Wednesday, November 19, 2025

Latest Posts

International News: ಟ್ರಂಪ್‌ ಬ್ಲಾಕ್ಮೇಲ್‌ಗೆ ಬಗ್ಗದ ಇರಾನ್‌ : ಅಮೆರಿಕದ ಮೇಲಾಗುತ್ತಾ ದಾಳಿ..?

- Advertisement -

International News: ಅಮೆರಿಕದೊಂದಿಗೆ ಟೆಹರಾನ್‌ ಪರಮಾಣು ಒಪ್ಪಂದಕ್ಕೆ ಸಹಿ ಹಾಕಿದಿದ್ದರೆ ನಿಮ್ಮ ಮೇಲೆ ಬಾಂಬ್‌ಗಳ ದಾಳಿ ಮಾಡುತೇನೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ. ಆದರೆ ಅಮೆರಿಕದ ಈ ಹೆದರಿಕೆಗೆ ನಾವು ಜಗ್ಗುವುದು ಇಲ್ಲ, ಬಗ್ಗುವುದು ಇಲ್ಲ. ನಾವು ನಿಮ್ಮ ದಾಳಿಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಎಂದು ಇರಾನ್‌ ಟ್ರಂಪ್‌ಗೆ ತಿರುಗೇಟು ನೀಡಿದೆ.

ಇನ್ನೂ ಈ ಕುರಿತು ಮಾತನಾಡಿರುವ ಟ್ರಂಪ್‌, ನಮ್ಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇರಾನ್‌ ಸ್ಫೋಟಿಸುವುದೇ ನಮ್ಮ ಮುಂದಿರುವ ಏಕೈಕ ಆಯ್ಕೆಯಾಗಿದೆ. ಅದಕ್ಕೆ ಇರಾನ್‌ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ. ಅಲ್ಲದೆ ಪರಮಾಣು ಒಪ್ಪಂದಕ್ಕೆ ಅಂಕಿತ ಹಾಕಬೇಕು. ಇಲ್ಲವಾದರೆ ನಮ್ಮ ದಾಳಿಯನ್ನು ಎದುರಿಸಬೇಕೆಂದು ಟ್ರಂಪ್‌ ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಅಂದಹಾಗೆ ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಇದರ ಬಗ್ಗೆ ಚರ್ಚೆ ಮುಂದುವರೆಸಿದ್ದಾರೆ. ಹೀಗಾಗಿ ಇರಾನ್ ತಾನು ಕೈಗೊಂಡಿರುವ ಪರಮಾಣು ಯೋಜನೆಗಳನ್ನು ಮುಂದುವರೆಸಬಾರದು. ಕೂಡಲೇ ಅವುಗಳನ್ನು ನಿಲ್ಲಿಸಬೇಕು ಎಂಬುದು ನಮ್ಮ ನಿಲುವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಕುರಿತು ವಾಷಿಂಗ್ಟನ್ ಒಪ್ಪಂದಕ್ಕೆ ಬಾರದಿದ್ದರೆ ಬಾಂಬ್ ದಾಳಿ ಮತ್ತು ದುಪ್ಪಟ್ಟು ಸುಂಕ ವಿಧಿಸುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ.

ನಿಮ್ಮ ದಾಳಿಗೆ ನಾವು ಹೆದರುವುದಿಲ್ಲ..!

ಅಲ್ಲದೆ ಟ್ರಂಪ್‌ ಬೆದರಿಕೆಗೆ ಪ್ರತಿಕ್ರಿಯಿಸಿರುವ ಇರಾನ್‌, ನಾವು ಅಮೆರಿಕದ ದಾಳಿಗೆ ಹೆದರುವುದಿಲ್ಲ, ಪ್ರತೀಕಾರದ ದಾಳಿಗೆ ಸಿದ್ಧವಾಗಿದ್ದೇವೆ. ಇದಕ್ಕಾಗಿಯೇ ನಮಲ್ಲಿ ಅಗತ್ಯ ಕ್ಷಿಪಣಿಗಳನ್ನು ಸಿದ್ದಪಡಿಸಿ ಇಟ್ಟಿದ್ದೇವೆ, ನಾವು ಯಾವುದೇ ಕಾರಣಕ್ಕೂ ಈ ವಿಚಾರದಲ್ಲಿ ಅಮೆರಿಕದೊಂದಿಗೆ ನೇರ ಮಾತುಕತೆಗೆ ಬರುವುದಿಲ್ಲ ಎಂದು ಭವಿಷ್ಯತ್ತಿನ ಬೆಳವಣಿಗೆಗಳನ್ನು ನಿರಾಕರಿಸಿದೆ. ಇನ್ನೂ ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯಾನ್‌ ಟ್ರಂಪ್‌ ಕಳುಹಿಸಿರುವ ಪತ್ರಕ್ಕೆ ಉತ್ತರಿಸಿ, ನಾವು ನಿಮ್ಮೊಂದಿಗೆ ಮಾತುಕತೆಗೆ ಪರೋಕ್ಷವಾಗಿ ಒಪ್ಪಿಕೊಂಡಿರುವುದೇ ನಮ್ಮ ಇಂದಿನ ಸಮಸ್ಯೆಯಾಗಿದೆ. ಈ ಮೊದಲಿನಿಂದಲೂ ನಾವು ನೇರವಾಗಿ ಚರ್ಚೆ ನಡೆಸಿಲ್ಲ, ಈ ಬಾರಿಯು ಮಾತನಾಡುವುದಿಲ್ಲ ಎಂದು ಟ್ರಂಪ್‌ಗೆ ಕೌಂಟರ್‌ ನೀಡಿದ್ದಾರೆ. ಅಲ್ಲದೆ ಇರಾನ್‌, ಒಮನ್‌ ದೇಶದ ಮೂಲಕ ಅಮೆರಿಕಕ್ಕೆ ತನ್ನ ಸಂದೇಶ ರವಾನಿಸಿದೆ. ಪ್ರಮುವಾಗಿ ಟ್ರಂಪ್‌ ಯಾಕಿಷ್ಟು ಇರಾನ್‌ನ ಮೇಲೆ ಬೆಂಕಿ ಉಗುಳುತ್ತಿದ್ದಾರೆಂದು ನೋಡಿದಾಗ, ಪರಮಾಣು ಒಪ್ಪಂದದ್ದಂತೆ ನಿಗದಿತ ಮಿತಿಯಲ್ಲಿ ಯುರೇನಿಯಂ ಉತ್ಪಾದನೆಯನ್ನು ಉಲ್ಲಂಘಿಸಲಾಗುತ್ತಿದೆ ಎಂದು ಟ್ರಂಪ್‌ ಆರೋಪಿಸುತ್ತಿದ್ದಾರೆ. ಆದರೆ ಇದನ್ನು ಸಾರಾಸಗಟಾಗಿ ತಳ್ಳಿ ಹಾಕಿರುವ ಇರಾನ್‌ ಟ್ರಂಪ್‌ ಹೇಳುತ್ತಿರುವುದು ಸುಳ್ಳು ಎಂದು ಪ್ರತಿಪಾದಿಸುತ್ತಲೇ ಬರುತ್ತಿದೆ.

