ಕಸಬಾ ಕೃಷಿ ಸಹಕಾರ ಸಂಘದ ಚುನಾವಣೆ: 12ಕ್ಕೆ 12 ಸ್ಥಾನ ಗೆದ್ದ ಜೆಡಿಎಸ್, ಕಾಂಗ್ರೆಸ್‌ಗೆ ತೀವ್ರ ಮುಖಭಂಗ

Hunasuru News: ಹುಣಸೂರು ಹೈವೋಲ್ಟೇಜ್ ಚುನಾವಣೆಯಾಗಿ ಮಾರ್ಪಾಡಾಗಿದ್ದ ಕಸಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಎಲ್ಲ 12 ಸ್ಥಾನಗಳನ್ನು ಜೆಡಿಎಸ್ ಗೆದ್ದಿದ್ದು, ಕಾಂಗ್‌ರೆಸ್ ಸೋಲನುಭವಿಸಿದೆ. ಆದರೆ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು, ಪ್ರಚಾರ ಮಾಡಿದ್ದರೂ ಕೂಡ ಒಂದು ಸ್ಥಾನ ಗೆಲ್ಲದೇ, ಸೋತು ಮೂಲಕ ತೀವ್ರಮುಖಭಂಗ ಅನುಭವಿಸಿದೆ.

ಜೆಡಿಎಸ್‌ನಲ್ಲಿ ಶಾಸಕ ಜಿ.ಡಿ.ಹರೀಶ್ ಗೌಡ 334 ಮತಗಳನ್ನು ಪಡೆದು, ಅತೀ ಹೆಚ್ಚು ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ರಮೇಶ್ (273 ಮತಗಳು), ಎಸ್.ದಿವಾಕರ್ 256, ಮಹದೇವು 256, ಕೆ.ಎಸ್.ಬೀರೇಶ್ 236 ಮತಗಳೊಂದಿಗೆ ಗೆಲುವು ಸಾಧಿಸಿದ್ದಾರೆ.

ರುದ್ರಬೋವಿ 207 ಮತಗಳು, ಪುಟ್ಟರಾಜು 197 ಮತಗಳು, ಶಶಿಕಲಾ ಬಾಯಿ 211, ಸುನಂದಾ 198, ಎಂ.ಕೆ.ವಾಸೇಗೌಡ 287, ಹೆಚ್.ಸಿ.ರವಿಕುಮಾರ್ 231 ಮತಗಳನ್ನು ಗಳಿಸಿ, ಜಯಭೇರಿ ಬಾರಿಸಿದ್ದಾರೆ. ಸಾಲಗಾರರಲ್ಲದ ಕ್ಷೇತ್ರದಿಂದ ಗೀತಾ ನಿಂಗರಾಜು ಸ್ಪರ್ಧಿಸಿದ್ದು, ಫೆಬ್ರವರಿ 18ರಂದು ಚುನಾವಣೆ ನಡೆದಿತ್ತು. ಆದರೆ ಸಂಘದ ಸದಸ್ಯತ್ವ ವಜಾಗೊಳಿಸಿರುವುದನ್ನು ಪ್ರಶ್ನಿಸಿ, ಕೆಲ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿದ ನ್ಯಾಯಾಲಯ, ಮುಂದಿನ ಆದೇಶದವರೆಗೆ ಮತ ಎಣಿಕೆ ನಡೆಸದಂತೆ ಮಧ್ಯಂತರ ಆದೇಶ ನೀಡಿತ್ತು.

ನಂತರ ಮಾರ್ಚ್ 22ರಂದು ಮತ ಎಣಿಕೆಗೆ ಆದೇಶ ನೀಡಿದ್ದರನ್ವಯ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ಭಿಗಿ ಪೊಲೀಸ್ ಭದ್ರತೆಯೊಂದಿಗೆ, ಮತ ಎಣಿಕೆ ಕಾರ್ಯ ಸಂಪನ್ನಗೊಂಡಿತು. ಚುನಾವಣಾಧಿಕಾರಿ ರಾಜು ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.

ಇನ್ನು ಹರೀಶ್ ಗೌಡ ಶಾಸಕರಾಗಿ ಎರಡು ವರ್ಷ ಕಳೆದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿತ್ತು. ಇಲ್ಲಿ ಜಾತಿ ಬಲ, ಪ್ರಚಾರದ ಅಡೆತಡೆ ಎಲ್ಲವೂ ಇ್ದರೂ, ಹರೀಶ್ ಗೌಡರ ರಾಜಕೀಯ ಚಾಣಾಕ್ಷತನದಿಂದ ಅವರು ಚುನಾವಣೆಯಲ್ಲಿ ಹೆಚ್ಚಿನ ಮತದೊಂದಿಗೆ ಜಯಭೇರಿ ಬಾರಿಸಿದ್ದಾರೆ. ಅಲ್ಲದೇ 12 ಕ್ಕೆ 12 ಸ್ಥಾನವನ್ನೂ ಗೆಲ್ಲುವುದು ಅಂದ್ರೆ ಸಾಮಾನ್ಯ ವಿಷಯವಲ್ಲ. ಶಾಸಕರಾದ ಹರೀಶ್ ಗೌಡ ನೇತೃತ್ವದಲ್ಲಿ ಈ ಗೆಲುವು ಸಾಧಿಸಿರುವುದು ಕಾರ್ಯಕರ್ತ ವಿಶ್ವಾಸ ನೂರ್ಮಡಿಗೊಳಿಸಿದೆ ಎಂದು ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.

About The Author