Wednesday, July 2, 2025

Latest Posts

National Political News: ಅಂತೂ ಮಂಡನೆಯಾಯ್ತು ವಕ್ಫ್ ಬಿಲ್‌ : ರಾಜ್ಯಗಳಿಗೆ ಸಿಗುತ್ತಾ ಪವರ್..?

- Advertisement -

National Political News: ದೇಶದಲ್ಲಿ ಬಹು ಚರ್ಚಿತವಾಗಿದ್ದ ಹಾಗೂ ಪರ- ವಿರೋಧದ ಅಲೆಯನ್ನು ಎಬ್ಬಿಸಿದ್ದ ವಕ್ಫ್‌ ತಿದ್ದುಪಡಿ ಮಸೂದೆಯು ಇಂದು ಲೋಕಸಭೆಯಲ್ಲಿ ಮಂಡನೆಯಾಗಿದೆ. ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ ಸಚಿವ ಕಿರಣ್‌ ರಿಜಿಜೂ ಅವರು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸುವುದರ ಜೊತೆಗೆ ಅದರ ವಿಸ್ತ್ರತ ವಿವರಣೆಯನ್ನು ಸದನದ ಮುಂದಿಟ್ಟರು.

ಜನರ ದಾರಿ ತಪ್ಪಿಸುತ್ತಿದ್ದಾರೆ..

ಇನ್ನೂ ಕಳೆದ 1995ರಲ್ಲಿ ಈ ಮಸೂದೆಯನ್ನು ಪರಿಚಯಿಸಿದ್ದ ವೇಳೆ ಯಾರೊಬ್ಬರು ಇದನ್ನು ವಿರೋಧಿಸಿರಲಿಲ್ಲ. ಅಲ್ಲದೆ ಈ ಹಿಂದೆಯೂ ಅನೇಕ ಬಾರಿ ತಿದ್ದುಪಡಿಯಾಗಿದ್ದರೂ ಆಗ ಈಗಿನ ಹಾಗೆ ವಿರೋಧಗಳು ಬಂದಿರಲಿಲ್ಲ. ಆದರೆ ಈಗ ನಾವು ತಿದ್ದುಪಡಿ ಮಾಡಿದ್ದನ್ನು ಅಸಂವಿಧಾನಿಕ ಅಂತ ಕೂಗಾಡುತ್ತಿದ್ದಾರೆ ಎಂದು ಅವರು ವಿಪಕ್ಷಗಳ ವಿರುದ್ಧ ಕಿಡಿ ಕಾರಿದ್ದಾರೆ.

284 ನಿಯೋಗಗಳ ಅಭಿಪ್ರಾಯ ಪಡೆದಿದ್ದೇವೆ..

ಅಲ್ಲದೆ ಪ್ರಮುಖವಾಗಿ ಈ ವಿಚಾರವಾಗಿ‌ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುವ ಒಟ್ಟು 284 ನಿಯೋಗಗಳು ಸಮಿತಿಯ ಮುಂದೆ ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಮಂಡಿಸಿವೆ. ದೇಶದ 25 ರಾಜ್ಯಗಳ ವಕ್ಫ್‌ ಬೋರ್ಡ್‌ಗಳ ಅಭಿಪ್ರಾಯ ಪಡೆಯಲಾಗಿದೆ. ಇನ್ನೂಈ ಮಸೂದೆಯ ಕುರಿತು 96ಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅಂದಹಾಗೆ ಈ ಮಸೂದೆಯ ಕುರಿತು ನಡೆದಷ್ಟು ಚರ್ಚೆ ಬೇರೆ ಯಾವುದರಲ್ಲಿಯೂ ನಡೆದಿಲ್ಲ. ಅದರೆ ಈ ಮಸೂದೆಯಿಂದ ಬಡ ಮುಸ್ಲಿಮ್‌ ಬಾಂಧವರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಗಳಿಗೆ ಅಧಿಕಾರ..

