- Advertisement -
Dharwad News: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಬೆಣಚಿ ಗ್ರಾಮದ ಸುಮಾರು ೧೫ ವರ್ಷಗಳ ಬಳಿಕ ಗ್ರಾಮದ ದೇವಿ ಜಾತ್ರೆ ನಡೆದಿದೆ. ಗ್ರಾಮದ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವದಲ್ಲಿ ಎರಡು ದಿನ ಹೊನ್ನಾಟ ಆಯೋಜನೆ ಮಾಡಲಾಗಿತ್ತು.
ಮೊದಲ ದಿನ ದೇವಿಯ ಭವ್ಯ ಕಳೆ, ಗತ್ತು ಹಾಗೂ ಭಂಡಾರದ ಒಕುಳಿ ಮಾಡಲಾಯಿತು. ಭಂಡಾರ ಪ್ರೀಯೆಯಾದ ಗ್ರಾಮ ದೇವಿಯನ್ನು ಹೊತ್ತ ಭಕ್ತರು ಗ್ರಾಮದ ತುಂಬೆಲ್ಲಾ ಹೊನ್ನಾಟವಾಡಿದರು. ಈ ವೇಳೆ ಗ್ರಾಮದ ಭಕ್ತರು ಕೂಡಾ ಭಂಡಾರ ಎರಚಿ ಸಂತೋಷ ಪಟ್ಟರು. ಗ್ರಾಮದ ಇಡಿ ಒಣಿಗಳೆಲ್ಲಾ ಹಳದಿ ಬಣ್ಣದಿಂದ ಕುಡಿದ್ದವು.
ಯುವಕರು ಹಳದಿ ಕುರ್ತಾ ಹಾಕಿ ಜಾತ್ರೆಗೆ ಬಂದಿದ್ದರೆ, ಮಹಿಳೆಯರು ಕೂಡಾ ಹಳದಿ ಸೀರೆಯನ್ನುಟ್ಟು ಜಾತ್ರೆ ಸಂಭ್ರಮಿಸಿದರು. ದೇವಿಯ ಈ ಹೊನ್ನಾಟಕ್ಕೆನೇ 50 ಟನ್ ಗಳಷ್ಟು ಭಂಡಾರ ತರಿಸಲಾಗಿತ್ತು. ಸುಡು ಬಿಸಿಲನ್ನ ಲೆಕ್ಕಿಸದೇ ಗ್ರಾಮದ ಜನ ಹಾಗೂ ಅಕ್ಕ ಪಕ್ಕದ ಗ್ರಾಮಸ್ಥರು ಜಾತ್ರೆಯಲ್ಲಿ ಭಾಗವಹಿಸಿದ್ದರು.
- Advertisement -