Wednesday, June 25, 2025

Latest Posts

Gadag News: ಬೆಳ್ಳಂಬೆಳಿಗ್ಗೆ ಭ್ರಷ್ಟ ಇನ್ಸ್‌ಪೆಕ್ಟರ್‌ಗೆ ಲೋಕಾಯುಕ್ತ ಶಾಕ್: 7 ಜಾಗಗಳಲ್ಲಿ ರೇಡ್

- Advertisement -

Gadag News: ಗದಗ: ಭ್ರಷ್ಟ ಇನ್ಸಪೆಕ್ಟರ್ ಗೆ ಲೋಕಾ ಶಾಕ್ ನೀಡಿದ್ದು, ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಹಿನ್ನೆಲೆ, ಆತನ ಮನೆ ಮೇಲೆ ರೇಡ್ ಮಾಡಲಾಗಿದೆ.

ಗದಗ ಶಹರ ಪೊಲೀಸ್ ಠಾಣೆ ಸಿಪಿಐ ಡಿ ಬಿ ಪಾಟೀಲ್‌ಗೆ ಸೇರಿದ, ಗದಗ ನಗರದ ಶಿವಾನಂದ ನಗರದ ಬಾಡಿಗೆ ಮನೆ ಮತ್ತು ಕಚೇರಿ ಮೇಲೆ, ಇಂದು ಬೆಳ್ಳಂಬೆಳಿಗ್ಗೆ ಅಧಿಕಾರಿಗಳು  ಈ ದಾಳಿ ನಡೆಸಿದ್ದಾರೆ. ಅಲ್ಲದೇ ಈತನಿಗೆ ಸೇರಿದ 7 ಜಾಗಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಪಿಐ ಡಿ ಬಿ ಪಾಟೀಲ್ ಗೆ ಸೇರಿದ ಬಾಗಲಕೋಟೆ, ಜಮಖಂಡಿ, ಕೆರೂರ ಮನೆಗಳ ಮೇಲೂ ದಾಳಿ ಮಾಡಿ, ಲೋಕಾಯುಕ್ತ ಅಧಿಕಾರಿಗಳು ಇಂಚಿಂಚು ಪರಿಶೀಲನೆ ನಡೆಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ, ಪಿ ಎಸ್ ಪಾಟೀಲ, ಸಿಪಿಐ ಪರಶುರಾಮ ಕವಟಗಿ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.

- Advertisement -

Latest Posts

Don't Miss