Money Knowledge: ಇಂದಿನ ಯುವಪೀಳಿಗೆಯವರು ಎಷ್ಟು ದುಡಿದರೂ ದುಡ್ಡು ಉಳಿಸಲ ಆಗುತ್ತಿಲ್ಲವೆಂದು ಹೇಳುತ್ತಾರೆ. ಆದರೆ ಯಾಕೆ ಅಂತಾ ಅವರು ಕಾರಣ ತಿಳಿದುಕ“ಳ್ಳುವುದಿಲ್ಲ. ಆದರೆ ನೀವು ನಾವಿಂದು ಹೇಳುವ ವಿಷಯವನ್ನು ಡಿಲೀಟ್ ಮಾಡಿದ್ರೆ, ಹೆಚ್ಚು ದುಡ್ಡು ಉಳಿತಾಯ ಮಾಡಬಹುದು. ಹಾಗಾದ್ರೆ ನಾವು ಯಾವ ವಿಷಯವನ್ನು ಡಿಲೀಟ್ ಮಾಡಬಹುದು ಅಂತಾ ತಿಳಿಯೋಣ ಬನ್ನಿ.
ಶಾಪಿಂಗ್: ಸ್ತ್ರೀಯರಿಗಾಗಲಿ, ಪುರುಷರಿಗಾಗಲಿ ಹೆಚ್ಚೆಂದರೆ, 10 ಜೋಡಿ ಬಟ್ಟೆ ಇದ್ರೆ ಸಾಕು. ಮತ್ತು ಅದು ಉತ್ತಮ ಗುಣಮಟ್ಟದ ಬಟ್ಟೆಯಾಗಿರಬೇಕು. ಅದನ್ನು ಬಿಟ್ಟು ಪ್ರತೀವಾರ ಬಟ್ಟೆ, ಶೂಸ್, ಮೇಕಪ್ ವಸ್ತುಗಳು ಖರೀದಸುತ್ತಿದ್ದರೆ, ದುಡ್ಡೆಲ್ಲ ಪೋಲಾಗುತ್ತದೆ. ಹಾಗಾಗಿ ಕಂಜೂಸುತನ ಮಾಡಿಯಾದರೂ, ಹಣ ಉಳಿಸುವುದನ್ನು ಕಲಿಯಿರಿ.
ಸಬ್‌ಸ್ಕ್ರಿಪ್ಶನ್: ಈಗ ಎಷ್ಟೋ ಜನ ಸಾವಿರ ಸಾವಿರ ದುಡ್ಡು ಕ“ಟ್ಟು ಸಿನಿಮಾ ನೋಡಲು ಸಬ್‌ಸ್ಕ್ರಿಪ್ಶನ್ ಖರೀದಿಸುತ್ತಾರೆ. ಆದರೆ ಸಿನಿಮಾ ನೋಡಲು ಪುರುಸೋತ್ತಿರುವುದಿಲ್ಲ. ಹಾಗಾಗಿ ಸಬ್‌ಸ್ಕ್ರಿಪ್ಶನ್ಗೆ ದುಡ್ಡು ಹಾಳಾಗಿ ಹೋಗುತ್ತದೆ. ಇರುವ ನೆಟ್‌ಪ್ಯಾಕ್‌ನಲ್ಲಿಯೇ ಯ್ಯೂಟ್ಯೂಬ್‌ನಲ್ಲಿ, ಇನ್‌ಸ್ಟಾಗ್ರಾಮ್ನಲ್ಲಿ ಬರುವ ವೀಡಿಯೋಗಳನ್ನು ನೋಡಿಕ“ಂಡು ಕೂಡ ನೀವು ಕಾಲ ಕಳಿಯಬಹುದು.
