Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾಧ್ಯಮದ ಜತೆ ಮಾತನಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.
ಹುಬ್ಬಳ್ಳಿ ಗಲಭೆಕೋರರ ಪ್ರಕರಣ ವಾಪಸ್ ಪಡೆಯುವ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ರಾಜ್ಯದಲ್ಲಿ ತುಷ್ಠೀಕರಣದ ಪರಾಕಾಷ್ಠೆ ನಡೆಯುತ್ತಿದೆ. ತುಷ್ಠೀಕರಣ ಮೂಲಭೂತವಾದಿಗೆ ಕುಮ್ಮಕ್ಕು ಕೊಡುತ್ತಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ನಿಲುವು ಏನು ಎಂಬುದನ್ನ ಸ್ಪಷ್ಠಪಡಿಸಬೇಕು. ಮಂಗಳೂರು, ರಾಮೇಶ್ವರಂ ಕೆಫೆ ಪ್ರಕರಣದಲ್ಲಿ ಆರಂಭದಲ್ಲೇ ಕ್ಲೀನ್‌ಚಿಟ್ ನೀಡಲಾಯಿತು. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಹೈಕೋರ್ಟ್ ನಿಂದ ಸರ್ಕಾರಕ್ಕೆ ಕಪಾಳಮೋಕ್ಷವಾಗಿದೆ.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಇದೆಯೋ ಇಲ್ಲವೋ ಎಂಬುದನ್ನ ಸ್ಪಷ್ಟಪಡಿಸಬೇಕು. 43 ಕ್ರಿಮಿನಲ್ ಪ್ರಕರಣಗಳನ್ನ ರದ್ಸುಪಡಿಸಲು ಸರ್ಕಾರ ಮುಂದಾಗಿತ್ತು. ಇದನ್ನ ಗಮನಿಸಿದ್ರೆ ಕಾಂಗ್ರೆಸ್ ಸಂಪೂರ್ಣ ಬೆತ್ತಲಾಗಿದೆ. ಇದರಿಂದ ದೇಶದ ಸುರಕ್ಷತೆಗೆ ಧಕ್ಕೆ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಏನು ಮಾಡಲು ಹೊರಟಿದೆ ಅನ್ನೋದೇ ಗೊತ್ತಾಗುತ್ತಿಲ್ಲ. ಪೆಹಲ್ಗಾಂ ಘಟನೆಯ ಹಿನ್ನೆಲೆಯಲ್ಲಿ ಮಾತನಾಡುವುದು ಗಮನಿಸಿಲಾಗಿದೆ. ಯುಪಿಎ ಸರ್ಕಾರ ಇದ್ದಾಗ ಯಾವರೀತಿ ಇತ್ತು ಮೋದಿ ಸರ್ಕಾರ ಬಂದಮೇಲೆ ಯಾವ ರೀತಿ ಇದೆ ಅನ್ನೋದು ಎಲ್ಲವೂ ಇತಿಹಾಸ ಇದೆ. ಮೂಲಭೂತವಾದಿಗಳ ಪ್ರಕರಣವನ್ನ ಹಿಂಪಡೆಯುತ್ತಿರುವುದು ತುಷ್ಠೀಕರಣ ನೀತಿ. ಇದರಿಂದ ದೇಶಕ್ಕೆ , ರಾಜ್ಯಕ್ಕೆ ಒಳ್ಳೆಯದಾಗಲ್ಲ ಎಂದು ಜೋಶಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಪಕ್ಷದ ನಿಲುವು ಏನು..? ಮಂಗಳೂರಿನಲ್ಲಿ ಆರಂಭದಲ್ಲಿ ಕ್ಲೀನ್ ಚೀಟ್ ಕೊಡಲು ಮುಂದಾದ್ರು. ಹಾಗಾಗಿ ಇನ್ ಡೈರೆಕ್ಟ್ ಆಗಿ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಮಂಗಳೂರಿನ ಬಗ್ಗೆ ಬಾಯಿ ಬಂದ ಹಾಗೆ ಮಾತನಾಡುತ್ತಿದ್ದಾರೆ. ಸಂಪುರ್ಣವಾಗಿ ಕಾಂಗ್ರೆಸ್ ಬೆತ್ತಲಾಗಿದೆ. ಮುಂಬೈ ದಾಳಿಯ ಬಗ್ಗೆ ಕಾಂಗ್ರೆಸ್ ಮಾಡಿದ್ದು ಏನು..? ಮುಸ್ಲಿರಿಗೆ ನಾವು ವಿರೋಧ ಮಾಡಿಲ್ಲ. ನಮ್ಮನ್ನ ಇವರು ಏನೂ ಪ್ರಶ್ನೆ ಮಾಡುತ್ತಾರೆ..? ಹಳೆ ಹುಬ್ಬಳ್ಳಿ ಘಟನೆಯನ್ನ ಎನ್‌ಐಎಗೆ ಕೊಡಬೇಕು ಎಂಬುದು ಕೇಳಿ ಬಂದಿತ್ತು. ಆದ್ರೆ ಈಗ ಅದೇ ಕೇಸ್ ನಲ್ಲಿ ಕಪಾಳಮೋಕ್ಷವಾಗಿದೆ ಎಂದು ಜೋಶಿ ಹೇಳಿದ್ದಾರೆ.
