Tuesday, November 18, 2025

Latest Posts

Political News: ವಕ್ಫ್‌ ಅಗ್ನಿ ಪರೀಕ್ಷೆ ಗೆದ್ದ ಮೋದಿ ಸರ್ಕಾರ : ರಾಜ್ಯಸಭೆಗೆ ಶಿಫ್ಟ್‌ ಆದ ಹಂಗಾಮಾ..!

- Advertisement -

Political News: ದೇಶಾದ್ಯಂತ ತೀವ್ರ ಪರ – ವಿರೋಧದ ಚರ್ಚೆಗೆ ಕಾರಣವಾಗಿದ್ದ ವಿವಾದಾತ್ಮಕ ವಕ್ಫ್‌ ತಿದ್ದುಪಡಿ ಮಸೂದೆಗೆ ಲೋಕಸಭೆ ಅಸ್ತು ಎಂದಿದೆ. ಸುದೀರ್ಘ 12 ಗಂಟೆಗಳ ಚರ್ಚೆಯ ಬಳಿಕ ಇಂದು ಮಧ್ಯರಾತ್ರಿ 2 ಗಂಟೆಯ ಹೊತ್ತಿಗೆ ಎಲೆಕ್ಟ್ರಾನಿಕ್ ಮತದಾನದ ಮೂಲಕ ಬಹು ಚರ್ಚಿತ ಮಸೂದೆಯು ಅಂಗೀಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ.

ಇನ್ನೂ ಬುಧವಾರವಷ್ಟೇ ಲೋಕಸಭೆಯಲ್ಲಿ ಕೇಂದ್ರ ಸಂಸದೀಯ ವ್ಯವಹಾರಗಳು ಹಾಗೂ ಅಲ್ಪಸಂಖ್ಯಾತ ಇಲಾಖೆ ಸಚಿವ ಕಿರಣ್‌ ರಿಜಿಜು ಅವರು ವಕ್ಫ್‌ ತಿದ್ದುಪಡಿ ಮಸೂದೆಯನ್ನು ಮಂಡಿಸಿದ್ದರು. ಅಲ್ಲದೆ ಸುದೀರ್ಘ ಚರ್ಚೆ, ವಾಕ್ಸಮರದ ನಡುವೆ ಮಸೂದೆ ಅಂಗೀಕಾರಗೊಂಡಿದೆ. ಅಲ್ಲದೆ ಇದು ಮುಸ್ಲಿಮರ ಹಕ್ಕನ್ನು ಕಸಿದುಕೊಳ್ಳುವ ಹುನ್ಬಾರ ಎಂದು ವಿಪಕ್ಷಗಳು ಆರೋಪಿಸಿದರೆ, ಇದು ಅಲ್ಪಸಂಖ್ಯಾತರ ಹಕ್ಕನ್ನು ರಕ್ಷಿಸುವ ಮಸೂದೆಯಾಗಿದೆ ಎಂದು ಆಡಳಿತ ಪಕ್ಷ ತಿರುಗೇಟು ನೀಡಿದೆ. ಅಲ್ಲದೆ ಸಂಸತ್‌ನ ಹೊರಗಡೆಯೂ ಸಹ ವಕ್ಫ್ ಕುರಿತು ಪರ-ವಿರೋಧದ ಚರ್ಚೆ ಜೋರಾಗಿದೆ. ಕೇಂದ್ರದ ಈ ಮಸೂದೆಗೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಮುಸ್ಲಿಂ ಸಂಘಟನೆಗಳಲ್ಲಿ ಕೆಲವು ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನೂ ಕೆಲವು ಬೆಂಬಲ ಸೂಚಿಸಿರುವುದು ವಿಶೇಷವಾಗಿದೆ.

288 ಮತಗಳಿಂದ ಮಸೂದೆ ಅಂಗೀಕಾರ..

ಅಲ್ಲದೆ ಚರ್ಚೆಯ ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರು ನಡೆಸಿದ ಮತದಾನ ಪ್ರಕ್ರಿಯೆಯಲ್ಲಿ ವಿಧೇಯಕದ ಪರ 288 ಹಾಗೂ ವಿಧೇಯಕದ ವಿರೋಧವಾಗಿ 232 ಮತಗಳು ಚಲಾವಣೆಯಾಗಿದ್ದವು. ಪ್ರತಿಪಕ್ಷಗಳು ಡಿವಿಜನ್ ಆಫ್​ ವೋಟಿಂಗ್​ ಕೇಳಿದ್ದರಿಂದ ತಲೆ ಎಣಿಕೆ ನಡೆಸಲಾಯಿತು. ಸುಮಾರು 150 ತಿದ್ದುಪಡಿಗಳನ್ನು ಮಂಡಿಸಲಾಗಿತ್ತು, ಅದರಲ್ಲಿನ ಕೆಲವು ತಿದ್ದುಪಡಿಗಳು ಪಾಸ್​ ಆದರೆ, ಕೆಲವು ಬಿದ್ದುಹೋದವು. 288 ಮತಗಳು ವಕ್ಫ್​ ತಿದ್ದುಪಡಿ ಮಸೂದೆ ಪರವೇ ಇದ್ದಿದ್ದರಿಂದ ಮಸೂದೆಯು ನಿರಾಯಾಸವಾಗಿ ಪಾಸ್​ ಆಗಿದೆ.ಇದಾದ ಬಳಿಕ ಮಸೂದೆ ಲೋಕಸಭೆಯಲ್ಲಿ ಪಾಸ್​ ಆಗಿದೆ ಎಂದು ಸ್ಪೀಕರ್​ ಓಂ ಬಿರ್ಲಾ ಅಧಿಕೃತವಾಗಿ ಘೋಷಿಣೆ ಮಾಡಿದ್ದರು.

