Gujrat News: ಸಾಹಸಿ ಪೈಲಟ್ ಸ್ಮಿತ್‌ ಮಚ್ಚಾರ್‌ಗೆ ಗುಜರಾತ್ ಗರೀಮಾ ಪ್ರಶಸ್ತಿ ಘೋಷಣೆ

Gujrat News: ಓಮನ್ ವಿಮಾನದಲ್ಲಿ ಭಯೋತ್ಪಾದಕರ ಜತೆ ಸೇರಿ ಕೋ ಪೈಲಟ್ ಮಾಡಿದ್ದ ಸಂಚನ್ನು ವಿರೋಧಿಸಿ, ಅವರನ್ನೆಲ್ಲ ಎದುರಿಸಿ, ತನ್ನ ಜೀವಕ್ಕೆ ಅಪಾಯವಿದ್ದರೂ 174ಕ್ಕೂ ಹೆಚ್ಚು ಇಸ್ರೇಲ್ ಪ್ರಜೆಗಳ ಜೀವ ಉಳಿಸಿರುವ ಸ್ಮಿತ್ ಮಚ್ಚಾರ್‌ಗೆ ಗುಜರಾತ್ ಸರ್ಕಾರ ಪ್ರಶಸ್ತಿ ಘೋಷಿಸಿದೆ.

ಮಚ್ಛರ್ ಅವರ ಅಸಾಧಾರಣ ಶೌರ್ಯ ಗೌರವಿಸಲು ಗುಜರಾತ್ ಸರ್ಕಾರ ಸ್ಮಿತ್ ಅವರನ್ನು ಗೌರವಿಸಲು ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ವಿಶಿಷ್ಟ ಗುಜರಾತ್ ಗರೀಮಾ ಪ್ರಶಸ್ತಿ ನೀಡುತ್ತೇವೆ ಎಂದು ಘೋಷಿಸಿದ್ದಾರೆ.

ಸ್ಮಿತ್ ಮಚ್ಚಾರ್ ಗುಜರಾತ್‌ನವರಾಗಿದ್ದು, ಈ ಕಾರಣಕ್ಕೆ ತನ್ನ ರಾಜ್ಯದ ಧೀರನಿಗಾಗಿ ಅಲ್ಲಿನ ಸರ್ಕಾರ ಈ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಕೂಡ ಇವರ ಶೌರ್ಯವನ್ನು ಶ್ಲಾಘಿಸಿದ್ದಾರೆ. ಇವರು ಬೇಗ ಚೇತರಿಸಿಕ“ಳ್ಳಲಿ ಎಂದು ಭಾರತೀಯರು, ಇಸ್ರೇಲಿಗರು ಸೇರಿ ಹಲವರು ಪ್ರಾರ್ಥಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಕೂಡ ಸ್ಮಿತ್ ಧೈರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೇ ಆತನನ್ನು ರಿಯಲ್ ಹೀರೋ ಎಂದು ಹೇಳಿದ್ದಾರೆ.

About The Author