ಆಪರೇಶನ್ ಸಿಂದೂರ ಬಗ್ಗೆ ಸಾಕ್ಷಿ ಕೊಡಬೇಕೆಂದು ಬಾಯಿ ಬಂದ ಹಾಗೆ ಕಾಂಗ್ರೆಸ್ ನಾಯಕರು ಮಾತನಾಡುತ್ತಿದ್ದಾರೆ. ಭಾರತ ಗೆದ್ದಿರೋ ಬಗ್ಗೆ ಇಡೀ ದೇಶ ಸಂತಸ ವ್ಯಕ್ತಪಡಿಸಿದ್ರು. ಸಿಂಧು ನದಿ ಒಪ್ಪಂದ ಬಹಳ ಕೆಟ್ಟದ್ದಾಗಿದೆ. ನೀರು ಎಲ್ಲಿ ಇಟ್ಟುಕೊಳ್ಳುತ್ತೀರಿ ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಪದೇ ಪದೇ ಲಾಂಚ್ ಫೇಲ್ ಆಗ್ತಾರೆ. ಪ್ರಧಾನಿ ಮಂತ್ರಿ ಎನ್ನುವ ಸ್ಥಾನದ ಬಗ್ಗೆ ಗಾಂಧಿ ಕುಟುಂಬಕ್ಕೆ ಅಲರ್ಜಿ ಹುಟ್ಟಿದೆ. ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಔಷಧಗಳು ಸಿಗುತ್ತಿಲ್ಲ. ಔಷಧಗಳನ್ನ ಫ್ರೀ ಕೊಡುವುದಾಗಿ ಹೇಳ್ತಾರೆ.
ರಾಜ್ಯದಲ್ಲಿ ಜನೌಷಧಿ ಕೇಂದ್ರಗಳನ್ನ ತಕ್ಷಣ ಓಪನ್ ಮಾಡಿ. ಜನ ಔಷದ ಕೇಂದ್ರದ ಬಗ್ಗೆ ನಮ್ಮ ಪಕ್ಷ ಹೋರಾಟ ಮಾಡುತ್ತದೆ. ಜನರಲ್ಲಿ ಜಾಗೃತಿ ಮೂಡಿಸಿ, ಹೋರಾಟ ಮಾಡುತ್ತೇವೆ. ಪ್ರಧಾನಿ ಹೆಸರಿನ ಬಗ್ಗೆ ನಿಮಗ್ಯಾಕೆ ದ್ವೇಷ..? ಕನ್ನಡ ಶಾಲೆಗಳಿಗೆ ಅಭಿವೃದ್ಧಿ ಕೊಡದೇ ಉರ್ದು ಶಾಲೆಗಳ ಅಭಿವೃದ್ಧಿಗೆ ಕಾಂಗ್ರೆಸ್ ಹಣ ನೀಡುತ್ತಿದೆ. ಆಸ್ಪತ್ರೆಗಳಲ್ಲಿ ಬ್ಯಾಟರಿ ಹಿಡಿದುಕೊಂಡು ಸರ್ಜರಿ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರಿಗೆ ನಾಚಿಗೆ ಆಗಬೇಕು. ಪಾಕಿಸ್ತಾನ ಪರವಾಗಿ ಮಾತನಾಡುತ್ತಾರೆ. ದೇಶ ಈಗ ನಾಲ್ಕನೇ ಸ್ಥಾನದಲ್ಲಿದೆ, ಪಾಕಿಸ್ತಾನಕ್ಕೆ ಹೋಲಿಕೆ ಮಾಡುವುದು ಸರಿಯಲ್ಲ. ಅಧಿವೇಶನ ನಮಗೆ ಯಾವಾಗ ಕರೆಯಬೇಕೆಂದು ಸಂಸದೀಯ ಸಚಿವರು ಮಾತನಾಡುತ್ತಾರೆ. ಕಾಂಗ್ರೆಸ್ ತುಷ್ಟಿಕರಣದ ಬಗ್ಗೆ ಮಾಡುತ್ತಿದೆ. ಜನ ಇದನ್ನ ಒಪ್ಪುವುದಿಲ್ಲ ಎಂದು ಜೋಶಿ ಹೇಳಿದ್ದಾರೆ.