ರಾಜ್ಯಸಭೆಯಲ್ಲೂ ಪಾಸ್‌ ಆಗುವ ಉಮೇದಿನಲ್ಲಿ ಬಿಜೆಪಿ..

ಇನ್ನೂ ಯಾವುದೇ ತೊಂದರೆಯಿಲ್ಲದೆ ಅಂದುಕೊಂಡ ಗುರಿ ಸಾಧನೆ ಮಾಡುವ ಮೂಲಕ ಸಂತಸದ ಅಲೆಯಲ್ಲಿ ತೇಲಾಡುತ್ತಿರುವ ಬಿಜೆಪಿಯು ದೇಶಾದ್ಯಂತ ಸಿಹಿ ಹಂಚಿ ಸಂಭ್ರಮಿಸುತ್ತಿದೆ. ಅಲ್ಲದೆ ಈಗಾಗಲೇ ವಕ್ಫ್‌ ಬೋರ್ಡ್‌ ಹೆಸರು ಬದಲಿಸಿ ಅದಕ್ಕೆ ಉಮ್ಮೀದ್‌ ಎಂಬ ಹೆಸರನ್ನು ಕೇಂದ್ರ ಸರ್ಕಾರ ನಾಮಕರಣ ಮಾಡಿದೆ. ಇದೀಗ ಇಂದು ರಾಜ್ಯಸಭೆಯಲ್ಲಿಯೂ ಇದೇ ರೀತಿಯಾಗಿ ಅನಾಯಾಸವಾಗಿ ಈ ಮಸೂದೆಯು ಪಾಸ್‌ ಆಗುವ ಉಮೇದಿನಲ್ಲಿ ಬಿಜೆಪಿ ಇದೆ. ಅಂದಹಾಗೆ ರಾಜ್ಯಸಭೆಯಲ್ಲಿಯೂ ಈ ಕುರಿತು ಪರ-ವಿರೋಧದ ಚರ್ಚೆಗಳ ವಾಗ್ಯುದ್ಧ ನಡೆಯುತ್ತಿವೆ. ಅದರಲ್ಲಿ ಇಂಡಿಯಾ ಮೈತ್ರಿಕೂಟ ಇದಕ್ಕೆ ಪ್ರಬಲ ವಿರೋಧ ವ್ಯಕ್ತಪಡಿಸುತ್ತಿದೆ. ಆದರೆ ಮೇಲ್ಮನೆಯಲ್ಲಿರುವ ಪಕ್ಷಗಳ ಬಲಾಬಲವನ್ನು ನೋಡಿದಾಗ ಅದು ಕೇವಲ ಸಾಂಕೇತಿಕವಾದ ವಿರೋಧ ಎನ್ನಬಹುದಾಗಿದೆ.

ಅಲ್ಲದೆ 245 ಸದಸ್ಯರಿರುವ ರಾಜ್ಯಸಭೆಯಲ್ಲಿ, ಸದ್ಯ 9 ಸ್ಥಾನಗಳು ಖಾಲಿ ಉಳಿದಿವೆ ಹೀಗಾಗಿ ಪ್ರಸ್ತುತ 236 ಸದಸ್ಯರಲ್ಲಿ 126 ಬಲವನ್ನು ಆಡಳಿತಾರೂಢ ಎನ್‌ಡಿಎ ಹೊಂದಿದೆ. ಅಂದಹಾಗೆ ಈ ಮಸೂದೆಯು ಅಂಗೀಕಾರವಾಗಲು 118 ಮತಗಳ ಅಗತ್ಯವಿದೆ, ಅಲ್ಲಿಗೆ ರಾಜ್ಯಸಭೆಯಲ್ಲಿಯೂ ಸಹ ಈ ಬಿಲ್‌ ಪಾಸ್‌ ಆಗುವುದು ಸ್ಪಷ್ಟವಾಗುತ್ತಿದೆ. 111 ಸದಸ್ಯ ಬಲದ ಇಂಡಿಯಾ ಮೈತ್ರಿಕೂಟವು ಎಷ್ಟೇ ವಿರೋಧ ಮಾಡಿದರೂ ಸಹ ಅದು ಫಲ ನೀಡದು ಎನ್ನುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಇನ್ನೂ ಇಲ್ಲಿಯೂ ಸಹ 8 ಗಂಟೆಗಳ ಕಾಲ ಚರ್ಚೆಗೆ ಅವಕಾಶ ಇರಲಿದೆ. ಬಳಿಕ ಮತದಾನ ನಡೆಯಲಿದೆ.

