Political News: ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಾಗಿ 5 ವರ್ಷ ಪೂರೈಸಿದೆ. ಈ ಕಾರಣಕ್ಕೆ ತಮ್ಮ ಆಪ್ತರನ್ನು ಕರೆದು, ಔತಣಕೂಟ ಏರ್ಪಡಿಸಿದ್ದರು.
ಈ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಬಂದು ಶುಭ ಕೋರಿದ್ದರು. ಆದರೆ ಇವರೊಂದಿಗೆ ಬಿಜೆಪಿಯ ನಾಯಕ ಎಂ.ಪಿ.ರೇಣುಕಾಚಾರ್ಯ ಕೂಡ ಬಂದು, ಶುಭ ಕೋರಿದ್ದಾರೆ ಮತ್ತು ಔತಣಕೂಟದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ರೇಣುಕಾಚಾರ್ಯ ಕಾಂಗ್ರೆಸ್ ಸೇರುತ್ತಾರಾ ಅನ್ನೋ ಪ್ರಶ್ನೆ ಹಲವರಲ್ಲಿ ಮೂಡಿದೆ.
ಬಿಜೆಪಿಯನ್ನು ರೇಣುಕಾಚಾರ್ಯರನ್ನು ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ಆರೋಪಗಳು ಹಲವು ಬಾರಿ ಕೇಳಿ ಬಂದಿತ್ತು. ಈ ಕಾರಣಕ್ಕೆ ಇದೀಗ ರೇಣುಕಾಚಾರ್ಯ ಕಾಂಗ್ರೆಸ್ ನಾಯಕರೊಂದಿಗೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಡಿಸಿಎಂ ಡಿಕೆಶಿ ನೀಡಿದ ಔತಣಕೂಟದಲ್ಲಿ ಎಂ.ಪಿ.ರೇಣುಕಾಚಾರ್ಯ ಭಾಗವಹಿಸಿದ್ದಾರೆ.
ಅಲ್ಲದೇ, ರೇಣುಕಾಚಾರ್ಯ ಜೊತೆ ತಾವು ನಿಂತಿರುವ ಫೋಟೋವನ್ನು ಖುದ್ದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಅಚ್ಚರಿ ಮೂಡಿಸಿದೆ. ಸದಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರುವ ರೇಣುಕಾಚಾರ್ಯ ಡಿಸಿಎಂ ಡಿಕೆಶಿ ಅವರನ್ನು ಭೇಟಿಯಾಗಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇನ್ನು ರಾಜಕೀಯ ವಲಯದಲ್ಲಿ ರೇಣುಕಾಚಾರ್ಯ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಲಿದ್ದಾರೆಂಬ ಮಾತು ಕೇಳಿ ಬರುತ್ತಿದೆ.
ಅದರಲ್ಲೂ ರೇಣುಕಾಚಾರ್ಯ ವಿಜಯೇಂದ್ರ ಆಪ್ತರಾಗಿದ್ದು, ಡಿಕೆಶಿಯವರನ್ನು ಭೇಟಿಯಾಗಿದ್ದು ಈ ಕುತೂಹಲಕ್ಕೆ ಕಾರಣವಾಗಿದೆ. ಹಾಸನದ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಈಗಾಗಲೇ ಕಾಾಂಗ್ರೆಸ್ ನಾಯಕರ ಜೊತೆ ಹೆಚ್ಚು ಓಡಾಡುತ್ತಿದ್ದು, ಅವರು ಕೂಡ ಕೆಲ ದಿನಗಳಲ್ಲೇ ಕಾಂಗ್ರೆಸ್ ಸೇರುವ ಎಲ್ಲ ಲಕ್ಷಣಗಳು ಕಾಣಿಸುತ್ತಿದೆ. ಹಾಗಾಗಿ ವಿಜಯೇಂದ್ರ ಆಪ್ತರ ನಡೆ ಕಾಂಗ್ರೆಸ್ ಕಡೆ ಹೋಗುತ್ತಿದೆಯಾ ಅನ್ನೋ ಪ್ರಶ್ನೆ ಉದ್ಭವಿಸಿರೋದು ಸುಳ್ಳಲ್ಲ.