Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಕರ್ಕ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ಕರ್ಕಾಟಕ ರಾಶಿಯವರಿಗೆ ಅಷ್ಟಮ ಶನಿ ಬಿಟ್ಟು ಹೋಗುವ ಸಮಯವಾದರೂ ಕೂಡ, ನಿಮ್ಮ ಸಿಟ್ಟನ್ನು ನೀವು ಕಂಟ್ರೋಲ್ ಮಾಡಿಕೊಂಡು ತಾಳ್ಮೆಯಿಂದ ಇರಲೇಬೇಕಾಗುತ್ತದೆ. ಅಲ್ಲದೇ, ಹಲ್ಲಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಿ.
ಇನ್ನು ಕರ್ಕಾಟಕ ರಾಶಿಯ ವಿದ್ಯಾರ್ಥಿಗಳು ನಿಮ್ಮ ಮನೆಯಲ್ಲಿದ್ದರೆ, ಅಂಥ ಮಕ್ಕಳನ್ನು ಹತ್ತನೇ ತರಗತಿ ಮುಗಿಯುವವರೆಗೂ ಹಾಸ್ಟೇಲ್ ಸೇರಿಸಬೇಡಿ. ಇನ್ನು ಕರ್ಕಾಟವ ರಾಶಿಯವರಿಗೆ ತಂದೆಯಿಂದ ಭಾರೀ ಅನುಕೂಲ ಉಂಟಾಗುತ್ತದೆ. ಇನ್ನು ಕರ್ಕಾಟಕ ರಾಶಿಯವರು ಸುಬ್‌ರಹ್ಮಣ್ಯ, ನಾಗರಾಜನ ಆರಾಧನೆ ಮಾಡಬೇಕು. ಕಾಳಹಸ್ತಿಗೆ ಹೋಗಿ ಪೂಜೆ ಮಾಡಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.