ಕಲ್ಲಡ್ಕ ಪ್ರಭಾಕರ ಮೇಲೆ ಪ್ರಕರಣ ದಾಖಲು ವಿಚಾರದ ಬಗ್ಗೆ ಮಾತನಾಡಿರು ಜೋಶಿ, ನಿಮ್ಮ ಸರ್ಕಾರದಲ್ಲಿ ರೇಪ್ ಮಾಡಿದವರು ಇದ್ದಾರೆ. ಅಂತವರ ಮೇಲೆ ಪ್ರಕರಣ ದಾಖಲು ಮಾಡದೇ ದ್ವೇಷ ಭಾಷಣ ಮಾಡಿದವರ ಮೇಲೆ ಪ್ರಕರಣ ದಾಖಲು ಮಾಡ್ತಾರೆ. ದ್ವೇಷ ಭಾಷಣದ ಬಗ್ಗೆ ವಿಶೇಷ ಕಾನೂನು ರಚನೆ ಮಾಡ್ತಾರಂತ ಮಾಡಲಿ ಎಂದು ಜೋಶಿ ಹೇಳಿದ್ದಾರೆ.
ಇನ್ನು ಕಮಲ್ ಕನ್ನಡದ ಬಗ್ಗೆ ಮಾತನಾಡಿದ ವಿವಾದಾತ್ಮಕ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಜೋಶಿ, ಕಮಲ್ ಹಾಸನ್ ಮಾತನಾಡಿದ್ದು ತಪ್ಪು, ಮಾತನಾಡಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಕನ್ನಡ ಮತ್ತು ತಮಿಳು ಪುರಾತನ ಭಾಷೆ. ಗ್ರೀಕ್‌ನಲ್ಲಿ ಕನ್ನಡದ ಉದಾಹರಣೆಗಳಿವೆ. ತಮಿಳು ಬಗ್ಗೆ ನಾವು ಕೆಟ್ಟದ್ದನ್ನು ನಾವು ಮಾತನಾಡುವುದಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.
ಅಲ್ಪಸಂಖ್ಯಾತ ಇಲಾಖೆಯಲ್ಲಿ ಹಣದುರ್ಬಳಕೆ ಆರೋಪ ವಿಚಾರದ ಬಗ್ಗೆ ಮಾತನಾಡಿರುವ ಜೋಶಿ, ಅಲ್ಪಸಂಖ್ಯಾತ ಅಷ್ಟೇ ಅಲ್ಲದೇ ಎಲ್ಲಾ ಇಲಾಖೆಗಳಲ್ಲಿ ಹಣ ದುರುಪಯೋಗ ಆಗಿದೆ. ಕಾಂಗ್ರೆಸ್‌ನಲ್ಲಿ ಹಣ ತೆಗೆದುಕೊಂಡು ವರ್ಗಾವಣೆಗಳ ಹರಾಜು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.