Canada News: ಕೆನಡಾದಲ್ಲಿ ಭಾರತೀಯ ವಿದ್ಯಾರ್ಥಿನಿ ಗುಂಡೇಟಿಗೆ ಬಲಿ..

Canada News: ಕೆನಡಾದ ಒಂಟಾರಿಯೋದ ಹ್ಯಾಮಿಲ್ಟನ್‌ನಲ್ಲಿ ಬುಧವಾರ ಸಂಜೆ ನಡೆದ ಹಿಂಸಾಚಾರದಲ್ಲಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಹರ್ಸಿಮೃತ್‌ ಕೌರ್ ರಾಂಧವಾ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ. ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯುವಾಗ ಈ ಯುವತಿಗೆ ಗುಂಡು ತಗುಲಿದೆ.

ಕಪ್ಪು ಸೆಡಾನ್ ಮತ್ತು ಬಿಳಿ ಸೆಡಾನ್ನಲ್ಲಿ ಪ್ರಯಾಣಿಸುತ್ತಿದ್ದವರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಈ ವೇಳೆ ಹರ್ಸಿಮೃತ್ ಕೌರ್‌ಗೆ ಗುಂಡು ತಗುಲಿದೆ. ಆಕೆ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಲು ಪ್ರಯತ್ನಿಸಲಾಯಿತಾದರೂ, ಗುಂಡು ಎದೆಗೆ ತಾಕಿದ್ದರಿಂದ, ಕೌರ್ ಅದಾಗಲೇ ಮೃತಪಟ್ಟಿದ್ದಳು ಎಂದು ವೈದ್ಯರು ತಿಳಿಸಿದ್ದಾರೆ.

2 ವರ್ಷದ ಹಿಂದೆ ಉನ್ನತ ವ್ಯಾಸಂಗಕ್ಕಾಗಿ ಕೆನಡಾಗೆ ಹೋಗಿದ್ದ ಕೌರ್, ಹ್ಯಾಮಿಲ್ಟನ್‌ನ ಮೊಹಾಕ್ ಕಾಲೇಜು ವಿದ್ಯಾರ್ಥಿನಿಯಾಗಿದ್ದರು. ಪಂಜಾಬ್‌ನ ಟಾರ್ನ್ ತರನ್‌ ಜಿಲ್ಲೆಯ ಧುಂಡಾ ಗ್ರಾಮದ ರಾಂಧವಾ ಅವರ ಕುಟುಂಬವು ತಮ್ಮ ಮಗಳ ಶವವನ್ನು ಭಾರತಕ್ಕೆ ಮರಳಿ ತರಲು ಭಾರತ ಸರ್ಕಾರಕ್ಕೆ ಮನವಿ ಮಾಡಿದೆ.

About The Author