Hubli News: ಹುಬ್ಬಳ್ಳಿ ನ್ಯೂಸ್: ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆ ಮಾತನಾಾಡಿರುವ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ವಿಜಯೇಂದ್ರನಿಗೆ ಧಮ್ ಇದ್ದರೇ ಶಾಸಕ ರಾಜೀನಾಮೆ ಕೊಟ್ಟು ಚುನಾವಣಾ ಎದುರಿಸಲಿ. ಶಿಕಾರಿಪುರಕ್ಕೆ ಅವನು ರಾಜೀನಾಮೆ ನೀಡಲಿ. ನಾನು ನನ್ನ ಕ್ಷೇತ್ರಕ್ಕೆ ರಾಜೀನಾಮೆ ನೀಡುವೆ. ನಾನು ಭಗವಾಧ್ವಜದ ಮೇಲೆ ಚುನಾವಣಾ ಎದುರಿಸುವೆ. ಮುಸ್ಲಿಂ ಮತಗಳು ನನಗೆ ಬೇಕಿಲ್ಲ, ಅವನಿಗೆ ಆ ಧಮ್ ಇದೇಯಾ..? ವಿಜಯೇಂದ್ರ ಇನ್ನೊಬ್ಬರ ಭಿಕ್ಷೆ ಮೇಲೆ ಶಾಸಕನಾದವನು. ಈ ಬಗ್ಗೆ ಡಿ.ಕೆ.ಶಿವಕುಮಾರ್ ಅವರೇ ಬಹಿರಂಗವಾಗಿ ಹೇಳಿದ್ದಾರೆ. ಕುಟುಂಬ ರಾಜಕಾರಣದಿಂದ ಬಿಜೆಪಿ ಮುಕ್ತವಾದಾಗ, ನಾನೂ ಮರಳಿ ಪಕ್ಷಕ್ಕೆ ಸೇರುವೆ ಎಂದು ಯತ್ನಾಳ್ ಹೇಳಿದ್ದಾರೆ.
ಕುಟುಂಬ ಮುಕ್ತ ಆದ ಮೇಲೆ ನಾನು ಬಿಜೆಪಿಗೆ ಹೋಗತಿನಿ. ಯಡಿಯೂರಪ್ಪ ಕುಟುಂಬದಿಂದ ಮುಕ್ತಿ ಆದ ಮೇಲೆ ಹೋಗತಿನಿ. ಒಂದು ದಿನ ಹೋಗಲೆಬೇಕು. ನಾನು ಒಳ್ಳೆಯವನು, ಆದ್ರೆ ದುಷ್ಟರಿಗೆ ನಾನು ದುಷ್ಟ. ನೀವ ಅದನ್ನೆ ಬರೀರಿ. ಪಂಚಮಸಾಲಿ ಟ್ರಸ್ಟ್ ಪ್ರಭಣ್ಣ ಲಫಂಗ..ಬದ್ಮಾಷ್. ಮಠದ ಆಸ್ತಿಯನ್ನು ಹೊಡೆದಿದ್ದಾರೆ. ಕೂಡಲ ಸಂಗಮದ ಆಸ್ತಿಯನ್ನು ತನ್ನ ಕುಟುಂಬದ ಆಸ್ತಿ ಮಾಡಿಕೊಂಡಿದ್ದಾನೆ. ವಿಜಯೇಂದ್ರ ಧಮ್ ಇದ್ರೆ ನನಗೆ ನೇರವಾಗಿ ಮಾತಾಡು. ಹಂದಿಗಳ ಕಡೆ ಮಾತಾಡಸಬೇಡಾ. ಹಂದಿಗಳು ಹೊರಗೆ ಇರಬೇಕು, ಮನೆ ಒಳಗೆ ಕರಕೋಬಾರದು. ಸ್ವಾಮಿಯಾಗಿ(ಜಂಗಮ) SC ಸರ್ಟಿಫಿಕೇಟ್ ತಗೊಂಡಿದಾನೆ ನಾಚಿಕೆ ಆಗಲ್ವಾ..? ಎಂದು ಪರೋಕ್ಷವಾಗಿ ರೇಣುಕಾಚಾರ್ಯ ವಿರುದ್ಧ ಯತ್ನಾಳ್ ಕಿಡಿಕಾರಿದ್ದಾರೆ.
