Thursday, July 31, 2025

Latest Posts

‘ಮಾದೇವ’ ಸಿನಿಮಾ ಯಶಸ್ಸಿಗಾಗಿ ಮಂತ್ರಾಯಲದಲ್ಲಿ ಉರುಳು ಸೇವೆ ಮಾಡಿದ ನಟ

- Advertisement -

Sandalwood News: ತಮ್ಮ ಮುಂದಿನ ಸಿನಿಮಾ ಯಶಸ್ಸು ಕಾಣಲಿ ಎಂದು ನಟ ವಿನೋದ್ ಪ್ರಭಾಕರ್, ಮಂತ್ರಾಲಯಕ್ಕೆ ಬಂದು ಉರುಳು ಸೇವೆ ಮಾಡಿ, ಹರಕೆ ತೀರಿಸಿದ್ದಾರೆ.

ಮಾದೇವ ಸಿನಿಮಾ ತಂಡದ ಜತೆ, ಸಿನಿಮಾ ಯಶಸ್ಸಿಗಾಗಿ ಪ್ರಾರ್ಥಿಸಿ, ರಾಯಚೂರಿನ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ಪ್ರಭಾಕರ್, ಗುರು ರಾಯರ ದರ್ಶನ ಮಾಡಿದ್ದಾರೆ. ಜತೆಗೆ ಉರುಳು ಸೇವೆ ಮಾಡಿ, ಹರಕೆ ತೀರಿಸಿದ್ದಾರೆ,

ಇನ್ನು ಈ ಬಳಿಕ ಮಾತನಾಡಿದ ವಿನೋದ್ ಪ್ರಭಾಕರ್, ನನಗೆ ಮತ್ತು ನಮ್ಮ ತಂದೆಯವರಿಗೆ ಉತ್ತರ ಕರ್ನಾ’’ಕದಿಂದ ಹೆಚ್ಚು ಅಭಿಮಾನಿ ಬಳಗವಿದೆ. ಈ ಕಡೆ ಜನ ನಮಗೆ ತುಂಬಾ ಬೆಂಬಲ ನೀಡುತ್ತಾರೆ. ಮಂತ್ರಾಲಯಕ್ಕೆ ಹೋಗಿ ರಾಯರ ಆಶೀರ್ವಾದ ಪಡೆದಿದ್ದೇವೆ. ಜೂನ್ 6ಕ್ಕೆ ಮಾದೇವ ಸಿನಿಮಾ ತೆರೆಗೆ ಬರುತ್ತಿದೆ. ಎಲ್ಲರೂ ಹರಸಿ ಹಾರೈಸಿ ಎಂದು ಹೇಳಿದ್ದಾರೆ.

ಅಲ್ಲದೇ ತಾನು ರಾಯರು ಮತ್ತು ಬಾಬಾ ಭಕ್ತರಾಗಿದ್ದು, ಗುರುಬಲ ಸಿಗಲಿ ಎಂದು ಹರಕೆ ತೀರಿಸಿದ್ದೇನೆ. ಈ ಮುನ್ನವೇ ಹರಕೆ ಹ“ತ್ತಿದ್ದೆ. ಆದರೆ ಮಂತ್ರಾಲಯಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ವಿನೋದ್ ಪ್ರಭಾಕರ್ ಹೇಳಿದ್ದಾರೆ.

- Advertisement -

Latest Posts

Don't Miss