- Advertisement -
Hubli News: ಹುಬ್ಬಳ್ಳಿ: ಗಬ್ಬೂರ ಕುಂದಗೋಳ ಕ್ರಾಸ್ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಜನ ಆರೋಪಿತರನ್ನು ಬಂಧಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಮತ್ತು ಸಿಸಿಬಿ ವಿಭಾಗದವರು ಆರೋಪಿತರಿಂದ 12.64 ಲಕ್ಷ ರೂ ಮೌಲ್ಯದ 10.5 ಕಿಲೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಂಧಿತ ಮೂವರೂ ಹಾವೇರಿ ಮೂಲದ ಮಹಮ್ಮದ್ ಶಾಹಿದ್ ಎಲಿಗಾರ,( 23), ರೆಹಮಾನ್ ಬೇಗ ಸವಣೂರ, (26) ಮತ್ತು ನಿಸಾರ್ ಅಹ್ಮದ್ ನಾಯ್ಕನವರ,( 44) ಆಗಿದ್ದಾರೆ.
ಇವರಿಂದ 3 ಮೊಬೈಲ್ ಫೋನ್ ಗಳು, ಕೃತ್ಯಕ್ಕೆ ಬಳಸಿದ ಒಂದು ಕಾರ್ ಮತ್ತು ಆಟೋ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸದ್ದಾರೆ.
- Advertisement -