Political News: ವಿಜಯಪುರದಲ್ಲಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಲೆಗೆ ಸಂಚು ರೂಪಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಅಲ್ಲದೆ ಇದಕ್ಕೆ ಸಂಬಂಧಿಸಿದ್ದಂತೆ ಮುಸ್ಲಿಂ ಯುವಕರು ಆಡಿಯೋ ಹಾಗೂ ವಿಡಿಯೋ ಹರಿಬಿಟ್ಟಿದ್ದರು. ಆದರೆ ಇದೇ ವಿಚಾರಕ್ಕೆ ಬೋಲ್ಡ್ ಆಗಿಯೇ ವಿರೋಧಿಗಳಿಗೆ ಖುದ್ದು ಶಾಸಕ ಯತ್ನಾಳ್ ಎಚ್ಚರಿಕೆ ನೀಡಿದ್ದಾರೆ.
ಕ್ರಾಂತಿಕಾರಿಗಳ ರಕ್ತ ಹರಿಯುತ್ತಿದೆ..
ಈ ಕುರಿತು ವಿಜಯಪುರದಲ್ಲಿ ಮಾತನಾಡಿರುವ ಅವರು, ನನ್ನಲ್ಲಿ ಕ್ರಾಂತಿಕಾರಿಗಳಾದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಅವರ ರಕ್ತ ಹರಿಯುತ್ತಿದೆ. ಕರ್ನಾಟಕದಲ್ಲಿನ ಹಿಂದೂಗಳು ನನ್ನ ಜೊತೆಗೆ ಇದ್ದಾರೆ. ಹೀಗಿರುವಾಗ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನನ್ನು ಮುಗಿಸಲು ಯತ್ನಿಸಿದರೆ ಕರ್ನಾಟಕದಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಈ ಕೇಸ್ ಎನ್ಐಗೆ ನೀಡಲಿ..!
ಇನ್ನೂ ಏಪ್ರಿಲ್ 15 ಕೊನೆಯ ದಿನ ಎಂಬ ಆಡಿಯೋ ಹರಿಬಿಟ್ಟಿದ್ದ ಕಿಡಿಗೇಡಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಳಿಕ ಇದರ ಹಿಂದೆ ಯಾರೆಲ್ಲ ಇದ್ದಾರೆ ಎನ್ನುವ ವಿಚಾರ ಬಯಲಾಗಲಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ಮಾಡಲು ಆಗದಿದ್ದರೆ ಕೇಂದ್ರ ತನಿಖಾ ಸಂಸ್ಥೆ ಎನ್ಐಎಗೆ ಒಪ್ಪಿಸಲಿ ಎಂದು ಯತ್ನಾಳ್ ಒತ್ತಾಯಿಸಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ರಾಮನವಮಿಯಂದು ಮಹಮ್ಮದ್ ಪೈಗಂಬರ್ ಅವರ ಅವಹೇಳನದ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಕಾರ್ಯಕ್ರಮದಲ್ಲಿ ನಾನು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಹೆಸರನ್ನು ಎಲ್ಲಿಯೂ ತೆಗೆದುಕೊಂಡಿಲ್ಲ. ಮಹಮ್ಮದ್ ಅಲಿ ಜಿನ್ನಾ ಅಂತ ಹೇಳಲು ಹೋಗಿ ಮಾತಿನ ವೇಗದಲ್ಲಿ ಮಹಮ್ಮದ್ ಎಂದು ಹೇಳಿದೆ. ನಾನು ಎಲ್ಲಿಯೂ ಇಸ್ಲಾಂ ಧರ್ಮ ಸಂಸ್ಥಾಪಕರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಯತ್ನಾಳ್ ಸ್ಪಷ್ಟ ಪಡಿಸಿದ್ದಾರೆ.
ನಮ್ಮ ಸಂಸ್ಕೃತಿ ಅದನ್ನು ಹೇಳಿಲ್ಲ..
ನಮ್ಮ ಧರ್ಮದಲ್ಲಿ ಹಿರಿಯರ ಆದಿಯಾಗಿ ಎಲ್ಲರೂ ಒಳ್ಳೆಯದನ್ನೇ ಹೇಳಿಕೊಂಡು ಬಂದಿದ್ದಾರೆ. ಅದರಲ್ಲೂ ಈ ಧರ್ಮದ ವಿಚಾರಗಳಲ್ಲೂ ಸಹ ಅಷ್ಟೇ ಇನ್ನೊಂದು ಧರ್ಮವನ್ನು ಹೀಯಾಳಿಸುವುದು, ಅವಮಾನಿಸುವುದ ಸಂಸ್ಕೃತಿಯನ್ನು ಹೇಳಿಕೊಟ್ಟಿಲ್ಲ. ನಮ್ಮ ಹಿಂದೂ ದೇವರಾದ ರಾಮ, ಕೃಷ್ಣಸರಸ್ವತಿಯನ್ನು ಅವಮಾನಿಸುತ್ತಿರುವವರು ಯಾರು..? ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಪೈಗಂಬರ್ ವಿಚಾರವನ್ನು ಕಾಂಗ್ರೆಸ್ನವರನ್ನು ಬಿಟ್ಟರೇ ಬೇರೆ ಯಾರೂ ಮಾತನಾಡಿಲ್ಲ. ವಿಜಯಪುರ ನಗರದಲ್ಲಿ ಗೂಂಡಾಗಿರಿ, ಹಫ್ತಾ ವಸೂಲಿ ಮಾಡಲು ಆಗದೇ ಹತಾಶರಾಗಿರುವ ಕಾಂಗ್ರೆಸ್ನವರು ಪೈಗಂಬರ್ ನೆಪ ಮಾಡಿಕೊಂಡು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಯತ್ನಾಳ್ ಕೌಂಟರ್ ನೀಡಿದ್ದಾರೆ.