ಪಂಚಮಸಾಲಿ ಹೋರಾಟದ ಸಮಯದಲ್ಲಿ ಸುವರ್ಣ ಸೌಧದ ಮುಂದೆ ಲಾಠಿ ಚಾರ್ಜ್ ಮಾಡಲಾಗಿದೆ. ಬಿಜೆಪಿ ಸರ್ಕಾರ 2ಡಿ ಮೀಸಲಾತಿ ನೀಡಿತ್ತು. ಈಗೀನ ಸರ್ಕಾರ ಮೀಸಲಾತಿ ಜಾರಿ ಮಾಡಲು ಆಸಕ್ತಿ ತೋರುತ್ತಿಲ್ಲ. ಮುಸ್ಲಿಂ ಮೀಸಲಾತಿ ನೀಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗುತ್ತಿದೆ. ಆದರೆ ರೈತಾಪಿ ವರ್ಗ ಅತೀ ಹೆಚ್ಚು ಇರುವ ಪಂಚಮಸಾಲಿ ಸಮುದಾಯಕ್ಕೆ ನೀಡುತ್ತಿಲ್ಲ. ಮಾನವೀಯತೆ ಬಿಟ್ಟು ಪಂಚಮಸಾಲಿ ಸಮುದಾಯದ ಹೋರಾಟದ ಸಮಯದಲ್ಲಿ ಹಿಗ್ಗಾಮುಗ್ಗಾ ಹೊಡೆದು ಚಿತ್ರಹಿಂಸೆ ನೀಡಲಾಗಿದೆ. ಲಾಠಿ ಜಾರ್ಜ್ ಗೈಡ್ ಲೈನ್ಸ್ ಬಿಟ್ಟು, ಮಾನವನ ಹಕ್ಕು ಉಲ್ಲಂಘನೆ ಮಾಡಿ ಪಂಚಮಸಾಲಿ ಹಲ್ಲೆ ಮಾಡಲಾಗಿದೆ. ಈ ಸರ್ಕಾರಕ್ಕೆ ಹಿಂದೂಗಳ ಮೇಲೆ ಎಷ್ಟು ದ್ವೇಷಯಿದೆ. ಅಮಾನುಷವಾಗಿ ಈ ಲಾಠಿ ಜಾರ್ಜ್ ಮಾಡಲಾಗಿದೆ. ಹೈಕೋರ್ಟ್ ಸೂಚನೆಯನ್ನು ಸ್ವಾಗತ ಮಾಡುತ್ತೆನೆ. ಸರ್ಕಾರಕ್ಕೆ ಬುದ್ಧಿ ಕಲಿಸುವ ಕಾರ್ಯ ಆಗಬೇಕು ಎಂದು ಯತ್ನಾಳ್ ಹೇಳಿದ್ದಾರೆ.