ಅಲ್ಲದೆ ವಕ್ಫ್‌ ಬೋರ್ಡ್‌ ಮೇಲೆ ಇನ್ನು ಮುಂದೆ ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ನೀಡಲಾಗುತ್ತಿದೆ. ಅಂದಹಾಗೆ ವಕ್ಫ್‌ ತಿದ್ದುಪಡಿ ಮಸೂದೆಯು ಯಾರದೇ ಭೂಮಿಯನ್ನು ವಶಪಡಿಸಿಕೊಳ್ಳುವ ತಂತ್ರವಲ್ಲ, ಇದು ಕಾನೂನಿನ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಣೆ ಮಾಡಲಿದೆ. ಈ ಬಿಲ್‌ನಿಂದ ಮಸೀದಿಗಳಿಗೆ ಯಾವುದೇ ತೊಂದರೆಯಿಲ್ಲ, ಕೇವಲ ಆಸ್ತಿ ನಿರ್ವಹಣೆಗೆ ಸಂಬಂಧಿಸಿದೆ ಎಂದು ಸಚಿವ ರಿಜಿಜು ಮಾಹಿತಿ ನೀಡಿದ್ದಾರೆ.

ನಿಮ್ಮ ಹೃದಯದಲ್ಲಿ ಬದಲಾವಣೆಯಾಗುತ್ತೆ..

ಇದು ನನ್ನ ಭರವಸೆ ಮಾತ್ರವಲ್ಲ, ಈ ಮಸೂದೆಯನ್ನು ವಿರೋಧಿಸುವವರು ಸಹ ತಮ್ಮ ಹೃದಯದಲ್ಲಿ ಬದಲಾವಣೆಯನ್ನು ಹೊಂದಿರುತ್ತಾರೆ ಎಂದು ನನಗೆ ಖಾತ್ರಿಯಿದೆ. ಪ್ರತಿಯೊಬ್ಬರೂ ಈ ಮಸೂದೆಯನ್ನು ಸಕಾರಾತ್ಮಕ ಮನೋಭಾವದಿಂದ ಬೆಂಬಲಿಸುತ್ತಾರೆ ಎಂದು ಕಿರಣ್ ರಿಜಿಜು ಆಶಯ ವ್ಯಕ್ತಪಡಿಸಿದ್ದಾರೆ. ಇನ್ನೂ ಮೊದಲಿನಿಂದಲೂ ವಕ್ಫ್‌ ತಿದ್ದುಪಡಿ ಮಸೂದೆಯನ್ನು ಬೆಂಬಲಿಸದ ವಿಪಕ್ಷಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸುವುದರ ಜೊತೆಗೆ ಸದನದಲ್ಲಿ ಕೋಲಾಹಲ ಸೃಷ್ಟಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ 8 ಗಂಟೆಗಳ ಕಾಲ ಈ ಮಸೂದೆಯ ಬಗ್ಗೆ ವಿವರವಾದ ಚರ್ಚೆಯಾಗಲಿದೆ.

ಪಕ್ಷಗಳ ಬಲಾ ಬಲ ಏನು..?

542 ಸದಸ್ಯ ಬಲದ ಲೋಕಸಭೆಯಲ್ಲಿ ಎನ್‌ಡಿಎ 293 ಸದಸ್ಯರನ್ನು ಹೊಂದಿದ್ದು, ಐಎನ್‌ಡಿಐಎ ಒಕ್ಕೂಟ 233 ಸದಸ್ಯರನ್ನು ಹೊಂದಿದೆ. ಮಸೂದೆ ಅಂಗೀಕಾರ ಪಡೆದುಕೊಳ್ಳಲು 272ಕ್ಕಿಂತ ಹೆಚ್ಚಿನ ಮತಗಳು ಅಗತ್ಯವಾಗಿವೆ.

- Advertisement -

Latest Posts

Don't Miss