ಮಳೆ‌ಹಾನಿ ಕುರಿತ ಸಭೆಯಲ್ಲಿ ಪಿಡಿಒಗಳಿಗೆ ಸಚಿವರಿಂದ ಸರ್ಪ್ರೈಸ್ ಕಾಲ್: ಕೆಲಸ ಮಾಡದವರಿಗೆ ಅಮಾನತು ಶಿಕ್ಷೆ

Dharwad News: ಧಾರವಾಡ: ಧಾರವಾಡ ಜಿಲ್ಲೆಯಲ್ಲಿ ಮಳೆಹಾನಿಗಳ ಬಗ್ಗೆ ಸಚಿವ ಸಂತೋಷ್ ಲಾಡ್ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕ“ಂಡಿದ್ದಾರೆ.

ಧಾರವಾಡದಲ್ಲಿ ಧಾರಾಕಾರ ಮಳೆಯಾಗಿ ಜನಜೀವನ ಅಸ್ತವ್ಯಸ್ತವಾಾಗಿದೆ. ಹಾಗಾಗಿ ಸಚಿವ ಸಂತೋಷ್ ಲಾಡ್, ಮಳೆಹಾನಿ ಕುರಿತ ಸಭೆ ಕರೆದಿದ್ದಾರೆ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಕುಳಿತ ಸಚಿವರು, ಪಿಡಿಒಗಳಿಗೆ ಸರ್ಪೈಸ್ ಕಾಲ್ ಮಾಡಿದ್ದಾರೆ. ಈ ಮೂಲಕ ಪಿಡಿಒಗಳ‌ ಕಾರ್ಯದರ್ಕ್ಷತೆ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ್ದಾರೆ. ಪಿಡಿಒಗಳಿಗೆ ಕೇಂದ್ರ ಸ್ಥಾನದಲ್ಲೇ ಇರುವಂತೆ ಸೂಚನೆ ನೀಡಲಾಗಿತ್ತು. ಹಾಗಾಗಿ ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇದ್ದಾರೋ ಇಲ್ಲವೋ ಅಂತಾ ಕಾಲ್ ಮಾಡಿ ಚೆಕ್ ಮಾಡಲಾಗಿದೆ.

ಹತ್ತಕ್ಕೂ ಹೆಚ್ಚು ಪಿಡಿಒಗಳಿಗೆ ಸಚಿವರ ಕರೆ ಮಾಡಲಾಗಿದ್ದು, ಫೋನ್ ಕರೆ ಚೆಕ್ ಬಳಿಕ, ಮಳೆ‌ ಮುಗಿಯೋವರೆಗೂ ಕೇಂದ್ರ ಸ್ಥಾನ ಬಿಡಬಾರದು. ಹಳ್ಳಿಯ ಅಧಿಕಾರಿಗಳು ಸ್ಥಳೀಯವಾಗಿಯೇ ಇರಬೇಕು. ಕೇಂದ್ರ ಸ್ಥಾನದಲ್ಲಿ ಇರದ ಅಧಿಕಾರಿಗಳ ಅಮಾನತು ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಲಾಡ್ ಸೂಚಿಸಿದ್ದಾರೆ.

About The Author