್ಯಾಮಿಲಿ ಲೈಫ್ ಗೆ ಫುಲ್ ಸ್ಟಾಪ್ ಇಟ್ಟಿದ್ದೂ ಉಂಟು. ಇವೆಲ್ಲವನ್ನ ನೋಡಿದರೆ, ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂಬ ಪದ ಬರೀ ಅವರ ವೃತ್ತಿ ಬದುಕಿಗೆ ಮಾತ್ರ ಸೀಮಿತ ಅನಿಸುತ್ತೆ.
ಅದೇನೆ ಇರಲಿ, ಅಮೀರ್ ಖಾನ್ ಇದೀಗ 60ರ ಹುಟ್ಟು ಹಬ್ಬ ಆಚರಿಸಿಕೊಂಡಾಗಿದೆ. ಈ ವೇಳೆ ತಮ್ಮ ಹೊಸ ಸಂಗಾತಿ ಬಗ್ಗೆ ಮಾತಾಡಿರುವುದಷ್ಟೇ ಅಲ್ಲ, ಅವರು ಆ ಸಂಗಾತಿಯನ್ನೂ ಪರಿಚಯಿಸಿದ್ದಾರೆ. ಇಷ್ಟಕ್ಕು ಅಮೀರ್ ಖಾನ್ ಆಯ್ಕೆ ಮಾಡಿಕೊಂಡಿರುವ ಹೊಸ ಸಂಗಾತಿ ಬೆಂಗಳೂರು ಮೂಲದವರು. ಹೆಸರು ಗೌರಿ ಸ್ಟ್ರಾಟ್. ಇವರೀಗ ಅಮಿರ್ ಅವರ ಹೊಸ ಗೆಳತಿ. ಕಳೆದ ಒಂದು ಒಂದೂವರೆ ವರ್ಷದಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ ಇದ್ದ ಅಮೀರ್ ಈ ವಿಷಯವನ್ನು ಮಾಧ್ಯಮಗಳ ಮುಂದೆ ಅಧಿಕೃತವಾಗಿಯೇ ರಿವೀಲ್ ಮಾಡಿದ್ದಾರೆ. ಅಂದಹಾಗೆ ಅಮೀರ್ ಖಾನ್ ಅವರನ್ನು ಈ ವಯಸ್ಸಲ್ಲಿ ಮೋಡಿ ಮಾಡಿರುವ ಆ ಗೌರಿ ಯಾರು? ಅನ್ನುವ ಪ್ರಶ್ನೆ ಇದೀಗ ಬಾಲಿವುಡ್ ಅಂಗಳದಲ್ಲಿ ಗಿರಕಿ ಹೊಡೆಯುತ್ತಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಗೌರಿ ಸ್ಟ್ರಾಟ್ ಅವರ ಫೋಟೋ ಹರಿದಾಡುತ್ತಿದೆ. ಅದನ್ನು ನೋಡಿದ ಅಮೀರ್ ಫ್ಯಾನ್ಸ್ ಮತ್ತು ಒಂದಷ್ಟು ನೆಟ್ಟಿಗರು ಶುಭ ಹಾರೈಸಿದರೆ, ಕೆಲವರು ಹಾಲಿವುಡ್ ನಟಿಯಂತಿದ್ದಾರೆ ಅಂತ ಕಾಮೆಂಟ್ ಮಾಡುತ್ತಿದ್ದಾರೆ. ಅದಷ್ಟೇ ಅಲ್ಲ, ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿಯೊಂದಿಗೂ ಹೋಲಿಕೆ ಮಾಡುತ್ತಿದ್ದಾರೆ. ಸೆಲಿಬ್ರಿಟಿಗಳ ಇಂತಹ ಸುದ್ದಿಗೆ ಇಂತಹ ಹೋಲಿಕೆ, ಕಾಮೆಂಟ್ಸ್ ಕಾಮನ್. ಇರಲಿ, ಅಷ್ಟಕ್ಕೂ ಈ ಗೌರಿ ಸ್ಟ್ರಾಟ್ ಯಾರು? ಬೆಂಗಳೂರಿಗೂ ಈಕೆಗೂ ಏನು ಸಂಬಂಧ? ಗೌರಿ ಓದಿರೋದೇನು? ಈಕೆಯ ಬಿಜಿನೆಸ್ ಏನು ಎಂಬ ಇತ್ಯಾದಿ ಪ್ರಶ್ನೆಗಳು ಕೂಡ ಸಹಜ. ಅವೆಲ್ಲದ್ದಕ್ಕೂ ಇಲ್ಲಿದೆ ಉತ್ತರ.