ಹಿಂದಿನ ಪರಿಣಾಮಗಳೇನು..?

ಅಂದಹಾಗೆ ಕಳೆದ ಜನವರಿ 2020ರಲ್ಲಿ ಬಾಗ್ದಾದ್ ಡ್ರೋನ್ ದಾಳಿಯಲ್ಲಿ ಜನರಲ್ ಖಾಸೆಮ್ ಸೊಲೈಮಾನಿ ಹತ್ಯೆಯ ಬಳಿಕ ಅಮೆರಿಕ ಹಾಗೂ ಇರಾನ್ ನಡುವಿನ ಸಂಬಂಧಗಳು ಮತ್ತಷ್ಟು ಮಸುಕಾಗಿವೆ. ಅಲ್ಲದೆ ಡೊನಾಲ್ಡ್ ಟ್ರಂಪ್ ಅಮೆರಿಕದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ನಂತರ, ಟೆಹ್ರಾನ್ ಮೇಲೆ ಪ್ರಾಬಲ್ಯ ಬೀರುವ ತಂತ್ರಕ್ಕೆ ಮುಂದಾಗಿದ್ದರು. ಇದು ಆಗ ಇರಾನ್‌ನ ಕರೆನ್ಸಿ ರಿಯಾಲ್‌ನ ಕುಸಿತಕ್ಕೆ ಕಾರಣವಾಗಿತ್ತು

ಇರಾನ್‌ ಜೊತೆ ಸಂಬಂಧ ಅಷ್ಟಕ್ಕಷ್ಟೇ..

ಇನ್ನೂ ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಅಂದರೆ 2017 ರಿಂದ 2021ರ ವರೆಗೆ ಇರಾನ್ ದೇಶದೊಂದಿಗೆ ಟ್ರಂಪ್‌ ಬಾಂಧವ್ಯ ಸರಿಯಾಗಿರಲಿಲ್ಲ. ಟ್ರಂಪ್‌ ನೀತಿ ನಿಲುವುಗಳು ಮುಸ್ಲಿಮ್‌ ದೇಶಕ್ಕೆ ಹಿಡಿಸುತ್ತಿರಲಿಲ್ಲ. ಅಲ್ಲದೆ ವಿಶ್ವದ ಹಲವು ಮುಖ್ಯವಾದ ರಾಷ್ಟ್ರಗಳ ಜೊತೆಗಿನ 2015ರ‌ ಪರಮಾಣು ಒಪ್ಪಂದಕ್ಕೆ ಅಮೆರಿಕ ಹಿಂದೇಟು ಹಾಕಿತ್ತು. ಅಲ್ಲದೆ ಈ ಒಪ್ಪಂದವು ಇರಾನ್‌ನ ಪರಮಾಣು ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಿತ್ತಾದರೂ, ಇರಾನ್‌ಗೆ ಕೆಲವು ವಿಚಾರಗಳಲ್ಲಿ ಬಂಧ ಮುಕ್ತ ಮಾಡಿತ್ತು. ಆಗ ಇದಕ್ಕೆ ಬದಲಾಗಿ ಟ್ರಂಪ್‌ ಅವರು ಇರಾನ್‌ ಮೇಲೆ ಹೊಸ ನಿರ್ಬಂಧಗಳನ್ನು ವಿಧಿಸಿದ್ದರು.

- Advertisement -

Latest Posts

Don't Miss