Sandalwood News: ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ನಟ ಕಮಲ್ ಹಾಸನ್ ಹೇಳಿದ್ದರು. ಇದಕ್ಕಾಗಿ ಕಮಲ್ ಹಾಸನ್ ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕು ಎಂದು ಕೇಳಿದರೂ ಕೂಡ ಕಮಲ್ ನಾನು ಕ್ಷಮೆ ಕೇಳುವುದಿಲ್ಲವೆಂದು ಹೇಳಿದ್ದರು. ಹೀಗಾಗಿ ಅವರ ಥಗ್ ಲೈಫ್ ಚಿತ್ರವನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ಕನ್ನಡ ಚಲನಚಿತ್ರ ಮಂಡಳಿ ನಿರ್ಧರಿಸಿದೆ. ಹೀಗಿರುವಾಗ, ಕನ್ನಡದ ನಟಿ, ರಂಜಿನಿ ರಾಘವನ್ ಕಮಲ್ ಹಾಸನ್ ಅವರನ್ನು ಭೇಟಿಯಾಗಿದ್ದಾರೆ.
ರಂಜಿನಿ ಸುಮ್ಮನೆ ಭೇಟಿಯಾಗಿದ್ದಲ್ಲ. ಬದಲಾಗಿ ಬರಹಗಾರ್ತಿಯಾಗಿರುವ ರಂಜಿನಿ ರಾಘವನ್, ಹಲವು ಪುಸ್ತಕಗಳನ್ನು ಬರೆದು, ಬಿಡುಗಡೆ ಮಾಡಿದ್ದಾರೆ. ಹೀಗೆ ರಂಜಿನಿ ಬರೆದಿರುವ ಪುಸ್ತಕಗಳಲ್ಲಿ ಕಥೆ ಡಬ್ಬಿ ಮತ್ತು ಸ್ವೈಪ್ ರೈಟ್ ಪುಸ್ತಕಗಳೂ ಇದೆ. ಈ ಪುಸ್ತಕಗಳನ್ನೇ ರಂಜಿನಿ ನಟ ಕಮಲ್ ಹಾಸನ್‌ಗೆ ನೀಡಿದ್ದು, ಇದೇ ಪುಸ್ತಕವನ್ನು ರಂಜಿನಿ ಕಮಲ್ ಹಾಸನ್‌ಗೆ ನೀಡಿದ್ದಾರೆ.
ಈ ಪುಸ್ತಕವನ್ನು ಯಾವಾಗ ನೀಡಿದ್ದಾರೆಂದು ರಂಜಿನಿ ಹೇಳಲಿಲ್ಲ. ಆದರೆ ಕಮಲ್ ಸರ್‌ಗೆ ಕನ್ನಡ ಪುಸ್ತಕ ಅನ್ನೋ ಶೀರ್ಶಿಕೆ ನೀಡಿ, ಈ ಫೋಟೋ ಹಾಕಿದ್ದಾರೆ. ಈ ಫೋಟೋಗೆ ಹಲವು ಕಾಮೆಂಟ್ಸ್ ಬಂದಿದ್ದು, ರಂಜಿನಿ ಪೋಸ್ಟ್ಗೆ ಮೆಚ್ಚುಗೆ ಸೂಚಿಸಿದ್ದಾರೆ.