ಅಮೀರ್ ಖಾನ್ ಅವರ ಹೊಸ ಗೆಳತಿ ಗೌರಿ ಸ್ಟ್ರಾಟ್ ಬೆಂಗಳೂರಿನವರು. ಆದರೆ, ಬೆಂಗಳೂರು ಇವರ ಮೂಲವಲ್ಲ. ಗೌರಿ ಅವರ ತಾಯಿ ರಿಟಾ ಸ್ಪ್ರಾಟ್ ತಮಿಳುನಾಡಿನವರು. ತಂದೆ ಐರಿಶ್ ಮೂಲದವರು. ಇವರ ಕುಟುಂಬ ಮಾತ್ರ ಹಲವು ವರ್ಷಗಳಿಂದ ಬೆಂಗಳೂರಿನಲ್ ವಾಸವಿದೆ. ಬೆಂಗಳೂರಲ್ಲೇ ಅವರ ಉದ್ಯಮವಿದೆ. ಇಲ್ಲೇ ಬದುಕು ಕಟ್ಟಿಕೊಂಡಿದ್ದಾರ.
ಗೌರಿ ಉದ್ಯಮಿ ಕೂಡ. ಗೌರಿ ತಾಯಿ ರಿಟಾ ಸ್ಪ್ರಾಟ್ ಬೆಂಗಳೂರಿನಲ್ಲಿ ಸಲೂನ್ ಬ್ರ್ಯಾಂಡ್‌ನ ಓನರ್ ಅಂತ ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಇನ್ನು ಗೌರಿಯ ಲಿಂಕ್ಡ್ ಇನ್ ಪ್ರೋಫೈಲ್‌ನಲ್ಲಿ ಬಿಬ್ಲಂಟ್ ಅನ್ನುವ ಸಲೂನ್‌ನ ಪಾರ್ಟ್ನರ್ ಎಂದು ಹೇಳಲಾಗಿದೆ. ಈ ಬ್ರ್ಯಾಂಡ್ ಸದ್ಯ ಮುಂಬೈನಲ್ಲಿದೆ. ಹೀಗಾಗಿ ಗೌರಿಗೆ ಸಿನಿಮಾರಂಗಕ್ಕಿಂತ ಹೆಚ್ಚಾಗಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.
