Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಬಾಲಕಿ ಆತ್ಮಹತ್ಯೆ ಪ್ರಕರಣ ನಡೆದಿದ್ದು, ವಿವಿಧ ಸಂಸ್ಥೆಗಳು ಬಾಲಕಿಯ ಕುಟುಂಬಕ್ಕೆ ನೆರವಿನ ಹಸ್ತ ನೀಡಿದೆ.
ಹುಬ್ಬಳ್ಳಿಯಲ್ಲಿರುವ ಬಾಲಕಿಯ ಮನೆಗೆ ಕೆಜೆಪಿ ಫೌಂಡೇಶನ್ ಸದಸ್ಯರು ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬಿದ್ದಾರೆ. ಅಲ್ಲದೇ ಫೌಂಡೇಶನ್ ಅಧ್ಯಕ್ಷ ಶ್ರೀಗಂಧ ಶೇಟ್, ಸಹಾಯ ಹಸ್ತ ಚಾಚಿದ್ದಾರೆ. ಅಂಗವಿಕಲತೆಯಿಂದ ಬಳಲುತ್ತಿರುವ ಮೃತ ಬಾಲಕಿಯ ಹಿರಿಯ ಸಹೋದರಿಯ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ ವಹಿಸಿದ್ದಾರೆ.
ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿರುವ ಶ್ರೀಗಂಧ್, ಬಿಹಾರಿ ಮೂಲದ ವ್ಯಕ್ತಿ ಬಾಲಕಿ ಹತ್ಯೆ ಮಾಡಿದ್ದ. ಅವರ ತಂದೆ -ತಾಯಿಯನ್ನ ಮಾತನಾಡಿಸಲು ಬಂದೆ. ಅವರ ಕಣ್ಣೀರು ನೋಡಿ ಬಹಳ ಸಂಕಟ ಆಗ್ತಿದೆ. ಆರೋಪಿಯ ಮನಸ್ಥಿತಿ ಹೇಗಿತ್ತು ಇಂತ ಕೆಲಸ ಮಾಡೋಕೆ. ನಮ್ಮ ಫೌಂಡೇಶನ್ ನಿಂದ ಬಾಲಕಿಯ ಸಹೋದರಿಯ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡಿದ್ದೇವೆ. ಮೃತ ಬಾಲಕಿಯ ಸಹೋದರಿಯಾ ವಿದ್ಯಾಭ್ಯಾಸ ಸೇರಿ ಸಂಪೂರ್ಣ ಜವಾಬ್ದಾರಿ ನಾವು ತೆಗೆದುಕೊಂಡಿದ್ದೇವೆ. ಅವರು ಯಾವುದೇ ಶಾಲೆ ಆಗಲಿ ಯಾವುದೇ ವ್ಯಾಸಂಗಕ್ಕೂ ನಾವು ಅದರ ಖರ್ಚು ನೋಡಿಕೊಳ್ತೇವೆ. ಕುಟುಂಬಸ್ಥರು ಈ ನೋವಿನಿಂದ ಹೊರ ಬಂದ ಮೇಲೆ ಅಗ್ರಿಮೆಂಟ್ ಮಾಡಿಕೊಳ್ತೀವಿ. ಆ ಕುಟುಂಬದಲ್ಲಿ ನಾನೂ ಒಬ್ಬನಾಗಿ ನಿಂತಿದ್ದೇನೆ. ಆದ್ರೂ ಆ ತಾಯಿ-ತಂದೆ ದುಃಖ ನಾವು ತಗೋಳೋಕೆ ಆಗಲ್ಲ ಎಂದು ಶ್ರೀಗಂಧ ಶೇಠ್ ಬೇಸರ ವ್ಯಕ್ತಪಡಿಸಿದ್ದಾರೆ.