ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ: ಯತ್ನಾಳ್ ಗಂಭೀರ ಆರೋಪ

Political News: ರಾಮನಗರದ ಬಿಡದಿಯಲ್ಲಿ ಟೌನ್‌ಶಿಪ್ ವಿಚಾಾರವಾಗಿ, ಭೂಮಿ ನೀಡಿದರೆ ಮಾತ್ರ ಖರೀದಿಸುತ್ತೇವೆ, ಇಲ್ಲದಿದ್ದರೆ, ಒತ್ತಾಯಿಸುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿತ್ತು. ಆದರೆ ಇದೀಗ ಅನುಮೋದನಾ ಪತ್ರ ವೈರಲ್ ಆಗಿತ್ತು, ಕಾಂಗ್ರೆಸ್ ಸರ್ಕಾರ ಡಬಲ್ ಗೇಮ್ ಆಡುತ್ತಿದೆ ಎಂದು ಪ್ರತಿಪಕ್ಷ ನಾಯಕರು ಆರೋಪಿಸಿದ್ದಾರೆ.

ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಹಿರಿಯ ನಾಯಕ ಯತ್ನಾಳ್, ಬಿಡದಿ ಟೌನ್ ಶಿಪ್ ಯೋಜನೆ ಸಂಬಂಧ ಸಮಿತಿ ರಚನೆ ಮಾಡುತ್ತೇವೆ ಹಾಗೂ ಸಮಿತಿಯ ಶಿಫಾರಿಸಿನಂತೆ ಸರ್ಕಾರ ನಡೆದುಕೊಳ್ಳುತ್ತದೆ ಎಂದು ಮುಖ್ಯ ಮಂತ್ರಿಗಳು ಹೇಳಿದ್ದಾರೆ. ಸ್ವ-ಇಚ್ಛೆ ಇಂದ ಭೂಮಿ ಕೊಟ್ಟರೆ ಮಾತ್ರ ಭೂ ಸ್ವಾಧೀನ ಎಂದು ಹೇಳಿದ್ದಾರೆ. ಕೊಡದ ಜಮೀನಿಗೆ ಒತ್ತಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಆದರೆ, ಬಿಡದಿಯ ನಾಲಕ್ಕು ಗ್ರಾಮಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಬಿಡದಿ ಹೋಬಳಿಯ ಬನ್ನಿಗಿರಿ, ಅಲ್ಲಸಂದ್ರ ಮತ್ತು ಕೆಜಿ ಗೊಲ್ಲರಪಾಳ್ಯದಲ್ಲಿ ಗುರುತಿಸಿರುವ ಜಮೀನನ್ನು ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ‘ನೀನು ಸತ್ತಂಗೆ ಮಾಡು, ನಾನು ಅತ್ತಂಗೆ ಮಾಡ್ತೀನಿ’ ಎಂಬಂತೆ ಮುಖ್ಯ ಮಂತ್ರಿಗಳು ಮಾಡಿದ ಮಾಧ್ಯಮ ಗೋಷ್ಠಿ ಕೇವಲ ಕಣ್ಣೊರಿಸುವ ತಂತ್ರವಷ್ಟೇ ಎಂದು ಯತ್ನಾಳ್ ಆರೋಪಿಸಿದ್ದಾರೆ.

ಸರ್ಕಾರ ಈಗಾಗಲೇ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಂಡಿಯೂರಿದೆ. ಟೌನ್ ಶಿಪ್ ಯೋಜನೆ ವಿರುದ್ಧ ಸ್ವಪಕ್ಷದವರೇ ಬೇಸರ, ಕಳವಳ ಹಾಗೂ ರಾಜಕೀಯ ಹಿನ್ನೆಡೆ ಹಾಗೂ ರೈತರ ಹೋರಾಟ ದಿನೇ ದಿನೇ ಬಲಪಡೆದುಕೊಳ್ಳುತ್ತಿರುವ ನಿಟ್ಟಿನಲ್ಲಿ ಹೊಸ ‘ಸಮಿತಿಯ ‘ ರಚನೆಗೆ ಮುಖ್ಯ ಮಂತ್ರಿಗಳು ಮುಂದಾಗಿದ್ದು ‘ಬೀಸೋ ದೊಣ್ಣೆ ತಪ್ಪಿದ್ರೆ ಸಾವಿರ ವರ್ಷ ಆಯಸ್ಸು’ ಎಂಬಂತೆ ತಾತ್ಕಾಲಿಕವಾಗಿ attention diversion ಮಾಡುವ ಯತ್ನ ಮಾಡಿದ್ದಾರೆ.

ಬಿಡದಿ ಭೂ ಸ್ವಾಧೀನದ ವಿರುದ್ಧ ಹೋರಾಟ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಸರ್ಕಾರ ಮಾಡಿರುವ ಎಲ್ಲ ಅಧಿಸೂಚನೆಗಳನ್ನು ಈ ಕೂಡಲೇ ಹಿಂಪಡೆಯಬೇಕು ಹಾಗೂ ರೈತರ ಮೇಲೆ ಹಾಕಿರುವ ಕೇಸುಗಳನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.

About The Author