ವಿಜಯ ದಶಮಿ ವರಿಗೆ ಕಾದುನೋಡುವೆ.. ನಾನು ತಪ್ಪಾಗಿದೆ ಅಂತ ಕೈಕಾಲು ಬಿದ್ದು ಘರ ವಾಪಸಾತಿ ಆಗೋದಿಲ್ಲಾ ಗೌರವಯುತವಾಗಿ ರಾಜಕೀಯ ನಡೆಸುತ್ತೆವೆ.. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಅಂತ ಕೆಲವರು ಬೆಂಬಲ ನೀಡುತ್ತಿದ್ದಾರೆ.. ಕೆಲವರು ಹಣದ ಸಹಾಯ ಮಾಡುವೆ ಅಂತ ಹೇಳಿದ್ದಾರೆ.. ಯಡಿಯೂರಪ್ಪರನ್ನು ಬಿಜೆಪಿಗೆ ವಾಪಸಾತಿ ಮಾಡಿಸಿದ್ದೆ ನಾನು ಈ ಹಿಂದೆ ಹೊಸ ಪಕ್ಷ ಕಟ್ಟಿದವರು ಏನಾಗಿದ್ದಾರೆ ಅಂತ ಗೊತ್ತು ಹೊಸ ಪಕ್ಷ ಕಟ್ಟೊದು ಸುಲಭ ಅಲ್ಲಾ ಆದರೆ ನನ್ನ ಅಜೆಂಡಾ ಬೇರೆ.. ನನ್ನ ಚಪ್ಪಲಿ, ಹೆಣ ಸಹ ಕಾಂಗ್ರೆಸ್ ಗೆ ಹೋಗೊದಿಲ್ಲಾ.. ನಾನು ನನ್ನ ತಂದೆ ರಾಮನಗೌಡ ಹುಟ್ಟಿದ್ದೆನೆ ಅವರಿಗೆ ತಂದೆ ಎನ್ನುತ್ತೆನೆ.. ಯಾರಿಗೋ ಹುಟ್ಟಿ ಯಾರಿಗೋ ಅಪ್ಪಾಜಿ ಎನ್ನುವನು ನಾನಲ್ಲಾ. ನಾನು ಅಷ್ಟು ಹುಚ್ಚು ಸು….. ಅಲ್ಲಾ.
ಯತ್ನಾಳ ಮತ್ತೊಂದು ಹೊಸ ಬಾಂಬ್. ರಾಗಿಣಿ, ಸಂಜನಾ ಡ್ರಗ್ ಕೇಸ್ ನಲ್ಲಿ ಒಬ್ಬ ಐಪಿಎಸ್ ಕೈ ಚಳಕಯಿದೆ. ಆ ಐಪಿಎಸ್ ಅಧಿಕಾರಿ ತಾನು, ರೈಡ್ ಮಾಡಿದಾಗ ಹುಡುಗಿಯರ ಫೋನ್ ತೆಗೆದುಕೊಂಡು, ಬಿಜೆಪಿ ಮಹಾನ್ ನಾಯಕನ ಐ ಹಲೋ , ಕಮ್ ದಿಸ್ ನೈಟ್, ಕಮ್ ದಿಸ್ ಹೋಟೆಲ್, ಸೋ& ಸೊ ಮೆಸೇಜ್ ಡಿಲಿಟ್ ಮಾಡಿದ್ದಾನೆ. ಆ ಐಪಿಎಸ್ ಅಧಿಕಾರಿ ಬಿಜೆಪಿ ಮಹಾನ್ ನಾಯಕನ ಚೇಲಾ. ಈಗ ರಾಗಿಣಿ, ಸಂಜನಾ ಡ್ರಗ್ ಕೇಸ್ ಏನಾಗಿದೆ?. ಕೆಪಿಎಸ್ ಸಿ ಎಂಬುದು ದೊಡ್ಡ ಭ್ರಷ್ಟಾಚಾರದ ಕೇಂದ್ರ.. ಅದರ ಸದಸ್ಯರಾಗಲು ಕೋಟ್ಯಾಂತರ ಹಣ ನೀಡಬೇಕು.. ಕೆಪಿಎಸ್ ನೇಮಕಾತಿಯಲ್ಲಿ ಬಹಳಷ್ಟು ಕೆಟ್ಟ ಪರಿಸ್ಥಿತಿಯಿದೆ. ಈಗ ಕೆಪಿಎಸ್ ಸಿ ಯಲ್ಲಿ ಇರುವ ಚೇರ್ಮನ್ ಯಡಿಯೂರಪ್ಪರಿಗೆ ಹಣ ಕೊಟ್ಟು ಸ್ಥಾನ ಪಡೆದಿದ್ದಾನೆ. ಪುಕ್ಕಟೆಯಾಗಿ ಕೆಪಿಎಸ್ ಸಿ ಸದಸ್ಯ, ಅಧ್ಯಕ್ಷ ಆಗಲು ಆಗೋದಿಲ್ಲಾ. ಈಗಿನ ಸರ್ಕಾರ ಇದ್ದು ಸತ್ತಂತಿದೆ ಎಂದು ಯತ್ನಾಳ್ ಕಿಡಿಕಾರಿದ್ದಾರೆ.