Thursday, July 31, 2025

Latest Posts

ಶಾಸಕರ ಮಾತನ್ನು ಆಲಿಸಿ, ಅವರ ಸಮಸ್ಯೆಯನ್ನು ಮಂತ್ರಿಗಳು ಬಗೆಹರಿಸಬೇಕು: ಡಿ.ಕೆ.ಸುರೇಶ್

- Advertisement -

Political News: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ ಎಂದಿದ್ದಾರೆ.

ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸುತ್ತಿಲ್ಲವೆಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸುರೇಶ್, ಶಾಸಕರ ಸಮಸ್ಯೆಗಳಿಗೆ ಮಂತ್ರಿಗಳು ಸ್ಪಂದಿಸಬೇಕು. ಶಾಸಕರು ಕೂಡ ಸಾರ್ವಜನಿಕ ಜೀವನದಲ್ಲಿ ಇರುವವರು. ಅವರ ಆಹ್ವಾನವನ್ನು ಪರಿಶೀಲನೆ ಮಾಡಬೇಕಾಗಿರುವುದು ಆಡಳಿತದಲ್ಲಿ ಇರುವವರ ಕರ್ತವ್ಯ. ಇವರು ಒತ್ತಡದಲ್ಲಿ ಇರುತ್ತಾರೆ. ಅವರು ಸಮಸ್ಯೆಯಲ್ಲಿ ಇರುತ್ತಾರೆ. ಸರ್ಕಾರ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ನಾನು ಚುನಾವಣಾ ಮುಂಚಿತವಾಗಿ ಮತ್ತು ನಂತರ ನಮ್ಮ ಲೋಕಸಭಾ ಕ್ಷೇತ್ರದ ಜನರಿಗೆ ಸಾಕಷ್ಟು ಭರವಸೆಗಳನ್ನು ನೀಡಿದ್ದೇನೆ. ಇವತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವಂಥ ಸಂದರ್ಭದಲ್ಲಿ, ನಾನು ಸೋತರೂ ಕೂಡ, ಜವಾಬ್ದಾರಿಯಿಂದ ನೀಡಿದ ಮಾತನ್ನು ನಿಭಾಯಿಸುತ್ತಿದ್ದೇನೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

ಎಲ್ಲ ಕೆಲಸವೂ ಮಾಡಲಾಗದಿದ್ದರೂ, ನನ್ನ ಇತಿ,ಮಿತಿಯಲ್ಲಿ ಇರುವ ಕೆಲಸಗಳನ್ನು ನಾನು ಮಾಡುತ್ತೇನೆ. ನಮ್ಮ ಸಿಎಂ, ಡಿಸಿಎಂ, ಸರ್ಕಾರದ ಸಹಾಯದಿಂದ ಏನೆಲ್ಲ ಮಾಡಲು ಸಾಧ್ಯವಿದೆಯೋ, ಅದೆಲ್ಲ ಕೆಲಸಗಳನ್ನು ನಾನು ಮಾಡುತ್ತೇನೆ ಎಂದು ಸುರೇಶ್ ಹೇಳಿದ್ದಾರೆ.

- Advertisement -

Latest Posts

Don't Miss