ಗೌರಿ ಕಳೆದ 25 ವರ್ಷಗಳಿಂದ ಅಮೀರ್ ಖಾನ್ ಅವರಿಗೆ ಪರಿಚಯವಂತೆ. ಹೀಗಂತ ಸ್ವತಃ ಅಮೀರ್ ಖಾನ್ ಅವರೇ ಮಾಧ್ಯಮ ಮುಂದೆ ಹೇಳಿಕೊಂಡಿದ್ದಾರೆ. ಈ ನಡುವೆ ಸಂಪರ್ಕ ಕಳಚಿ ಹೋಗಿತ್ತು. ಕಳೆದ ಒಂದೂವರೆ ವರ್ಷದಿಂದ ಇಬ್ಬರಲ್ಲೂ ಪ್ರೀತಿ ಚಿಗುರಿದ್ದು, ಈಗ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆ. ಸದ್ಯ ಅಮೀರ್ ಖಾನ್ ಪ್ರೊಡಕ್ಷನ್ ಹೌಸ್‌ನಲ್ಲಿ ಗೌರಿ ಕೆಲಸ ಮಾಡುತ್ತಿದ್ದಾರೆ. ಅಮೀರ್ ಖಾನ್ ನಿರ್ಮಾಣದ ಸಿನಿಮಾಗಳನ್ನು ಗೌರಿ ನೋಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಗೌರಿಯೊಂದಿಗೆ ಬದುಕನ್ನು ಕಟ್ಟಿಕೊಳ್ಳುವ ಉತ್ಸಾಹದಲ್ಲಿದ್ದಾರೆ ಅಮೀರ್. ಇನ್ನು, ಸೋಶಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಗೌರಿ ಅವರನ್ನು ಹಾಲಿವುಡ್ ನಟಿಗೆ ಹೋಲಿಸಿದ್ದಾರೆ. ಅತ್ತ ಅಮೀರ್ ಗೌರಿಯ ಫೋಟೊಗಳನ್ನು ರಿವೀಲ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಅದರೂ, ನೆಟ್ಟಿಗರು ಗೌರಿ ಪೋಟೊವನ್ನು ಹುಡುಕಿ ತೆಗೆದು, ಹಾಲಿವುಡ್ ನಟಿ ಕೇಟ್ ಹೋಮ್ಸ್ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಮತ್ತೆ ಕೆಲವರು ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ ನತಾಶಾ ಸಂಕೋವಿಚ್ ಅವರನ್ನು ನೋಡಿದಂತೆ ಆಗುತ್ತಿದೆ ಎಂದಿದ್ದಾರೆ. ಇನ್ನೂ ಕೆಲವರು 60ನೇ ವಯಸ್ಸಿನಲ್ಲಿ ಸೌಂದರ್ಯದ ಗಣಿಯನ್ನು ಪಡ್ಕೊಂಡಿದ್ದಾರೆ ಅಂತಾನೂ ಕಾಮೆಂಟ್ ಮಾಡುತ್ತಿದ್ದಾರೆ.
ಅದೇನೆ ಇರಲಿ, ಅಮೀರ್ ಆಗಾಗ ಪರ್ಸನಲ್ ಲೈಫ್ ಅನ್ನು ರೀ ಫ್ರೆಶ್ ಮಾಡ್ತಾನೆ ಇದ್ದಾರೆ. ಇದು ಅವರ ರಿಯಲ್ ಬದುಕಿನ ಮೂರನೇ ಇನ್ನಿಂಗ್ಸ್. ಈಗ ಈ ಹೊಸ ಇನ್ನಿಂಗ್ಸ್ ಎಷ್ಟು ವರ್ಷಗಳ ಕಾಲ ಅಂತ ಮಾತುಗಳು ಹರಿದಾಡುತ್ತಿವೆ. ಅದಕ್ಕೆ ಹೇಳೋದು ಈ ಸೆಲಿಬ್ರಿಟಿಗಳು ಏನೇ ಮಾಡಿದರೂ ಸುದ್ದಿ ಆಗ್ತಾನೆ ಇರುತ್ತೆ. ಅದರಲ್ಲೂ ಅವರ ಪರ್ಸನಲ್ ಲೈಫ್ ನ್ಯೂಸ್ ಅಂದರೆ ಕೇಳಬೇಕೇ? ಇರಲಿ, ಸಿನಿಮಾ ಮಂದಿ ಲೈಫಲ್ಲಿ ಇವೆಲ್ಲಾ ಕಾಮನ್. ಸದ್ಯ ಅಮೀರ್ ಖಾನ್ ಹೊಸ ಗೆಳತಿ ಪರಿಚಯಿಸಿದ್ದಾರೆ. ಇವರಿಬ್ಬರ ಲೈಫ್ ಕೂಡ ಚೆನ್ನಾಗಿರಲಿ ಅನ್ನೋದು ಹಲವರ ಹಾರೈಕೆ.