ರಾಷ್ಟ್ರಪತಿ ಅಂಕಿತ ಬಳಿಕ ಕಾಯ್ದೆ ರೂಪಕ್ಕೆ..

ರಾಜ್ಯಸಭೆಯಲ್ಲಿಯೂ ಬಿಲ್‌ ಪಾಸ್‌ ಆದ ಬಳಿಕ ಮುಂದೇನು ಎನ್ನುವುದನ್ನು ನೋಡಿದಾಗ ಲೋಕಸಭೆಯಲ್ಲಿ ಚರ್ಚೆ ನಡೆದಿದ್ದು, ಅಂಗೀಕಾರವಾಗಿದೆ. ಮಸೂದೆ ಅಂಗೀಕಾರವಾದರೆ ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದಂತಾಗಲಿದೆ ಹಾಗೂ ರಾಷ್ಟ್ರಪತಿಗಳ ಸಹಿಗೆ ರವಾನೆ ಆಗಲಿದೆ. ರಾಷ್ಟ್ರಪತಿಗಳು ಸಹಿ ಹಾಕಿದ ಬಳಿಕ ಮಸೂದೆಗೆ ಕಾನೂನಿನ ರೂಪ ಸಿಗಲಿದೆ. 1995ರಲ್ಲಿ ವಕ್ಫ್ ಕಾಯ್ದೆಗೆ ಮೊದಲ ತಿದ್ದುಪಡಿ ಮಾಡಲಾಯಿತು. 2013ರಲ್ಲಿ ಕಾಯ್ದೆಗೆ 2ನೇ ತಿದ್ದುಪಡಿ ತರಲಾಯಿತು. 2024ರಲ್ಲಿ 2 ಬಾರಿ ತಿದ್ದುಪಡಿ ಮಸೂದೆ ಮಂಡಿಸಲಾಯಿತು. ಈಗ ಹೊಸ ಮಸೂದೆಯಲ್ಲಿ 44 ತಿದ್ದುಪಡಿಗಳಿವೆ.

ನೂತನ ವಿಧೇಯಕದಲ್ಲಿರುವ ಅಂಶಗಳೇನು?

ಇನ್ನೂ ಯಾವುದೇ ಕಾನೂನಿನ ಅಡಿಯಲ್ಲಿ ಮುಸ್ಲಿಮರು ರಚಿಸಿದ ಟ್ರಸ್ಟ್‌ಗಳನ್ನು ಇನ್ಮುಂದೆ ವಕ್ಫ್ ಎಂದು ಪರಿಗಣಿಸಲಾಗುವುದಿಲ್ಲ. ಟ್ರಸ್ಟ್‌ಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಇದು ಖಾತ್ರಿಗೊಳಿಸುತ್ತದೆ. ಕನಿಷ್ಠ ಐದು ವರ್ಷಗಳ ಕಾಲ ಮುಸ್ಲಿಮರು ಮಾತ್ರ ತಮ್ಮ ಆಸ್ತಿಯನ್ನು ವಕ್ಫ್‌ಗೆ ನೀಡಬಹುದು. 2013ರ ಹಿಂದಿನ ನಿಯಮಗಳನ್ನು ಪುನಃ ಸ್ಥಾಪಿಸಬಹುದು. ವಿಧವೆಯರು, ವಿಚ್ಛೇದಿತ ಮಹಿಳೆಯರು ಮತ್ತು ಅನಾಥರಿಗೆ ವಿಶೇಷ ನಿಬಂಧನೆಗಳ ಮೂಲಕ ವಕ್ಫ್ ಘೋಷಣೆಗೆ ಮುನ್ನವೇ ಉತ್ತರಾಧಿಕಾರವನ್ನು ಪಡೆಯಬೇಕು. ವಕ್ಫ್​ ಆಸ್ತಿಗಳ ವಿಚಾರಗಳನ್ನು ಜಿಲ್ಲಾಧಿಕಾರಿ ಸ್ಥಾನಮಾನದ ಅಧಿಕಾರಿಗಳು ಮಾತ್ರ ತನಿಖೆ ನಡೆಸಬಹುದು. ಏನಾದರೂ ವಿವಾದವಾದಲ್ಲಿ ಈ ಆಸ್ತಿ ಸರ್ಕಾರಕ್ಕೆ ಅಥವಾ ವಕ್ಫ್​​ಗೆ ಸೇರಿದ್ದೆಂದು ಹೇಳುವ ಅಧಿಕಾರವನ್ನು ಹಿರಿಯ ಸರ್ಕಾರಿ ಅಧಿಕಾರಿ ಹೊಂದಿದ್ದಾರೆ. ಮಸೂದೆ​ ಮುಸ್ಲಿಮೇತರ ಸದಸ್ಯರೂ ಕೂಡ ರಾಜ್ಯ ಮತ್ತು ಕೇಂದ್ರ ವಕ್ಫ್​ ಮಂಡಳಿಯಲ್ಲಿ ಸೇರುವ ಕುರಿತು ಪ್ರಸ್ತಾಪಿಸಿದೆ.

- Advertisement -

Latest Posts

Don't Miss