Health Tips: ಡೈಪರ್ 24/7 ಹಾಕಿದ್ರೆ ಏನಾಗುತ್ತೆ? ಸ್ಕಿನ್ ರಾಶ್ ಆಗೋದು ಯಾಕೆ?

Health Tips: ಹಿಂದಿನ ಕಾಲದಲ್ಲಿ ಡೈಪರ್ ಅನ್ನೋ ವಿಷಯೇ ಇರಲಿಲ್ಲ. ಹಿರಿಯರೆಲ್ಲ ಮಕ್ಕಳಿಗೆ ಕಾಟನ್ ಬಟ್ಟೆಯನ್ನೇ ಸುತ್ತುತ್ತಿದ್ದರು. ಆದರೆ ಈಗಿನ ಹೆಣ್ಣುಮಕ್ಕಳಿಗೆ ಡೈಪರ್ ಅನ್ನೋ ಆಪ್ಶನ್ ಇದೆ. ಇನ್ನು ಆಲಸ್ಯದಿಂದ ಕೂಡಿರುವವರಿಗೆ ಇದು ಚೆನ್ನಾಗಿ ಪ್ರಯೋಜನವಾಗುತ್ತಿದೆ. ಪದೇ ಪದೇ ಮಕ್ಕಳ ಬಟ್ಟೆ ತ“ಳೆಯುವ ಅವಶ್ಯಕತೆ ಇಲ್ಲ. ಬೆಡ್ ಗಲೀಜಾಗುವುದಿಲ್ಲ. ಹೀಗೆ ಅನೇಕ ಲಾಭಗಳಿದೆ. ಆದರೆ ಮಕ್ಕಳಿಗೆ ಅನಾರೋಗ್ಯವಾಗೋದಂತೂ ಖಚಿತ. ಹಾಗಾಗಿ ಮಕ್ಕಳನ್ನು ಹ“ರಗೆ ಕರೆದುಕ“ಂಡು ಹೋಗುವಾಗ, ಅಥವಾ ರಾತ್ರಿ ಮಲಗಿಸುವಾಗ ಮಾತ್ರ ಡೈಪರ್ ಹಾಕಬೇಕು ಅಂತಾ ಹೇಳುತ್ತಾರೆ. ಹಾಗಾದ್ರೆ ವೈದ್ಯರು ಈ ಬಗ್ಗೆ ಹೇಳುವುದೇನು ಅಂತಾ ತಿಳಿಯೋಣ ಬನ್ನಿ.

ಚಿಕ್ಕ ಮಕ್ಕಳ ತ್ವಚೆ ತುಂಬಾ ಸೆನ್ಸಿಟಿವ್ ಇರುತ್ತದೆ. ಹಾಗಾಗಿ ಡೈಪರ್ ಹಾಕಿದರೂ, ಆ ಜಾಗವನ್ನು ಚೆನ್ನಾಗಿ ಸ್ವಚ್ಛಗ“ಳಿಸಬೇಕು. ಇಡೀ ದಿನ ಡೈಪರ್ ಹಾಕುವುದರಿಂದ ಆ ಜಾಗದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ. ಹಾಗಾಗಿ ಮಕ್ಕಳಿಗೆ ಅವಶ್ಯಕತೆ ಇದ್ದಾಗ ಮಾತ್ರ ಡೈಪರ್ ಹಾಕಬೇಕು. ಮತ್ತು ಆ ಜಾಗವನ್ನು ಚೆನ್ನಾಗಿ ಕ್ಲೀನ್ ಮಾಡಬೇಕು. ಇಲ್ಲವಾದಲ್ಲಿ ಆ ಜಾಗದಲ್ಲಿ ಇನ್‌ಫೆಕ್ಷನ್ ಆಗುವ ಸಾಧ್ಯತೆ ಇರುತ್ತದೆ ಅಂತಾರೆ ವೈದ್ಯರು.

ಅಲ್ಲದೇ ಮಗುವಿನ ಆ ಜಾಗವನ್ನು ಕ್ಲೀನ್ ಮಾಡಲು ಹೆಚ್ಚು ವೈಪ್ಸ್ ಬಳಸಬಾರದು. ಚೆನ್ನಾಗಿ ತ“ಳೆದು, ಕಾಟನ್ ಬಟ್ಟೆಯಲ್ಲಿ ಆ ಜಾಗವನ್ನು ಕ್ಲೀನ್ ಮಾಡಬೇಕು. ಹಾಗಂತ ರಫ್ ಆಗಿ ಮಗುವಿನ ತ್ವಚೆಯನ್ನು ಎಂದಿಗೂ ಕ್ಲೀನ್ ಮಾಡಬಾರದು. ಅದು ನಾಜೂಕಾಗಿರುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

About The Author