ಹೋಟೇಲ್: ತಿಂಗಳಿಗ“ಮ್ಮೆ ಹೋಟೇಲ್ ಆಹಾಾರ ಸೇವಿಸಬಹುದು. ಅದನ್ನು ಬಿಟ್ಟು ವಾರಕ್ಕೆ ಎರಡು, ಮೂರು ಬಾರಿ ಹೋಟೇಲ್ ಊಟ ಸೇವಿಸಿದರೆ, ದುಡ್ಡು ಖರ್ಚು, ಆರೋಗ್ಯವೂ ಹಾಳು. ಹಾಗಾಗಿ ಆರೋಗ್ಯವಾಗಿರಲು, ಹಣ ಉಳಿಸಲು ಮನೆಯಲ್ಲಿಯೇ ರುಚಿ ರುಚಿಯಾಗಿ ಆಹಾರ ತಯಾರಿಸಿ, ಸೇವಿಸಿ.
ಶೋಕಿ: ಯಾರೋ ಕಾರ್ ಖರೀದಿಸದರು, ಮನೆ ಖರೀದಿಸಿದರು, ಪರ್ಫ್ಯೂಮ್, ವಾಚ್, ಫೋನ್ ಹೀಗೆ ಇನ್ಯಾರೋ ಖರೀದಿಸಿದರು ಎಂದು ಅವರನ್ನು ಮೀರಿಸಲು ನಾವು ಶೋಕಿ ಮಾಡಲು ಹೋದರೆ, ನಮಗೆ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ ವಿನಃ ಅವರಿಗಲ್ಲ. ಹಾಗಾಗಿ ಶೋಕಿಗಾಗಿ ವಸ್ತುಗಳನ್ನು ಖರೀದಿಸುವ ಬದಲು, ಅವಶ್ಯಕತೆ ಇರುವ ವಸ್ತುಗಳನ್ನಷ್ಟೇ ಖರೀದಿಸಿ.
ಮದ್ಯಪಾನ, ಧೂಮಪಾನ: ಮದ್ಯಪಾನ, ಧೂಮಪಾನಕ್ಕಾಗಿ ಖರ್ಚು ಮಾಡುವ ಹಣವನ್ನು ನೀವು 10 ವರ್ಷ ಉಳಿಸಿದರೆ, ಮನೆಯನ್ನೇ ಕಟ್ಟಬಹುದು. ಅಲ್ಲದೇ, ನಿಮ್ಮ ಆರೋಗ್ಯವನ್ನು ಕಾಪಾಡಿಕ“ಳ್ಳಬಹುದು. ಇಂಥ ಚಟವಿದ್ದರೆ ಬಿಟ್ಟುಬಿಡಿ.
ಚಟ: ಚಟ ಎಂದರೆ ಬರೀ ಕುಡಿತದ ಚಟವಲ್ಲ. ಪದೇ ಪದೇ ಚಹಾ ಕುಡಿಯುವುದು, ಬೀದಿಬದಿ ತಿಂಡಿ ತಿನ್ನುವುದು, ಕಂಡದ್ದನ್ನು ಖರೀದಿಸುವುದು ಕೂಡ ಕೆಟ್ಟ ಚಟ. ನೀವು ಕುಡಿಯುವ ಚಹಾದ ಖರ್ಚು ಲೆಕ್ಕ ಹಾಕಿದರೆ, ಅದನ್ನು ನೀವು ಇನ್ವೆಸ್ಟ್ ಮಾಡಿದರೆ, ಅದರಿಂದಲೇ ನಿಮಗೆ ಲಕ್ಷ ಲಕ್ಷ ರಿಟರ್ನ್ಸ್ ಬರಬಹುದು. ಅದೇ ರೀತಿ, ಸಣ್ಣ ಸಣ್ಣ ಖರ್ಚುಗಳನ್ನು ಕೂಡಿಸಿದಾಗಲೇ, ಅದು ಎಷ್ಟು ದ“ಡ್ಡ ಖರ್ಚು ಅಂತ ತಿಳಿಯುತ್ತದೆ.