ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದವರು ಜಾಸ್ತಿ ದಿನ ಆ ಪಕ್ಷದಲ್ಲಿ ಇರಲ್ಲ: ಶಾಸಕ ಪ್ರಸಾದ್ ಅಬ್ಬಯ್ಯ

Hubli News: ಹುಬ್ಬಳ್ಳಿ: ಶಾಸಕ ಎಸ್ ಟಿ ಸೋಮಶೇಖರ್, ಶಿವರಾಂ ಹೆಬ್ಬಾರ ಬಿಜೆಪಿಯಿಂದ ಅಮಾನತು ವಿಚಾರದ ಬಗ್ಗೆ ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಮಾತನಾಡಿದ್ದು, ಬಿಜೆಪಿಯಲ್ಲಿನ ವ್ಯವಸ್ಥೆ ಅವರಿಬ್ಬರಿಗೂ ಒಗ್ಗಿಲ್ಲ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋದವರು ಅಲ್ಲಿ ಇರಲು ಸಾಧ್ಯವಿಲ್ಲ. ಬಿಜೆಪಿಯಲ್ಲಿನ ಸದ್ಯದ ಪರಿಸ್ಥಿತಿ, ವ್ಯವಸ್ಥೆ , ರಾಜಕೀಯ ಬಗ್ಗೆ ಇವರು ಪ್ರಶ್ನೆ ಮಾಡಿದ್ದರು. ಹೀಗಾಗಿ ಅವರಿಬ್ಬರನ್ನು ಅಮಾನತು ಮಾಡಿದ್ದಾರೆ. ಅವರ ಮುಂದಿನ ನಿರ್ಧಾರ ಏನಾಗಿದೆ ನೋಡೋಣ ಎಂದಿದ್ದಾರೆ.

ಆದರೆ ಅವರು ಕಾಂಗ್ರೆಸ್ ಬಂದ್ರೆ ಯಾವಾಗಲೂ ಸ್ವಾಗತ ಮಾಡುತ್ತೆವೆ. ಅವರು ಒಳ್ಳೆಯ ನಾಯಕತ್ವ ಗುಣ ಹೊಂದಿದ್ದಾರೆ. ನಮ್ಮ ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬಂದ್ರೆ ಸ್ವಾಗತ ಮಾಡುತ್ತೆವೆ. ಬಿಜೆಪಿ ಯಾವ ಕಾರಣಕ್ಕಾಗಿ ಹೋಗಿದ್ದರು ಗೊತ್ತಿಲ್ಲ. ಆದರೆ ಕಾಂಗ್ರೆಸ್ ಬಿಟ್ಟು ಹೋದಾಗಲೆ ಅವರು ಜಾಸ್ತಿ ದಿನ ಅಲ್ಲಿ ಇರಲ್ಲ ಅಂತ ಗೊತ್ತಿತ್ತು.

ಬಿಜೆಪಿಯನ್ನು ಆರ್ ಎಸ್ ಎಸ್ ನಡೆಸುತ್ತೆ. ಕಾಂಗ್ರೆಸ್ ನಿಂದ ಬಿಜೆಪಿಗೆ ಹೋಗಿ ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳವುದು ಕಷ್ಟ. ಸಿದ್ಧರಾಮಯ್ಯ ಅಭಿವೃದ್ಧಿಯನ್ನು ಅವರು ಹೊಗಳಿದ್ದಾರೆ ಇದು ವಾಸ್ತವ. ಇದನ್ನು ಬಿಜೆಪಿ ಸಹಿಸಲು ಆಗಿಲ್ಲ ಹೀಗಾಗಿ ಹೊರಗೆ ಹಾಕಿದ್ದಾರೆ. ಮುಂದೆ ಏನು ಆಗುತ್ತೋ ಕಾದು ನೋಡೋಣ ಎಂದು ಪ್ರಸಾದ್ ಅಬ್ಬಯ್ಯ ಹೇಳಿದ್ದಾರೆ.

About The Author